ಬೆಂಗಳೂರಿನ ಬಾಪೂಜಿನಗರದ ಶೋಭಾ ಥಿಯೇಟರ್ ