Skip to main content
ವಿಡಿಯೋ
1/2
general

ನಂಜೇಗೌಡರ ಗೆಲುವಿಗೆ ಅಸಿಂಧು ತೀರ್ಪು! ಹೈಕೋರ್ಟ್ ಹೇಳಿದ ಪ್ರಮುಖ ಕಾರಣಗಳು ಏನೇನು ಗೊತ್ತಾ?

By Pavitra Ganapathi Baradavalli
ನಂಜೇಗೌಡರ ಗೆಲುವಿಗೆ ಅಸಿಂಧು ತೀರ್ಪು! ಹೈಕೋರ್ಟ್ ಹೇಳಿದ ಪ್ರಮುಖ ಕಾರಣಗಳು ಏನೇನು ಗೊತ್ತಾ?

2023ರ ಮಾಲೂರು ವಿಧಾನಸಭಾ ಮರು ಎಣಿಕೆಯಲ್ಲಿ 248 ಮತಗಳ ಗೆಲುವು ತೀರ್ಪು ನೀಡಿದ ಕೆ.ವೈ. ನಂಜೇಗೌಡರ ಆಯ್ಕೆ ಹೈಕೋರ್ಟ್ ಅಸಿಂಧು ಮಾಡಿದಂತೆ, ಮತ ಎಣಿಕೆ ಅಕ್ರಮ ಮತ್ತು ‘ವೋಟ್ ಚೋರಿ’ ಆರೋಪಗಳು ರಾಜಕೀಯ ಗಲಭೆಗೆ ದಾರಿ ತೆರೆಯುತ್ತಿವೆ.

ಕರ್ನಾಟಕ ಕಾಂಗ್ರೆಸ್ ಮತಗಳ್ಳತನ ಆರೋಪಗಳ ಕುರಿತು ರಾಷ್ಟ್ರಮಟ್ಟದ ಅಭಿಯಾನಕ್ಕೆ ಚಾಲನೆ ನೀಡಿದ ಬೆನ್ನಲ್ಲೇ, ಮಾಲೂರು ಶಾಸಕ ಕೆ.ವೈ. ನಂಜೇಗೌಡರ ಆಯ್ಕೆಯನ್ನು ಮತ ಎಣಿಕೆ ಅಕ್ರಮದ ಕಾರಣಕ್ಕೆ ಕರ್ನಾಟಕ ಹೈಕೋರ್ಟ್ ಅಸಿಂಧುಗೊಳಿಸಿದೆ. ಈ ಬೆಳವಣಿಗೆಯನ್ನು ಬಿಜೆಪಿ ನಾಯಕರು 'ವೋಟ್ ಚೋರಿ' ಆರೋಪ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಪ್ರಬಲ ಅಸ್ತ್ರವಾಗಿ ಬಳಸುತ್ತಿದ್ದಾರೆ. 2023ರ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಎಣಿಕೆಗೆ ಆದೇಶಿಸಿರುವ ಹೈಕೋರ್ಟ್, ನಾಲ್ಕು ವಾರಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ದೇಶಿಸಿದೆ. ಅಲ್ಲದೆ, ಹಾಲಿ ಶಾಸಕ ನಂಜೇಗೌಡರ ಸ್ಥಾನವನ್ನು ಅಸಿಂಧುಗೊಳಿಸಿದೆ.ಇದನ್ನೂ ಓದಿ: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೆ ಸರ್ಕಾರದ ಚುರುಕು ಹೆಜ್ಜೆ: 8 ಲಕ್ಷ ಬಿಪಿಎಲ್‌ ಕಾರ್ಡ್‌ ರದ್ದು..!


ಸದ್ಯಕ್ಕೆ, ನಂಜೇಗೌಡರ ಪರ ವಕೀಲರ ಮನವಿ ಮೇರೆಗೆ, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿ ಹೈಕೋರ್ಟ್ ತನ್ನ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಈ ತೀರ್ಪಿನಿಂದ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಸಂತಸಗೊಂಡಿದ್ದು, ನಂಜೇಗೌಡರು ಮಾತ್ರ ಆಘಾತಕ್ಕೊಳಗಾಗಿದ್ದಾರೆ.

ನಂಜೇಗೌಡರು ಹೇಳಿರುವ ಪ್ರಕಾರ, ಅವರು ಮರುಎಣಿಕೆಗೆ ಸಿದ್ಧರಿದ್ದರು. ಆದರೆ ಕೋರ್ಟ್ ನಮ್ಮ ಆಯ್ಕೆಯನ್ನು ಅಸಿಂಧುಗೊಳಿಸಿರುವುದು ಬೇಸರ ತಂದಿದೆ. ನಾವು ಮೇಲ್ಮನವಿ ಸಲ್ಲಿಸುತ್ತೇವೆ," ಎಂದು ತಿಳಿಸಿದ್ದಾರೆ. ಜಿಲ್ಲಾ ಚುನಾವಣಾಧಿಕಾರಿ ಮತ ಎಣಿಕೆಯ ವಿಡಿಯೋ ಸಲ್ಲಿಸದ ಕಾರಣ ಅವರ ವಿರುದ್ಧವೂ ಕ್ರಮಕ್ಕೆ ಹೈಕೋರ್ಟ್ ಸೂಚಿಸಿದೆ.

