ಬೆಂಗಳೂರು: ರಾಹುಲ್ ಗಾಂಧಿ(Rahul Gandhi) ಮಾಡಿದ ಮತಗಳ್ಳತನ ಆರೋಪದ ಜೊತೆಗೆ ನಾನು ಸದೃಢವಾಗಿ ನಿಲ್ಲುತ್ತೇನೆ ಎಂದು ಡಿಕೆ ಶಿವಕುಮಾರ್(DK Shivakumar) ಹೇಳಿದ್ದಾರೆ. ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂಬ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಆರೋಪದ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಡಿಕೆ ಶಿವಕುಮಾರ್ ಅವರು ನಾನು ಸಂಪೂರ್ಣವಾಗಿ ರಾಹುಲ್ ಪರವಾಗಿ ನಿಲ್ಲುತ್ತೇನೆ. ಭಾರತದ ಜನ ಪಾರದರ್ಶಕೆ ಮತ್ತು ನ್ಯಾಯ ಸಮ್ಮತತೆಗೆ ಅರ್ಹರು ಎಂದು ಹೇಳಿಕೊಂಡಿದ್ದಾರೆ.ಇದನ್ನೂ ಓದಿ: ಬಿಹಾರ ಸಿಎಂ - ನಿರುದ್ಯೋಗಿ ಪದವೀಧರ ಯುವಜನರಿಗೆ 1,000 ರೂ. ಮಾಸಿಕ ಭತ್ಯೆ ಘೋಷಣೆ
ಆದರೆ ಮತದಾರರನ್ನು ಗುರಿಯಾಗಿಸಿಕೊಂಡು ಸಾಕಷ್ಟು ಗುಪ್ತ ಚಟುವಟಿಕೆಗಳು ನಡೆಯುತ್ತಿವೆ ಎಂದು ತಿಳಿಸಿದರು. ಕಾಂಗ್ರೆಸ್‌ನ ಬಲಿಷ್ಠ ಬೂತ್‌ಗಳಲ್ಲಿ ಕಾನೂನುಬದ್ಧ ಮತಗಳನ್ನು ಅಳಿಸಿ ಹಾಕಲು ಸಾಪ್ಟ್‌ವೇರ್ ಹಾಗೂ ಹೊರಗಿನವರ ಹಸ್ತಕ್ಷೇಪವನ್ನು ಬಳಕೆ ಮಾಡಲಾಗಿದೆ ಎಂಬುದು ಆಳಂದ ಕ್ಷೇತ್ರದಲ್ಲಿ ದೊರೆತ ಸಾಕ್ಷಿಗಳಿಂದ ತಿಳಿಯುತ್ತದೆ. ಇದು ಜನರ ಧ್ವನಿಯನ್ನು ಅಡಗಿಸಲು ಉದ್ಧೇಶಪೂರ್ವಕವಾದ ಮತ್ತು ಯೋಜಿತ ಪ್ರಯತ್ನವಾಗಿದೆ.
ನಾವು ನಮ್ಮ ಧ್ವನಿ ಎತ್ತುವುದನ್ನ, ದಾಖಲೆಗಳನ್ನ ಬಹಿರಂಗಪಡಿಸುವುದನ್ನ ಮುಂದುವರಿಸುತ್ತೇವೆ, ಬಿಜೆಪಿ ಎಂದರೆ ವೋಟ್ ಚೋರಿ ಫ್ಯಾಕ್ಟರಿ ಎಂದು ಬರೆದುಕೊಂಡಿದ್ದಾರೆ.ಇದನ್ನೂ ಓದಿ: ಬೆಂಗಳೂರು ಈಗ ಗುಂಡಿಯೂರಾಗಿ ಬದಲಾವಣೆ, ಇದರ ಸಂಪೂರ್ಣ ಹೊಣೆ ಸಿಎಂ ಮತ್ತು ಡಿಸಿಎಂ ಮೇಲೆ: ಹೆಚ್.ಡಿ ಕುಮಾರಸ್ವಾಮಿ..!
ಗುರುವಾರ ನವದೆಹಲಿಯಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸುದ್ದಿಗೋಷ್ಠಿ ನಡೆಸಿ ಗಂಭೀರ ಆರೋಪ ಮಾಡಿದ್ದಾರೆ. ಆಳಂದ ಕ್ಷೇತ್ರದಲ್ಲಿ 2023ರ ಎಲೆಕ್ಷನ್ ವೇಳೆ 6018 ಮತದಾರರನ್ನ ಡಿಲೀಟ್ ಮಾಡಲು ಯತ್ನಿಸಿದ್ದರು ಎಂದು ದೂರಿದ್ದಾರೆ. ಬೇರೆ ರಾಜ್ಯಗಳ ಫೋನ್ ನಂಬರ್ ಬಳಕೆ ಮಾಡಲಾಗಿದೆ. ಕಾಂಗ್ರೆಸ್ ವೋಟ್ಗಳನ್ನೇ ಟಾರ್ಗೆಟ್ ಮಾಡಲಾಗಿದೆ. ಸೂರ್ಯಕಾಂತ್ ಹೆಸರು ಬಳಸಿ 14 ನಿಮಿಷದಲ್ಲಿ 12 ವೋಟ್ ಡಿಲೀಟ್ ಮಾಡಲಾಗಿದೆ. ಕಾಂಗ್ರೆಸ್ ಬಲವಾಗಿರುವ ಬೂತ್ಗಳನ್ನೇ ಟಾರ್ಗೆಟ್ ಮಾಡಿ ಮತಗಳ್ಳತನ ಮಾಡಲಾಗಿದೆ ಎಂದಿದ್ದಾರೆ.C J Enterprise Women's Kanjivaram Art Silk Saree Soft Banarasi Style Sari With Blouse Piece For Wedding (Pari122-51)