Skip to main content
ವಿಡಿಯೋ
1/2
politics

ಸಚಿವರ ಅಸಮಾಧಾನಕ್ಕೆ ಮಣಿದ ಸಿಎಂ...ಕ್ರಿಶ್ಚಿಯನ್-ಹಿಂದೂ ಕಲಂಗಳನ್ನು ತೆರವುಗೊಳಿಸಲು ಸೂಚನೆ..!

By Sushmitha R
ಸಚಿವರ ಅಸಮಾಧಾನಕ್ಕೆ ಮಣಿದ ಸಿಎಂ...ಕ್ರಿಶ್ಚಿಯನ್-ಹಿಂದೂ ಕಲಂಗಳನ್ನು ತೆರವುಗೊಳಿಸಲು ಸೂಚನೆ..!

ಕರ್ನಾಟಕದಲ್ಲಿ ಕ್ರಿಶ್ಚಿಯನ್ ಜಾತಿಗಳ ಸೇರ್ಪಡೆ ಮಾಡಲು ಜಾತಿ ಗಣತಿಯಲ್ಲಿ ಗೊಂದಲ. ಸಚಿವರ ವಿರೋಧದ ನಡುವೆ ಸಿಎಂ ಸಿದ್ದರಾಮಯ್ಯ ಬುಧವಾರ ಸಭೆ ಕರೆಸಿ ಅಂತಿಮ ತೀರ್ಮಾನ ನಿರೀಕ್ಷೆ.

ಕರ್ನಾಟಕದಲ್ಲಿ ಜಾತಿ ಗಣತಿಯ ಕುರಿತು ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಹೊಸ ಜಾತಿಗಳ ಸೇರ್ಪಡೆಯಿಂದ ಸೃಷ್ಟಿಯಾಗಿರುವ ಗೊಂದಲಗಳು, ಗಣತಿಯನ್ನು ಮುಂದೂಡುವಂತೆ ಕೆಲವು ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಲು ಕಾರಣವಾಗಿವೆ.ಅಕ್ರಮ ಗಣಿ ಗುತ್ತಿಗೆ ಪ್ರಕರಣ: ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ ಸೂಚನೆ ಬೇಡ ಎಂದು ಅರ್ಜಿ ವಜಾಗೊಳಿಸಿದ ಹೈಕೋರ್ಟ್!

ಇತ್ತೀಚೆಗೆ, ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ಒಕ್ಕಲಿಗ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ದಲಿತ ಮುಂತಾದ ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿಸಿ ಗಣತಿ ಸಮೀಕ್ಷೆಯಲ್ಲಿ ಸೇರಿಸಲಾಗಿತ್ತು. ಈ ಪಟ್ಟಿಗೆ ವಿರೋಧ ಪಕ್ಷಗಳು ಮತ್ತು ಹಿಂದೂ ಸಮುದಾಯದಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸ್ವತಃ ಸಂಪುಟ ಸಭೆಯಲ್ಲೇ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.Aventura Outfitters Men's Round Neck 100% Cotton Regular Fit T-Shirt (Pack of 4)

ಈ ಎಲ್ಲ ವಿವಾದಗಳ ಮಧ್ಯೆ ಜಾತಿ ಗಣತಿ ಅಗತ್ಯವಿದೆಯೇ ಎಂಬ ಪ್ರಶ್ನೆ ಎದ್ದಿದೆ. ಸದ್ಯಕ್ಕೆ ಇದನ್ನು ಮುಂದೂಡಬೇಕು ಎಂದು ಅನೇಕ ಸಚಿವರು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂತೋಷ್ ಲಾಡ್, ಮುನಿಯಪ್ಪ ಮತ್ತು ಭೈರತಿ ಸುರೇಶ್ ಮಾತ್ರ ಜಾತಿ ಗಣತಿಯನ್ನು ಈಗಿನ ರೂಪದಲ್ಲೇ ಮುಂದುವರಿಸಲು ಒಲವು ತೋರಿದ್ದಾರೆ.

ಸಚಿವರ ಈ ವಿರೋಧಕ್ಕೆ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ಹಂತದಲ್ಲಿ, ಸಚಿವರು ಜಾತಿ ಗಣತಿ ಗೊಂದಲಗಳ ಬಗ್ಗೆ ಮೇಜು ಕುಟ್ಟಿ ಆಕ್ರೋಶ ವ್ಯಕ್ತಪಡಿಸಿದಾಗ, ಸಿಎಂ ಸಿದ್ದರಾಮಯ್ಯ ತಮ್ಮ ಆಸನದಿಂದ ಎದ್ದು ಇತ್ತ ಅತ್ತ ಓಡಾಡಿದ್ದಾರೆ. ಸಂಪುಟ ಸಭೆಯಲ್ಲಿ ಈ ರೀತಿ ಎಂದಿಗೂ ಸಿದ್ದರಾಮಯ್ಯ ನಡೆದುಕೊಂಡಿರಲಿಲ್ಲ ಎಂದು ಹೇಳಲಾಗಿದೆ.ಮಾಜಿ ಮುಡಾ ಆಯುಕ್ತ ದಿನೇಶ್‌ ಕುಮಾರ್‌ ಬಂಧನ ಸ್ವಾಗತಿಸಿದ ಶಾಸಕ ಶ್ರೀವತ್ಸ….!!