ಮಾಲೂರು ಕ್ಷೇತ್ರದ ಮತ ಎಣಿಕೆ ದಿನ ನಡೆದದ್ದೇನು?ಇದನ್ನೂ ಓದಿ: ಮಾಜಿ ಸಿಎಂ ಬ್ಯಾಕ್‌ ಖಾತೆ ಹ್ಯಾ ಕ್‌ ಮಾಡಿದ ಖದೀಮರು..ಬ್ಯಾಂಕ್‌ ಖಾತೆಯಿಂದ 3 ಲಕ್ಷ ಹಣ ಖೋತಾ…!!

2023ರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕೋಲಾರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ನಡೆದಿತ್ತು. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಮಾಲೂರು ತ್ರಿಕೋನ ಪೈಪೋಟಿಯಿಂದ ಗಮನ ಸೆಳೆದಿತ್ತು. ಕಾಂಗ್ರೆಸ್‌ನ ನಂಜೇಗೌಡ, ಬಿಜೆಪಿಯ ಮಂಜುನಾಥಗೌಡ ಹಾಗೂ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು.

ಆರಂಭದಲ್ಲಿ ನಂಜೇಗೌಡ ಮತ್ತು ಮಂಜುನಾಥಗೌಡ ನಡುವೆ ಸ್ಪರ್ಧೆಯಿದ್ದರೂ, ನಂತರ ಹೂಡಿ ವಿಜಯ್ ಕುಮಾರ್ ಮುನ್ನಡೆ ಸಾಧಿಸಿ ಗೆಲುವು ಬಹುತೇಕ ಖಚಿತ ಎಂಬ ವಾತಾವರಣ ನಿರ್ಮಾಣವಾಗಿತ್ತು. ಕಾಂಗ್ರೆಸ್‌ನ ಕೆಲವು ರಾಜ್ಯ ನಾಯಕರು ಸಹ ಪಕ್ಷೇತರ ಅಭ್ಯರ್ಥಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು.ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ವರುಣನ ಆರ್ಭಟ ಭೀಕರ ಪ್ರವಾಹ..!

ಕೊನೆಯ ಮೂರು ಸುತ್ತುಗಳು ಬಾಕಿ ಇರುವಾಗ, ಹೂಡಿ ವಿಜಯ್ ಕುಮಾರ್ ಹಿನ್ನಡೆ ಅನುಭವಿಸಿ, ಮಂಜುನಾಥಗೌಡ ಮತ್ತು ನಂಜೇಗೌಡರ ನಡುವೆ ಮತ್ತೆ ಪೈಪೋಟಿ ಶುರುವಾಯಿತು. ಒಂದು ಸುತ್ತು ಬಾಕಿ ಇರುವಾಗ ಮಂಜುನಾಥಗೌಡರ ಕಾರ್ಯಕರ್ತರು ವಿಜಯೋತ್ಸವಕ್ಕೆ ಸಿದ್ಧರಾಗಿದ್ದರು. ಅವರಿಗೆ ಗೆಲುವು ಖಚಿತ ಎಂದು ದೂರವಾಣಿ ಮೂಲಕ ತಿಳಿಸಲಾಗಿತ್ತು. ಆದರೆ, ಅವರು ಮತ ಎಣಿಕೆ ಕೇಂದ್ರಕ್ಕೆ ತಲುಪುವಷ್ಟರಲ್ಲಿ ಪರಿಸ್ಥಿತಿ ಬದಲಾಗಿತ್ತು. ಕೊನೆಯ ಸುತ್ತಿನ ಎಣಿಕೆಯಲ್ಲಿ ನಂಜೇಗೌಡರು 248 ಮತಗಳ ಅಂತರದಿಂದ ಗೆದ್ದಿದ್ದಾರೆಂಬ ಮಾಹಿತಿ ಹೊರಬಿದ್ದ ತಕ್ಷಣ ಮಂಜುನಾಥಗೌಡ ಮತ್ತು ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ: ಬೆಂಗಳೂರು ರಸ್ತೆ ಸಮಸ್ಯೆಗಳು ಗಂಭೀರ - ʻಆಡಳಿತ ವೈಫಲ್ಯʼ ಎಂದ ಪ್ರಮುಖ ಟೆಕ್‌ ಕಂಪನಿಗಳ ಮುಖ್ಯಸ್ಥರಿಂದ ಸರ್ಕಾರದ ಮಧ್ಯಸ್ತಿಕೆಗೆ ಒತ್ತಾಯ.!


