ಬೆಂಗಳೂರು: ದೈನಂದಿನ ಜಗತ್ತಿನಲ್ಲಿ ಎಲ್ಲಿ ನೋಡಿದರು ಡಿಜಿಟಲ್ ಉಪಕರಣಗಳು ತುಂಬಿಕೊಂಡಿವೆ ಹಾಗಾಗಿ ಅಂತಹ ಉಪಕರಣಗಳನ್ನು ಬಳಸಿಕೊಂಡು ಅನಗತ್ಯ ಕೆಲಸಕ್ಕೆ ಬಳಸಿಕೊಳ್ಳುವುದು ಹೆಚ್ಚು ಅಂದರೆ ಹ್ಯಾಕಿಂಗ್ ಕೆಲಸಗಳಿಗೆ ಇತ್ಯಾದಿ ಒಬ್ಬರ ಖಾತೆಯನ್ನು ಹ್ಯಾಕ್ ಮಾಡಿ ಹೆದರಿಸುವುದು ಹಣ ವಸೂಲಿ ಮಾಡುವುದುಹೀಗೆ ಮುಂತಾದವುಗಳಾಗಿವೆ. ಇದಕ್ಕೆ ಹೊರತಾಗಿ ಯಾವ ರಾಜಕಾರಣಿ ಇಲ್ಲ ಯಾವ ಸೂಪರ್ ಸ್ಟಾರ್ ನಟನೂ ಹೊರತಾಗಿಲ್ಲ.ಇದನ್ನೂ ಓದಿ: ಬೆಂಗಳೂರು ನಗರದಲ್ಲಿ ರೌಡಿಗಳ ಆಕ್ಟಿವಿಟಿ ಹೆಚ್ಚಾದ ಹಿನ್ನೆಲೆ: ರೌಡಿಗಳ ಊರು ಬಿಡಿಸಲು ಮುಂದಾದ ಸಿಸಿಬಿ
ಎಲ್ಲರ ಖಾತೆಗಳು ಕೊಂಚ ಸಮಯ ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಹ್ಯಾಕ್ ಆಗಿರುವುದುಂಟು ಅದೇ ರೀತಿಯಾಗಿ ಈಗ ಸದಾನಂದ ಗೌಡರ ಬ್ಯಾಂಕ್ ಖಾತೆಯೂ ಈಗ ಹ್ಯಾಕ್ ಆಗಿದೆ. ಮಾಜಿ ಸಿಎಂ ಸದಾನಂದ ಗೌಡ (Sadananda Gowda) ಅವರ ಬ್ಯಾಂಕ್ ಖಾತೆಯನ್ನು (Bank Account) ಹ್ಯಾಕ್ ಮಾಡಿ ಸೈಬರ್ ಕಳ್ಳರು (Cyber Thieves) 3 ರೂಪಾಯಿ ಲಕ್ಷ ಹಣವನ್ನು ಕದ್ದಿದ್ದಾರೆ.ಇದನ್ನೂ ಓದಿ: ಪಕ್ಕದ ಮನೆಯವರ ಸಹಾಯ ಪಡೆದು ಮನೆ ದೋಚಿದ ಖತರ್ನಾಕ್ ಕಳ್ಳ ಅಂದರ್..!!
ಪ್ರಧಾನಿ ನರೇಂದ್ರ ಮೋದಿ 75 ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ 75 ಪೌರ ಕಾರ್ಮಿಕರಿಗೆ ಆರ್‌ಎಂವಿ ಎಕ್ಸ್ ಟೆಕ್ಷನ್‌ನ ಬಿಬಿಎಂಪಿ ಪಾರ್ಕ್‌ನಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಆ ಕಾರ್ಯಕ್ರಮಕ್ಕೆ ಆಗಮಿಸಿದ ಡಿವಿಎಸ್ ಮಾಧ್ಯಮಗಳೊಂದಿಗೆ ಮಾತನಾಡಿ ನಿನ್ನೆ ನನ್ನ 3 ಅಕೌಂಟ್ ಅನ್ನು ಹ್ಯಾಕ್ ಮಾಡಲಾಗಿದೆ. ಮತ್ತು ಹ್ಯಾಕ್ ಮಾಡಲಾದ ಅಕೌಂಟ್‌ನಿಂದ ತಲಾ ಒಂದು ಒಂದು ಲಕ್ಷ ರೂಪಾಯಿಗಳನ್ನು ಕದ್ದಿದ್ದಾರೆ ಎಂದು ಹೇಳದರು.ಇದನ್ನೂ ಓದಿ: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೆ ಸರ್ಕಾರದ ಚುರುಕು ಹೆಜ್ಜೆ: 8 ಲಕ್ಷ ಬಿಪಿಎಲ್ ಕಾರ್ಡ್ ರದ್ದು..!
ಒಟ್ಟು ನಾನು 3 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದೇನೆ ಮತ್ತು ನೀವೆಲ್ಲರೂ ಈ ವಿಚಾರದಲ್ಲಿ ಹುಷಾರಾಗಿರಿ ಎಂದು ಎಚ್ಚರಿಸಿದರು. ಹೆಚ್ಡಿಎಫ್ಸಿ, ಎಸ್ಬಿಐ ಹಾಗೂ ಆಕ್ಸಿಸ್ ಬ್ಯಾಂಕಿನ ಖಾತೆಯಲ್ಲಿದ್ದ ಹಣ ಕಳ್ಳತನವಾಗಿದೆ. ಯುಪಿಐ ಮೂಲಕ ಹ್ಯಾಕ್ ಮಾಡಿ ಹಣ ಕಳ್ಳತನ ಮಾಡಿದ್ದು ಸೈಬರ್ ಕ್ರೈಮ್ ಗೆ ದೂರು ನೀಡುತ್ತೇನೆ ಎಂದು ಹೇಳಿದರು.Garden Vareli Women's Linen Saree With Zari Border