ತಮ್ಮನ್ನು ಜಾತಿವಾದಿ ಎಂದು ಬಿಂಬಿಸಲಾಗುತ್ತಿದೆ ಎಂಬ ಬೇಸರವನ್ನು ಸಿಎಂ ವ್ಯಕ್ತಪಡಿಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು, ಹಿಂದೂ ಜಾತಿಗಳ ಜೊತೆ ಕ್ರಿಶ್ಚಿಯನ್ ಧರ್ಮವನ್ನು ಸೇರಿಸಿರುವ ಕಲಂಗಳನ್ನು ತೆಗೆದುಹಾಕುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ ನೀಡಿದ್ದಾರೆ. ಈ ಮೂಲಕ ಅವರು ವಿವಾದಗಳಿಗೆ ತೆರೆ ಎಳೆಯಲು ಮುಂದಾಗಿದ್ದಾರೆ.

ಈ ವಿಚಾರವಾಗಿ, ಸಿಎಂ ಸಿದ್ದರಾಮಯ್ಯ ಇಂದು (ಸೆಪ್ಟೆಂಬರ್ 19) ಬೆಳಗ್ಗೆ 10 ಗಂಟೆಗೆ ಮತ್ತೆ ಸಂಪುಟ ಸಹೋದ್ಯೋಗಿಗಳ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಜಾತಿ ಗಣತಿಯ ಗೊಂದಲಗಳ ಕುರಿತು ಚರ್ಚೆ ನಡೆಸಿ, ಹೆಚ್ಚುವರಿ ಜಾತಿಗಳನ್ನು ತೆಗೆದು ಸಮೀಕ್ಷೆಯನ್ನು ಮುಂದುವರಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.ರಾಹುಲ್‌ ಗಾಂಧಿ ಮಾಡಿದ ಮತಗಳ್ಳತನ ಆರೋಪಕ್ಕೆ ನನ್ನ ಸಂಪೂರ್ಣ ಬೆಂಬಲ: ಡಿ.ಕೆ.ಶಿವಕುಮಾರ್‌..!!

ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಎಚ್.ಕೆ. ಪಾಟೀಲ್, ಈಶ್ವರ ಖಂಡ್ರೆ, ಸಂತೋಷ್ ಲಾಡ್, ಭೈರತಿ ಸುರೇಶ್, ಎಂ.ಬಿ. ಪಾಟೀಲ್, ಶಿವರಾಜ್ ತಂಗಡಗಿ ಸೇರಿದಂತೆ ಹಲವು ಸಚಿವರು ಭಾಗಿಯಾಗಲಿದ್ದಾರೆ.

ಜಾತಿ ಗಣತಿ ಸಮೀಕ್ಷೆಯ ಕೈಪಿಡಿಯಲ್ಲಿ ಮೊದಲು 53 ಪ್ರಶ್ನೆಗಳಿದ್ದವು. ಹಿಂದುಳಿದ ವರ್ಗಗಳ ಆಯೋಗ ಕೆಲವು ಪ್ರಮುಖ ಅಂಶಗಳನ್ನು ಬದಲಾಯಿಸಿ, ಹೊಸ ಕೈಪಿಡಿಯಲ್ಲಿ 50 ಪ್ರಶ್ನೆಗಳನ್ನು ಉಳಿಸಿಕೊಂಡಿದೆ. ಈ ಕಾರಣದಿಂದ, 2 ಲಕ್ಷ ಹಳೆಯ ಜಾತಿ ಗಣತಿ ಕೈಪಿಡಿಗಳನ್ನು ತಿಪ್ಪೆಗೆ ಎಸೆಯಲಾಗಿದೆ. ಸುಮಾರು ₹1 ಕೋಟಿ ವ್ಯಯಿಸಿ ತಯಾರಿಸಿದ್ದ ಈ ಕೈಪಿಡಿಗಳು ಈಗ ನಿರುಪಯುಕ್ತವಾಗಿವೆ.ಬೆಂಗಳೂರು ಈಗ ಗುಂಡಿಯೂರಾಗಿ ಬದಲಾವಣೆ, ಇದರ ಸಂಪೂರ್ಣ ಹೊಣೆ ಸಿಎಂ ಮತ್ತು ಡಿಸಿಎಂ ಮೇಲೆ: ಹೆಚ್‌.ಡಿ ಕುಮಾರಸ್ವಾಮಿ..!!