Skip to main content
ವಿಡಿಯೋ
1/3
cinema

ಸೆಪ್ಟೆಂಬರ್ 18: ವಿಷ್ಣುವರ್ಧನ್ 75ನೇ ಜನ್ಮದಿನ, ಉಪೇಂದ್ರ-ಶ್ರುತಿಗೂ ಬರ್ತಡೇ ಸಂಭ್ರಮ...ಚಿತ್ರರಂಗದಲ್ಲಿ ಗೌರವಾಚರಣೆ!

By Ram Chethan
ಸೆಪ್ಟೆಂಬರ್ 18: ವಿಷ್ಣುವರ್ಧನ್ 75ನೇ ಜನ್ಮದಿನ, ಉಪೇಂದ್ರ-ಶ್ರುತಿಗೂ ಬರ್ತಡೇ ಸಂಭ್ರಮ...ಚಿತ್ರರಂಗದಲ್ಲಿ ಗೌರವಾಚರಣೆ!

ಕನ್ನಡ ಚಿತ್ರರಂಗದ ಮಹತ್ವದ ದಿನ ಸೆಪ್ಟೆಂಬರ್ 18ರಂದು ಸಾಹಸಸಿಂಹ ಡಾ.ವಿಷ್ಣುವರ್ಧನ್‌ರ 75ನೇ ಜನ್ಮದಿನಕ್ಕೆ ವಿಷ್ಣು ದರ್ಶನ ಕೇಂದ್ರದ ನೀಲಿ ನಕ್ಷೆ ಅನಾವರಣ, ರಿಯಲ್ ಸ್ಟಾರ್ ಉಪೇಂದ್ರರ ಕತ್ರಿಗುಪ್ಪೆಯಲ್ಲಿ ಬೈಕ್ ಅನಾವರಣ, ನಟಿ ಶ್ರುತಿಯ 50ನೇ ಜನ್ಮದಿನಕ್ಕೆ ಇಸ್ಕಾನ್ ಟೆಂಪಲ್‌ನಲ್ಲಿ ಆಚರಣೆ ನಡೆಯುತ್ತಿದೆ. ಅಭಿಮಾನಿಗಳು ಸುದೀಪ್, ಆರ್.ಚಂದ್ರು ಸೇರಿದಂತೆ ಚಿತ್ರರಂಗದವರೊಂದಿಗೆ X ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳು ಸುರಿಸುತ್ತಿದ್ದಾರೆ.

ಸೆಪ್ಟೆಂಬರ್ 18, ಕನ್ನಡ ಚಿತ್ರರಂಗದಲ್ಲಿ ಮಹತ್ವದ ದಿನ. ಸಾಹಸಸಿಂಹ ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ಜನಪ್ರಿಯ ನಟಿ ಶ್ರುತಿ ಅವರ ಜನ್ಮದಿನದ ಸಂಭ್ರಮ ಈ ದಿನ ಮನೆ ಮಾಡಿದೆ. ಈ ಮೂವರು ಕಲಾವಿದರ ವಿಶೇಷ ದಿನವನ್ನು ಅಭಿಮಾನಿಗಳು ಮತ್ತು ಚಿತ್ರರಂಗ ಹೇಗೆ ಆಚರಿಸುತ್ತಿದೆ ಎಂಬ ಮಾಹಿತಿ ಇಲ್ಲಿದೆ.

ಕನ್ನಡ ಚಿತ್ರರಂಗದ ಅಪ್ರತಿಮ ಕಲಾವಿದ ವಿಷ್ಣುವರ್ಧನ್ ಅವರ 75ನೇ ಜನ್ಮದಿನವನ್ನು ಈ ವರ್ಷ ವಿಶೇಷವಾಗಿ ಆಚರಿಸಲಾಗುತ್ತಿದೆ. ಅಭಿಮಾನಿಗಳಲ್ಲಿ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣದ ಬಗ್ಗೆ ಬೇಸರವಿದ್ದರೂ, ಹೊಸದಾಗಿ ನಿರ್ಮಿಸುತ್ತಿರುವ ವಿಷ್ಣು ದರ್ಶನ ಕೇಂದ್ರದ ಉದ್ಘಾಟನೆ ನಡೆಯಲಿದೆ.Citizen Eco-Drive Chronograph Men's Watch - AT2245-57E

