Skip to main content
ವಿಡಿಯೋ
1/2
politics

ರಾಹುಲ್‌ ಗಾಂಧಿ ಆರೋಪಗಳು ಆಧಾರರಹಿತ; ಮತ ಅಳಿಸಲು ಸಾಧ್ಯವಿಲ್ಲ - ಚುನಾವಣಾ ಆಯೋಗ

By Shravanthi R
ರಾಹುಲ್‌ ಗಾಂಧಿ ಆರೋಪಗಳು ಆಧಾರರಹಿತ; ಮತ ಅಳಿಸಲು ಸಾಧ್ಯವಿಲ್ಲ - ಚುನಾವಣಾ ಆಯೋಗ

ದೇಶದಲ್ಲಿ ಚುನಾವಣಾ ಅಕ್ರಮಗಳು ನಡೆಯುತ್ತವೆ ಎಂದು ಮಹತ್ವದ ಉದಾಹರಣೆಯೊಟ್ಟಿಗೆ, ನಾನು ಈ ಹಿಂದೆ ಬಹಿರಂಗಪಡಿಸಿದ ‘ಹೈಡ್ರೊಜೆನ್ ಬಾಂಬ್’ ಇದಲ್ಲ. ಅದು ಅತಿ ಶೀಘ್ರದಲ್ಲಿ ಬರಲಿದೆ ಎಂದು ರಾಹುಲ್‌ ಇಂದು ಆಕ್ರೋಶಗೊಂಡಿದ್ದರು.

ಇಂದು ಕಾಂಗ್ರೆಸ್‌ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿಯವರು ಆರೋಪಿಸಿರುವ ಮತಗಳ್ಳತನದ ಪ್ರತಿರೂಪಕಗಳನ್ನು ಚುನಾವಣಾ ಆಯೋಗ ತಳ್ಳಿಹಾಕಿದೆ. ಅವರು ಮಾಡಿರುವ ಆರೋಪಗಳು ತಪ್ಪಾಗಿವೆ ಹಾಗೂ ಆಧಾರರಹಿತವೆಂದು; ಮತಗಳನ್ನು ಆನ್‌ಲೈನ್‌ನಲ್ಲಿ ಅಳಿಸಲು ಸಾಧ್ಯವಿಲ್ಲವೆಂದು, ದಾಖಲೆಗಳನ್ನು ಪರಿಶೀಲಿಸಿ ಮಾತನಾಡಲಿ. ವಿಧಾನಸಭೆಯಲ್ಲಿ ಅವರ ಕಾಂಗ್ರೆಸ್‌ ಪಕ್ಷವೇ ಗೆದ್ದಿದೆ ಎಂದು ಸ್ಪಷ್ಟಪಡಿಸಿದೆ. 

ಇಂದು ದೆಹಲಿಯ ಎಐಸಿಸಿ ಕಚೇರಿಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿಯವರು, ಮತಗಳ್ಳರನ್ನು ರಕ್ಷಿಸಲಾಗಿದೆ ಎಂಬ ಹೇಳಿಕೆಯನ್ನು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿಯಾಗಿರುವ  ಜ್ಞಾನೇಶ್‌ ಕುಮಾರ್‌ ಅವರು ರಾಹುಲ್‌ ಅವರ ಆರೋಪಗಳನ್ನು ತಿರಸ್ಕರಿಸಿದ್ದಾರೆ. ಇದವರ ತಪ್ಪಭಿಪ್ರಾಯವಾಗಿದೆ. ಅವರು ಹೇಳಿರುವ ರೀತಿ ಆನ್‌ಲೈನ್‌ ಪ್ರಕ್ರಿಯೆ ಮೂಲಕ ಯಾವುದೇ ಮತವನ್ನು ಅಳಿಸಲು ಸಾಧ್ಯವಿಲ್ಲ. ಅವರ ಆರೋಪಗಳು, ಚಿಂತನೆ ತಪ್ಪಾಗಿದೆ ಎಂದಿದ್ದಾರೆ. CeraVe Hydrating Cleanser For Normal To Dry Skin (473ml) - Non-Foaming Face Wash with Hyaluronic Acid And Ceramides | Non-Comedogenic, Non-Irritating And Fragrance-Free Cleanser

ದೇಶದಲ್ಲಿ ಚುನಾವಣಾ ಅಕ್ರಮಗಳು ನಡೆಯುತ್ತವೆ ಎಂದು ಮಹತ್ವದ ಉದಾಹರಣೆಯೊಟ್ಟಿಗೆ, ನಾನು ಈ ಹಿಂದೆ ಬಹಿರಂಗಪಡಿಸಿದ ‘ಹೈಡ್ರೊಜೆನ್ ಬಾಂಬ್’ ಇದಲ್ಲ. ಅದು ಅತಿ ಶೀಘ್ರದಲ್ಲಿ ಬರಲಿದೆ ಎಂದು ರಾಹುಲ್‌ ಇಂದು ಆಕ್ರೋಶಗೊಂಡಿದ್ದರು. ಕರ್ನಾಟಕದ ಆಳಂದದಲ್ಲಿ 2023 ರ ಚುನಾವಣೆ ಸಂದರ್ಭದಲ್ಲಿ 6000 ಕ್ಕೂ ಹೆಚ್ಚು ಮತಗಳನ್ನು ಅಳಿಸಿಹಾಕುವ ಯತ್ನ ನಡೆದಿದೆ. ಸ್ವಯಂಚಾಲಿತ ತಂತ್ರಾಂಶ ಬಳಸಿ ಕುತಂತ್ರದಿಂದ ಮತಗಳನ್ನು ಸೇರಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದರು. ಈ ಪೈಕಿ ಇಬ್ಬರ ವಿತಂಡ ವಾದ ಮುಂದುವರೆದಿದೆ ಎನ್ನಲಾಗಿದೆ. ಇದನ್ನೂ ಓದಿ: ಗುಂಡಿಯೂರಾದ ಬೆಂಗಳೂರು: ಎಚ್‌ಡಿಕೆಯಿಂದ ಸರಕಾರಕ್ಕೆ ತೀವ್ರ ಟೀಕೆ..!