Skip to main content
ವಿಡಿಯೋ
1/2
politics

ಗುಂಡಿಯೂರಾಗಿ ಬದಲಾಗುತ್ತಿರುವ ಬೆಂಗಳೂರನ್ನು ಬಿಟ್ಟು ಹೋಗಲು ಉದ್ಯಮಿಗಳು ನಿರ್ಧಾರ, ಬ್ಲಾಕ್‌ ಮೇಲ್‌ಗೆ ಹೆದರಲ್ಲ ಎಂದು ಡಿಕೆ ಗರಂ..!!

By Pavitra Ganapathi Baradavalli
ಗುಂಡಿಯೂರಾಗಿ ಬದಲಾಗುತ್ತಿರುವ ಬೆಂಗಳೂರನ್ನು ಬಿಟ್ಟು ಹೋಗಲು ಉದ್ಯಮಿಗಳು ನಿರ್ಧಾರ, ಬ್ಲಾಕ್‌ ಮೇಲ್‌ಗೆ ಹೆದರಲ್ಲ ಎಂದು ಡಿಕೆ ಗರಂ..!!

ಬೆಂಗಳೂರು ದಿನೇ ದಿನೇ ಗುಂಡಿಯೂರಾಗಿ ಬದಲಾಗ್ತಾ ಇದೆ. ಗುಂಡಿ ಗಡಾಂತರಕ್ಕೆ ಬೇಸತ್ತ ಉದ್ಯಮಿಗಳು ನಾವು ಬೆಂಗಳೂರನ್ನು ಬಿಟ್ಟು ಹೋಗ್ತೀವಿ ಅಂತ ಹೇಳಿದ್ದಾರೆ ಅದಕ್ಕೆ ಗರಂ ಆದ ಡಿಕೆ ಶಿವಕುಮಾರ್‌ ನಮ್ಮ ಹತ್ತಿರ ಬ್ಲಾಕ್‌ ಮೇಲ್‌ ನಡಿಯಲ್ಲ ಅಂತ ಗುಡುಗಿದ್ದಾರೆ.

ಬೆಂಗಳೂರು: ಬೆಂಗಳೂರು ದಿನೇ ದಿನೇ ಗುಂಡಿಯೂರಾಗಿ ಬದಲಾಗ್ತಾ ಇದೆ. ಗುಂಡಿ ಗಡಾಂತರಕ್ಕೆ ಬೇಸತ್ತ ಉದ್ಯಮಿಗಳು ನಾವು ಬೆಂಗಳೂರನ್ನು ಬಿಟ್ಟು ಹೋಗ್ತೀವಿ ಅಂತ ಹೇಳಿದ್ದಾರೆ ಅದಕ್ಕೆ ಗರಂ ಆದ ಡಿಕೆ ಶಿವಕುಮಾರ್‌ ನಮ್ಮ ಹತ್ತಿರ ಬ್ಲಾಕ್‌ ಮೇಲ್‌ ನಡಿಯಲ್ಲ ಅಂತ ಗುಡುಗಿದ್ದಾರೆ. ಗುಂಡುಯೂರಾಗಿ ಬದಲಾಗುತ್ತಿರುವ ಬೆಂಗಳೂರಿನ ಕುರಿತಾಗಿ ವಿಪಕ್ಷಗಳು ಒಂದೇ ಸಮನೇ ಮುಗಿಬೀಳುತ್ತಿವೆ. ಸಾರವಜನಿಕರು ಕೆಂಡ ಕಾರುತ್ತಿದ್ದಾರೆ.ಇದನ್ನೂ ಓದಿ: ಸಚಿವರ ಅಸಮಾಧಾನಕ್ಕೆ ಮಣಿದ ಸಿಎಂ...ಕ್ರಿಶ್ಚಿಯನ್-ಹಿಂದೂ ಕಲಂಗಳನ್ನು ತೆರವುಗೊಳಿಸಲು ಸೂಚನೆ..!


ಬೆಂಗಳೂರಿನ ರಸ್ತೆ ಗುಂಡಿಗಳು ರಾಜ್ಯ ಸರ್ಕಾರಕ್ಕೆ ಪೀಕಲಾಟ ಶುರುವಾಗಿದೆ. ಆದರೆ ಬೆಂಗಳೂರು ಸಹವಾಸ ಬೇಡ ಅಂತಿರುವ ಬೆಂಗಳೂರು ಉದ್ಯಮಿಗಳ ವಿರುದ್ಧ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿಕೆ ಶಿವಕುಮಾರ್‌ ಗರಂ ಆಗಿದ್ದಾರೆ. ಬೆದರಿಕೆಗೆ ಹೆದರಲ್ಲ, ಬ್ಲಾಕ್‌ ಮೇಲ್‌ ನಡಿಯಲ್ಲ ಅಂತಿದ್ದಾರೆ.ಇದನ್ನೂ ಓದಿ: ಇವಿಎಂ ನಿಷೇಧಿಸಿ ಬ್ಯಾಲೆಟ್ ಬಳಸಬೇಕು: ಡಿ.ಕೆ.ಶಿವಕುಮಾರ್‌..


ಇನ್ನೂ ಇದಕ್ಕೆ ಪ್ರತಿಕ್ರಿಯೆ ನೀಡಿದ ಆಂದ್ರ ಪ್ರದೇಶದ ಸಚಿವ ನಾ ರಾ ಲೋಕೇಶ್‌ ನಾವು ಉದ್ಯಮಿಗಳಿಗೆ ಬ್ಲಾಕ್‌ ಮೇಲ್‌ ಮಾಡಲ್ಲ ಅಂತ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿ ಟಾಂಗ್‌ ಕೊಟ್ಟಿದ್ದಾರೆ. ಇನ್ನು ಗುಂಡಿ ಮುಚ್ಚೋದಕ್ಕೆ ನವೆಂಬರ್‌ ಡೆಡ್‌ ಲೈನ್‌ ನೀಡಿರೋದಕ್ಕೆ ಬಿಜೆಪಿ ವ್ಯಂಗವಾಡಿದೆ. ಈಗಾಗಲೇ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚೋದಕ್ಕೆ ಅಧಿಕಾರಿಗಳು ಫೀಲ್ಡ್‌ಗೆ ಇಳಿದಿದ್ದಾರೆ.C J Enterprise Women's Kanjivaram Art Silk Saree Soft Banarasi Style Sari With Blouse Piece For Wedding (Pari122-51)