ಮತ ಎಣಿಕೆಯಲ್ಲಿ ಅಕ್ರಮದ ಆರೋಪ:

ಮತ ಎಣಿಕೆಯಲ್ಲಿ ಏನೋ ಅಕ್ರಮ ನಡೆದಿದೆ ಎಂದು ಮಂಜುನಾಥಗೌಡರ ಬೆಂಬಲಿಗರು ಅನುಮಾನ ವ್ಯಕ್ತಪಡಿಸಿ, ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆಯಿತು. ಮರು ಎಣಿಕೆಗೆ ಮಂಜುನಾಥಗೌಡರು ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದರೂ, ಅವರಿಗೆ ಅವಕಾಶ ನೀಡಲಾಗಿಲ್ಲ.ಇದನ್ನೂ ಓದಿ: ಕೊಪ್ಪಳದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿಯಿಂದ ಬಿಜೆಪಿಗೆ ತಿರುಗೇಟು..!

ಐದು ಬೂತ್‌ಗಳ ಮತ ಎಣಿಕೆಯನ್ನು ಲಾಟರಿ ಮೂಲಕ ಪರಿಶೀಲಿಸಿ, ವ್ಯತ್ಯಾಸ ಕಂಡುಬಂದರೆ ಮರು ಎಣಿಕೆಗೆ ಅವಕಾಶ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ, ಆ ಐದು ಬೂತ್‌ಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬರದ ಕಾರಣ ಮರು ಎಣಿಕೆಗೆ ಅವಕಾಶ ನೀಡಲಿಲ್ಲ. ಅಂದಿನ ಜಿಲ್ಲಾಧಿಕಾರಿ ವೆಂಕಟರಾಜು ಕಾಂಗ್ರೆಸ್ ಅಭ್ಯರ್ಥಿಯ ಗೆಲುವನ್ನು ಘೋಷಿಸಿದರು.

ನಂತರ, ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಹೈಕೋರ್ಟ್ ಮೊರೆ ಹೋಗಿ ಮರು ಎಣಿಕೆಗೆ ಮನವಿ ಸಲ್ಲಿಸಿದ್ದರು. ಮಾಲೂರು ಫಲಿತಾಂಶದ ಪ್ರಕಾರ, ಕೆ.ವೈ. ನಂಜೇಗೌಡ (ಕಾಂಗ್ರೆಸ್) 50,955 ಮತಗಳನ್ನು, ಮಂಜುನಾಥಗೌಡ (ಬಿಜೆಪಿ) 50,707 ಮತಗಳನ್ನು, ಹೂಡಿ ವಿಜಯ್ ಕುಮಾರ್ (ಪಕ್ಷೇತರ) 49,362 ಮತಗಳನ್ನು, ಮತ್ತು ಜಿ.ಇ. ರಾಮೇಗೌಡ (ಜೆಡಿಎಸ್) 17,627 ಮತಗಳನ್ನು ಪಡೆದಿದ್ದರು. ಗೆಲುವಿನ ಅಂತರ 248 ಆಗಿತ್ತು.ಇದನ್ನೂ ಓದಿ: ಭಕ್ತರು ನೀಡಿದ ಕಾಣಿಕೆ ಹಣವನ್ನು ಸತ್ಕಾರ್ಯಗಳಿಗೆ ಬಳಸಿ, ಮದುವೆ ಸಭಾಂಗಣ ನಿರ್ಮಿಸುವುದಕ್ಕಲ್ಲ. ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ತಿರುಗೇಟು..!!

ಎರಡು ವರ್ಷಗಳ ಕಾಲ ನಡೆದ ವಾದ ಪ್ರತಿವಾದಗಳ ನಂತರ, ಮಂಗಳವಾರ ಹೈಕೋರ್ಟ್ ಮರು ಎಣಿಕೆಗೆ ಆದೇಶ ನೀಡಿದೆ. ಅಂದಿನ ಕೋಲಾರ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ವೆಂಕಟರಾಜು ಅವರಿಗೆ, ಮತ ಎಣಿಕೆ ಕಾರ್ಯದ ದೃಶ್ಯಾವಳಿಗಳನ್ನು ಚಿತ್ರೀಕರಿಸಿ ಶೇಖರಿಸಿಟ್ಟಿರುವ ಹಾರ್ಡ್‌ಡಿಸ್ಕ್ ಅನ್ನು ಮೆಸರ್ಸ್‌ ಐಕಿಯಾ ಬಿಸಿನೆಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ಯಿಂದ ಪಡೆಯಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ವಿವರಣೆ ನೀಡಿ ಪ್ರಮಾಣಪತ್ರ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದೆ.Garden Vareli Women's Linen Saree With Zari Border