Skip to main content
ವಿಡಿಯೋ
1/2
politics

ಬಿಹಾರ ಸಿಎಂ - ನಿರುದ್ಯೋಗಿ ಪದವೀಧರ ಯುವಜನರಿಗೆ 1,000 ರೂ. ಮಾಸಿಕ ಭತ್ಯೆ ಘೋಷಣೆ

By Shravanthi R
ಬಿಹಾರ ಸಿಎಂ - ನಿರುದ್ಯೋಗಿ ಪದವೀಧರ ಯುವಜನರಿಗೆ 1,000 ರೂ. ಮಾಸಿಕ ಭತ್ಯೆ ಘೋಷಣೆ

ಈ ಹಿಂದೆ, ಈ ಯೋಜನೆಯು ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮಾತ್ರ ಅರ್ಹವಾಗಿತ್ತು. ಇದೀಗ, 20-25 ವರ್ಷ ವಯಸ್ಸಿನ, ಯಾವುದೇ ಶಿಕ್ಷಣ ಪಡೆಯದ, ಉದ್ಯೋಗದಲ್ಲಿ ಇಲ್ಲದ ಅಥವಾ ಸ್ವ-ಉದ್ಯೋಗದಲ್ಲಿಲ್ಲದ ಪದವೀಧರರಿಗೆ ಎರಡು ವರ್ಷಗಳವರೆಗೆ ತಿಂಗಳಿಗೆ 1,000 ರೂ. ಭತ್ಯೆ ನೀಡಲಾಗುವುದು.

ಬಿಹಾರದಲ್ಲಿ ಚುನಾವಣೆಗೂ ಮುನ್ನ ಅಲ್ಲಿನ ಸರ್ಕಾರವು ಆರ್ಥಿಕ ಬೆಂಬಲಕ್ಕಾಗಿ ಪದವೀಧರ ನಿರುದ್ಯೋಗಿ ಯುವಜನತೆಗೆ ಪ್ರತೀ ತಿಂಗಳು ರೂ. 1,000 ಭತ್ಯೆ ನೀಡಲು ನಿರ್ಧರಿಸಿದೆ ಎಂದು ತಿಳಿಸಲಾಗಿದೆ. ಇಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು, ʻಮುಖ್ಯಮಂತ್ರಿ ನಿಶ್ಚಿತ ಸ್ವಯಂ ಸಹಾಯ ಭತ್ಯೆ ಯೋಜನೆʼಯಡಿ ಎರಡು ವರ್ಷಗಳ ಅವಧಿಗೆ ಆರ್ಥಿಕ ನೆರವು ನೀಡುವುದಾಗಿ ಪ್ರಕಟಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರಾಹುಲ್‌ ಗಾಂಧಿ ಆರೋಪಗಳು ಆಧಾರರಹಿತ; ಮತ ಅಳಿಸಲು ಸಾಧ್ಯವಿಲ್ಲ - ಚುನಾವಣಾ ಆಯೋಗ

ಈ ಬಗ್ಗೆ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, 2005 ರಿಂದಲೂ ಉದ್ಯೋಗ ಸೃಷ್ಟಿ ಮತ್ತು ಉದ್ಯೋಗವು ಪ್ರಮುಖ ಆದ್ಯತೆಗೆ ಒತ್ತು ನೀಡಲಾಗಿದೆ. ಯುವಕರ ಸಬಲೀಕರಣಕ್ಕಾಗಿ ತಮ್ಮ ಸರ್ಕಾರದ ಬದ್ಧತೆಯನ್ನು ತೋರಿದೆ. ರಾಜ್ಯ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಯುವಕರಿಗೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ. CeraVe Hydrating Cleanser For Normal To Dry Skin (88ml) - Non-Foaming Face Wash with Hyaluronic Acid And Ceramides | Non-Comedogenic, Non-Irritating And Fragrance-Free Cleanser


ಈ ಹಿಂದೆ, ಈ ಯೋಜನೆಯು ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮಾತ್ರ ಅರ್ಹವಾಗಿತ್ತು. ಇದೀಗ, 20-25 ವರ್ಷ ವಯಸ್ಸಿನ, ಯಾವುದೇ ಶಿಕ್ಷಣ ಪಡೆಯದ, ಉದ್ಯೋಗದಲ್ಲಿ ಇಲ್ಲದ ಅಥವಾ ಸ್ವ-ಉದ್ಯೋಗದಲ್ಲಿಲ್ಲದ ಪದವೀಧರರಿಗೆ ಎರಡು ವರ್ಷಗಳವರೆಗೆ ತಿಂಗಳಿಗೆ 1,000 ರೂ. ಭತ್ಯೆ ನೀಡಲಾಗುವುದು. ರಾಜ್ಯದ ಪ್ರಮುಖ “7 ನಿಶ್ಚಯ್” ಕಾರ್ಯಕ್ರಮದ ಭಾಗವಾಗಿರುವ ಮುಖ್ಯಮಂತ್ರಿಗಳ ಸ್ವ-ಸಹಾಯ ಭತ್ಯೆ ಯೋಜನೆಯಡಿಯಲ್ಲಿ, ಈಗ ನಿರುದ್ಯೋಗಿ ಪದವೀಧರರಿಗೂ ಪ್ರಯೋಜನಗಳನ್ನು ವಿಸ್ತರಿಸಲಾಗುವುದು ಎಂದು ಅಲ್ಲಿನ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಉತ್ತರಾಖಂಡ: ಭಾರಿ ಮಳೆಯಿಂದ ಕಟ್ಟಡಗಳ ಕುಸಿತ; ಕನಿಷ್ಠ 12 ಜನ ನಾಪತ್ತೆ..!