ಕಿಚ್ಚ ಸುದೀಪ್ ವಿಷ್ಣು ದರ್ಶನ ಕೇಂದ್ರದ ಉದ್ಘಾಟನೆಗೆ ಆಗಮಿಸಲಿದ್ದಾರೆ. ಅಲ್ಲದೆ, ಅದೇ ದಿನ ವಿಷ್ಣು ದರ್ಶನ ಕೇಂದ್ರದ ನೀಲಿ ನಕ್ಷೆಯನ್ನೂ ಅನಾವರಣಗೊಳಿಸಲಾಗುವುದು. ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಕಲಾವಿದರ ಸಂಘದಲ್ಲಿ ಸಂಜೆ 4:30ಕ್ಕೆ ನೀಲಿ ನಕ್ಷೆ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಸುದೀಪ್, ವೀರಕಪುತ್ರ ಶ್ರೀನಿವಾಸ್, ಅಶೋಕ್ ಖೇಣಿ ಮತ್ತು ಅಭಿಮಾನಿಗಳು ಭಾಗವಹಿಸಲಿದ್ದಾರೆ.

ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಆದಾಗ್ಯೂ, ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣು ಪುಣ್ಯಭೂಮಿ ನೆಲಸಮಗೊಂಡಿರುವುದು ನೋವಿನ ಸಂಗತಿ. ಈ ಕೊರತೆಯನ್ನು ನೀಗಿಸಲು, ಸುದೀಪ್ ಖರೀದಿಸಿದ ಅರ್ಧ ಎಕರೆ ಜಾಗದಲ್ಲಿ ವಿಷ್ಣು ದರ್ಶನ ಕೇಂದ್ರ ನಿರ್ಮಾಣವಾಗುತ್ತಿರುವುದು ಸಮಾಧಾನಕರ ಸಂಗತಿ.ಇದನ್ನು ಓದಿ:ಜೈಲಲ್ಲಿ ಉಗ್ರರಿಗಿರೋ ಕಿಮ್ಮತ್ತು ಕೂಡ ಇಲ್ಲ ದರ್ಶನ್‌ಗೆ...ಬೇರೆ ಕೈದಿಗಳಿಗೆ ಟಿವಿ, ಕೇರಂ ಎಲ್ಲಾ ಇದೆ ಎಂದ ವಕೀಲರು!

ರಿಯಲ್ ಸ್ಟಾರ್ ಉಪೇಂದ್ರ ಅವರ ಜನ್ಮದಿನವನ್ನು ಈ ವರ್ಷ ಕತ್ರಿಗುಪ್ಪೆಯಲ್ಲಿರುವ ಅವರ ಹಳೆಯ ಮನೆಯಲ್ಲಿ ಆಚರಿಸಲಾಗುತ್ತಿದೆ. 45 ಚಿತ್ರತಂಡದ ವತಿಯಿಂದ ವಿಶೇಷ ಬೈಕ್ ಅನಾವರಣ ಮತ್ತು ಕೇಕ್ ಕಟಿಂಗ್ ಕಾರ್ಯಕ್ರಮ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಇದು ಅಭಿಮಾನಿಗಳಿಗೆ ಸಂಭ್ರಮದ ಕ್ಷಣಗಳನ್ನು ನೀಡಲಿದೆ.

ನಟಿ ಶ್ರುತಿ ಈ ವರ್ಷ ತಮ್ಮ 50ನೇ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಚಿತ್ರರಂಗದಲ್ಲಿ 35 ವರ್ಷಗಳನ್ನು ಪೂರೈಸಿರುವ ಅವರು, ಇಸ್ಕಾನ್ ಟೆಂಪಲ್‌ನ ದ್ವಾರಕ ಹಾಲ್‌ನಲ್ಲಿ ಬೆಳಗ್ಗೆ 9:30ಕ್ಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಎರಡು ವಿಶೇಷ ಸಂದರ್ಭಗಳನ್ನು ಒಟ್ಟಾಗಿ ಆಚರಿಸಲು ಅವರು ಯೋಜನೆ ರೂಪಿಸಿದ್ದಾರೆ.