Skip to main content
ವಿಡಿಯೋ
1/2
politics

ಮಾಜಿ ಮುಡಾ ಆಯುಕ್ತ ದಿನೇಶ್‌ ಕುಮಾರ್‌ ಬಂಧನ ಸ್ವಾಗತಿಸಿದ ಶಾಸಕ ಶ್ರೀವತ್ಸ….!!

By Pavitra Ganapathi Baradavalli
ಮಾಜಿ ಮುಡಾ ಆಯುಕ್ತ ದಿನೇಶ್‌ ಕುಮಾರ್‌ ಬಂಧನ ಸ್ವಾಗತಿಸಿದ ಶಾಸಕ ಶ್ರೀವತ್ಸ….!!

ಮುಡಾ ಅಕ್ರಮ ಸೈಟು ಹಂಚಿಕೆ ಪ್ರಕರಣ ಬಹಳ ದಿನಗಳಿಂದ ನಡೆಯುತ್ತಲೇ ಇದೆ ಮೊದಲು ಸಿಎಂ ಸಿದ್ದರಾಮಯ್ಯ ಅಪರಾಧಿಯಾಗಾಯಿತು ಮತ್ತು ಅವರ ಪತ್ನಿ ಹೀಗೆ ಮುಂತಾದವರು ಮುಡಾ ಪ್ರಕರಣಕ್ಕೆ ಅತಿಥಿಯಾಗಿ ಬಂದು ಹೋಗುತ್ತಿದ್ದಾರೆ ಈಗ ಅದಕ್ಕೆ ಸಂಬಂಧಿಸಿದಂತೆ ಮಾಜಿ ಮುಡಾ ಆಯುಕ್ತ ದಿನೇಶ ಕುಮಾರ್‌ ಬಂಧನವನ್ನು ಸ್ವಾಗತಿಸಿದ ಶಾಸಕ ಶ್ರೀವತ್ಸ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಅನೇಕರ ಬಂಧನ ಆಗಬೇಕು.

ಮೈಸೂರು: ಮುಡಾ ಅಕ್ರಮ ಸೈಟು ಹಂಚಿಕೆ ಪ್ರಕರಣ ಬಹಳ ದಿನಗಳಿಂದ ನಡೆಯುತ್ತಲೇ ಇದೆ ಮೊದಲು ಸಿಎಂ ಸಿದ್ದರಾಮಯ್ಯ ಅಪರಾಧಿಯಾಗಾಯಿತು ಮತ್ತು ಅವರ ಪತ್ನಿ ಹೀಗೆ ಮುಂತಾದವರು ಮುಡಾ ಪ್ರಕರಣಕ್ಕೆ ಅತಿಥಿಯಾಗಿ ಬಂದು ಹೋಗುತ್ತಿದ್ದಾರೆ ಈಗ ಅದಕ್ಕೆ ಸಂಬಂಧಿಸಿದಂತೆ ಮಾಜಿ ಮುಡಾ ಆಯುಕ್ತ ದಿನೇಶ ಕುಮಾರ್‌ ಬಂಧನವನ್ನು ಸ್ವಾಗತಿಸಿದ ಶಾಸಕ ಶ್ರೀವತ್ಸ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಅನೇಕರ ಬಂಧನ ಆಗಬೇಕು. ಈ ಹಿಂದೆ ಮುಡಾದ ಅಧ್ಯಕ್ಷರು, ಆಯುಕ್ತರು ಮತ್ತು ಅಧಿಕಾರಿಗಳ ಬಂಧನ ಆಗಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: ನಂಜೇಗೌಡರ ಗೆಲುವಿಗೆ ಅಸಿಂಧು ತೀರ್ಪು! ಹೈಕೋರ್ಟ್ ಹೇಳಿದ ಪ್ರಮುಖ ಕಾರಣಗಳು ಏನೇನು ಗೊತ್ತಾ?


ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಶಾಸಕ ಶ್ರೀವತ್ಸ, ನಾನು ಈ ಹಿಂದೆಯೇ ಹೇಳಿದ್ದೇನೆ ಮುಡಾದಲ್ಲಿ ಅಕ್ರಮ ಆಗಿರೋದಂತೂ ನಿಜ. ಸಾವಿರಾರು ಸೈಟುಗಳನ್ನು ಅಕ್ರಮವಾಗಿ ಹಂಚಲಾಗಿದೆ. ಕೇವಲ ದಿನೇಶ್‌ ಕುಮಾರ್‌ ಬಂಧನ ಆದರೆ ಸಾಕಾಗಲ್ಲ ಇನ್ನು ಅನೇಕರ ವಿರುದ್ಧ ತನಿಖೆ ಆಗಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲಲ್ಲ ಎಂದರು
.ಇದನ್ನೂ ಓದಿ: ಕರಡಿ ಕಥೆ ಕೇಳುದ್ರೆ ಪಾಪ ಅನ್ನಿಸುತ್ತೆ: ಮನುಷ್ಯನ ಕ್ರೌರ್ಯಕ್ಕೆ ಬಲಿಯಾದ ವಸಿಕರನ್ ಕರಡಿಗೆ ಕೃತಕ ಕಾಲು ಜೋಡಣೆ

ಜೊತೆಗೆ ಕೆ.ಆರ್ ಮೊಹಲ್ಲಾದ ಗಾಡಿ ಚೌಕ ದರ್ಗಾ ವಿವಾದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಶ್ರೀವತ್ಸ, ಅಲ್ಲಿ ಈಗಾಗಲೇ ದರ್ಗಾವಿದೆ. ಇನ್ನೊಂದು ದರ್ಗಾಕ್ಕೆ ಆಯುಕ್ತರು ಯಾಕೆ ನೋಟಿಫಿಕೇಶನ್ ಕೊಟ್ಟಿದ್ದಾರೆ ಇರುವ ದರ್ಗಾದ ಬಗ್ಗೆ ನಾವು ಪ್ರಶ್ನೆ ಮಾಡಲ್ಲ. ಅದು ಅಕ್ರಮ ಸಕ್ರಮ ಅದನ್ನು ಈಗ ಚರ್ಚೆ ಮಾಡಲ್ಲ. ದರ್ಗಾ ಇದ್ದರೂ ಕೂಡ ಇನ್ನೊಂದು ದರ್ಗಾ ಯಾಕೆ ಅನ್ನೋದು ನಮ್ಮ ಪ್ರಶ್ನೆ. ಅಲ್ಲಿ ಆಟೋಗಳು ನಿಲ್ಲಿಸುತ್ತಾರೆ ಬೆಂಕಿ ಹಚ್ಚಿ ನಮ್ಮ ಮೇಲೆ ಹಾಕಿದ್ರೆ ಯಾರು ಹೊಣೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇದನ್ನೂ ಓದಿ: ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯರಿಗೆ ಅಭಿನಂದನಾ ಸಮಾರಂಭ..!


ಈ ಬಗ್ಗೆ ಕಮಿಷನರ್ ಗೆ ದೂರು ಕೊಡುತ್ತೇನೆ. ಕೂಡಲೇ ಅಲ್ಲಿ ಇರುವಂತ ಎಲ್ಲವನ್ನೂ ಖಾಲಿ ಮಾಡಿಸಬೇಕು. ಒಂದು ಧಾರ್ಮಿಕ ಕೇಂದ್ರವಿದೆ ಅದನ್ನು ಬಿಟ್ಟು ಮಿಕ್ಕ ಏನು ಕೂಡ ಅಲ್ಲಿರೋದು ಬೇಡ. ದರ್ಗಾ ಇರುವ ಯಾವ ಮ್ಯಾಪ್ ನಲ್ಲಿ ಉಲ್ಲೇಖ ಇಲ್ಲ. ಏನಾದ್ರೂ ಇದ್ದರೆ ದಾಖಲೆಗಳನ್ನು ಕೊಡಲಿ  ಎಂದು ಶಾಸಕ ಶ್ರೀವತ್ಸ ಹೇಳಿದರು.BHS Women's Sambalpuri Cotton Saree (Nuapatanapata_Red Green)