ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದ ಘನತೆಗೆ ತೀವ್ರ ಘಾಸಿಯಾಗಿದೆ. ಒಂದಾನೊಂದು ಕಾಲದ ಸಿಲಿಕಾನ್ ಸಿಟಿಯು ಇಂದು "ಗುಂಡಿಯೂರು" ಎಂಬ ಕುಖ್ಯಾತಿಗೆ ಒಳಗಾಗಿದೆ. ಇದಕ್ಕೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಆಡಳಿತ ವೈಫಲ್ಯವೇ ಕಾರಣ.ಬಿಜೆಪಿಯವರಿಗೆ ಪಾಕಿಸ್ತಾನ, ಧರ್ಮ ಅನ್ನೋ ವಿಚಾರಗಳ ಬಗ್ಗೆ ಮಾತಾಡದೇ ರಾಜಕೀಯ ಮಾಡೋಕೆ ಗೊತ್ತೇ ಇಲ್ಲ: ಸಂತೋಷ್ ಲಾಡ್ ಕಿಡಿ..!!
ಬೆಂಗಳೂರು ಮತ್ತು ಕರ್ನಾಟಕವು ಭ್ರಷ್ಟಾಚಾರ ಮತ್ತು ಅಸಮರ್ಥ ಆಡಳಿತದ ಕೈಯಲ್ಲಿ ಸಿಲುಕಿ ನರಳುತ್ತಿವೆ. ಹೆಜ್ಜೆ ಹೆಜ್ಜೆಗೂ ಗುಂಡಿಗಳು, ಕಂಡ ಕಂಡೆಲ್ಲ ಕಸದ ರಾಶಿಗಳು. ಇದೇನಾ ಗ್ರೇಟರ್ ಬೆಂಗಳೂರಿನ ಚಿತ್ರಣ? ಜನರ ತೆರಿಗೆ ಹಣವನ್ನು ಜಿಬಿಎ ವ್ಯರ್ಥ ಮಾಡುತ್ತಿದೆಯೇ? ಬೆಂಗಳೂರಿನ ಆಡಳಿತದ ಘೋರ ವೈಫಲ್ಯವನ್ನು ಉದ್ಯಮಿಗಳು ಖಂಡಿಸಿರುವುದು ಸರಿಯಾಗಿದೆ.Amazon Brand - Myx Women's Embroidered Cotton Kurta Pant Set with Dupatta
ಇಂತಹ ಕಠಿಣ ಟೀಕೆಯು ಮೊದಲ ಬಾರಿಗೆ ಕೇಳಿ ಬಂದಿದೆ. ಈ ಸರಕಾರಕ್ಕೆ ಕನ್ನಡಿಗರ ಸ್ವಾಭಿಮಾನದ ಮೇಲೆ ಯಾವುದೇ ಕಾಳಜಿಯಿಲ್ಲ. ತೆರಿಗೆ ವಿಧಿಸುವಲ್ಲಿ ರಾಕೆಟ್ ವೇಗವಿದ್ದರೂ, ಗುಂಡಿಗಳನ್ನು ಮುಚ್ಚುವಲ್ಲಿ ಆಮೆಯ ವೇಗವೂ ಇಲ್ಲ. ಚುನಾವಣಾ ಗ್ಯಾರಂಟಿಗಳಿಗಾಗಿ ರಾಜ್ಯದ ಅಭಿವೃದ್ಧಿಯನ್ನೇ ಬಲಿಕೊಟ್ಟು, ಬೆಂಗಳೂರು ಗಬ್ಬೆದ್ದು ನಾರುತ್ತಿದೆ.
ತೆರಿಗೆ ಹಣವನ್ನು ಕಿತ್ತುಕೊಳ್ಳುವ ಸರಕಾರ, ಗುಂಡಿಗಳನ್ನು ಮುಚ್ಚಲು ಬಿಡಿಗಾಸು ಇಲ್ಲ ಎಂದು ಹೇಳುತ್ತದೆ. ಆಗ ಈ ಹಣ ಎಲ್ಲಿಗೆ ಸೇರುತ್ತಿದೆ? ಯಾರ ಕಿಸೆಗೆ ಹೋಗುತ್ತಿದೆ? ಈ ಪ್ರಶ್ನೆಗಳಿಗೆ ಉತ್ತರ ಬೇಕು. ಉದ್ಯಮಿಗಳು ಸರಕಾರದ ಮೇಲಿನ ಭರವಸೆ ಕಳೆದುಕೊಂಡು ನೆರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಜಮೀರ್ ಅಹ್ಮದ್ ಕೇಸ್ - ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ಗೆ ಶಾಕ್ ಕೊಟ್ಟ ಲೋಕಾ ನೋಟಿಸ್.!
ಆ ರಾಜ್ಯಗಳು ರಿಯಾಯಿತಿಗಳನ್ನು ನೀಡಿ ಕಂಪನಿಗಳನ್ನು ಆಕರ್ಷಿಸುತ್ತಿವೆ. ಆದರೆ ಈ ಸರಕಾರಕ್ಕೆ ಇದರ ಗಂಭೀರತೆ ಅರ್ಥವಾಗುತ್ತಿಲ್ಲ. ಕಂಪನಿಗಳಿಗೆ ನನ್ನ ವಿನಂತಿ, ಬೆಂಗಳೂರನ್ನು ತೊರೆಯಬೇಡಿ. ಈ ನಗರಕ್ಕೆ ಶ್ರೀಮಂತ ಪರಂಪರೆ ಇದೆ. ಕನ್ನಡಿಗರ ಜೊತೆ ಸೇರಿ ಈ ಭ್ರಷ್ಟ ಆಡಳಿತಕ್ಕೆ ಪಾಠ ಕಲಿಸೋಣ. ಇಡೀ ಕರ್ನಾಟಕದ ಜನತೆ ನಿಮ್ಮೊಂದಿಗಿದೆ. ಬೆಂಗಳೂರನ್ನು ಮತ್ತೆ ಮಹಾನಗರವನ್ನಾಗಿ ಮಾಡೋಣ ಎಂದು ಹೆಚ್.ಡಿಕೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯರಿಗೆ ಅಭಿನಂದನಾ ಸಮಾರಂಭ..!