Skip to main content
ವಿಡಿಯೋ
1/3
cinema

ಜೈಲಲ್ಲಿ ಉಗ್ರರಿಗಿರೋ ಕಿಮ್ಮತ್ತು ಕೂಡ ಇಲ್ಲ ದರ್ಶನ್‌ಗೆ...ಬೇರೆ ಕೈದಿಗಳಿಗೆ ಟಿವಿ, ಕೇರಂ ಎಲ್ಲಾ ಇದೆ ಎಂದ ವಕೀಲರು!

By Ram Chethan
 ಜೈಲಲ್ಲಿ ಉಗ್ರರಿಗಿರೋ ಕಿಮ್ಮತ್ತು ಕೂಡ ಇಲ್ಲ ದರ್ಶನ್‌ಗೆ...ಬೇರೆ ಕೈದಿಗಳಿಗೆ ಟಿವಿ, ಕೇರಂ ಎಲ್ಲಾ ಇದೆ ಎಂದ ವಕೀಲರು!

ನಟ ದರ್ಶನ್‌ ಪರ ವಕೀಲರು ಮೂಲಭೂತ ಸೌಲಭ್ಯಗಳ ಕೊರತೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಪಾಕಿಸ್ತಾನಿ ಉಗ್ರರಿಗೆ ಐಷಾರಾಮಿ ಸೌಲಭ್ಯಗಳಿರುವಂತೆ ಆರೋಪಿಸಿದ್ದಾರೆ. ವಿಚಾರಣೆ ಸೆಪ್ಟೆಂಬರ್ 19ಕ್ಕೆ ಮುಂದೂಡಲಾಗಿದ್ದು, ದರ್ಶನ್‌ ಪರ ಪ್ರತಿನಿಧಿಗಳು ನ್ಯಾಯಾಲಯದ ಮುಂದೆ ಹೋರಾಟ ಮುಂದುವರಿಸುತ್ತಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್‌ ಅವರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದುರಾಗಿದೆ ಎಂದು ಅವರ ವಕೀಲ ಎಸ್‌. ಸುನೀಲ್‌ ಕುಮಾರ್‌ ಬುಧವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ದರ್ಶನ್‌ ಅವರನ್ನು ಬಂಧಿಸಿರುವ ಸೆಲ್‌ನ ಪಕ್ಕದಲ್ಲಿಯೇ ಪಾಕಿಸ್ತಾನಿ ಉಗ್ರರನ್ನು ಇರಿಸಲಾಗಿದ್ದು, ಅವರಿಗೆ ಟಿವಿ, ಕೇರಂ ಬೋರ್ಡ್‌ನಂತಹ ಐಷಾರಾಮಿ ಸೌಲಭ್ಯಗಳು ಲಭ್ಯವಿವೆ ಎಂದು ವಕೀಲರು ಆರೋಪಿಸಿದ್ದಾರೆ.

ಆದರೆ, ದರ್ಶನ್‌ಗೆ ಹಾಸಿಗೆ, ಹೊದಿಕೆ ಮತ್ತು ತಲೆದಿಂಬುಗಳಂತಹ ಅತ್ಯಂತ ಕನಿಷ್ಠ ಸೌಲಭ್ಯಗಳನ್ನು ಸಹ ನೀಡಲಾಗುತ್ತಿಲ್ಲ ಎಂದು ಸುನೀಲ್‌ ಕುಮಾರ್‌ ನ್ಯಾಯಾಲಯದ ಮುಂದೆ ಹೇಳಿದರು. ಈ ಕುರಿತು ನ್ಯಾಯಾಲಯ ಆದೇಶ ನೀಡಿದ್ದರೂ, ಜೈಲು ಅಧಿಕಾರಿಗಳು ಕನಿಷ್ಠ ಸೌಲಭ್ಯಗಳನ್ನು ಒದಗಿಸಿಲ್ಲ ಎಂದು ಆರೋಪಿಸಿ, ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ದರ್ಶನ್‌ ಪರ ವಕೀಲರು 64ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.Puma Unisex Adult Clyde OG 75Y PRM Sneaker

ಬುಧವಾರ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶ ಐ.ಪಿ. ನಾಯ್ಕ್‌, ಈ ವಿಷಯವನ್ನು ಆಲಿಸಿದರು. ಜೈಲು ಅಧಿಕಾರಿಗಳ ಪರ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕರು, ದರ್ಶನ್‌ಗೆ ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳನ್ನು ಈಗಾಗಲೇ ಕಲ್ಪಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.ಇದನ್ನು ಓದಿ:ವೈರಲ್ ವಯ್ಯಾರಿ ಬಿಟ್ಟ 'ಹೂಬಾಣ'ದಿಂದ ಬಂತಂತೆ ಸಿನಿಮಾ ಆಫರ್...ಆದ್ರೂ ಕಣ್ಣೀರಿಟ್ಟಿದ್ಯಾಕೆ ಸಾಂಗ್ ಸುಂದರಿ?

ಆದರೆ, ವಕೀಲ ಸುನೀಲ್‌ ಕುಮಾರ್‌ ಈ ವಾದವನ್ನು ತೀವ್ರವಾಗಿ ವಿರೋಧಿಸಿದರು. ನ್ಯಾಯಾಲಯದ ಆದೇಶದ ನಂತರವೂ ದರ್ಶನ್‌ಗೆ ಯಾವುದೇ ಸೌಲಭ್ಯಗಳನ್ನು ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಭದ್ರತೆಯ ನೆಪದಲ್ಲಿ ದರ್ಶನ್‌ ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು. ಪಾಕಿಸ್ತಾನದ ಉಗ್ರರಿಗೆ ಐಷಾರಾಮಿ ಸೌಲಭ್ಯಗಳನ್ನು ನೀಡುತ್ತಿರುವ ಬಗ್ಗೆ ವಿಡಿಯೊ ಸಾಕ್ಷ್ಯಗಳಿದ್ದು, ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ತಾವು ಸಿದ್ಧರಿರುವುದಾಗಿ ವಕೀಲರು ಹೇಳಿದರು.

ಕಾರಾಗೃಹಗಳ ಕೈಪಿಡಿ ಪ್ರಕಾರ ದರ್ಶನ್‌ಗೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವಂತೆ ನ್ಯಾಯಾಲಯವೇ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಿದೆ ಎಂದು ಸುನೀಲ್ ಕುಮಾರ್‌ ನೆನಪಿಸಿದರು. ಆದರೆ, ಜೈಲು ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಪಾಲಿಸುತ್ತಿಲ್ಲ ಮತ್ತು ಅದನ್ನು ಹಗುರವಾಗಿ ಪರಿಗಣಿಸಿದ್ದಾರೆ ಎಂದು ಅವರು ಆಕ್ಷೇಪಿಸಿದರು. ಅಗತ್ಯವೆಂದು ಭಾವಿಸಿದರೆ, ಜೈಲು ಅಧಿಕಾರಿಗಳು ನೀಡಿರುವ ಸೌಲಭ್ಯಗಳ ಕುರಿತು ದರ್ಶನ್‌ ಅವರಿಂದಲೇ ಮಾಹಿತಿ ಪಡೆಯಿರಿ ಎಂದು ವಕೀಲರು ನ್ಯಾಯಾಧೀಶರಿಗೆ ಮನವಿ ಮಾಡಿದರು.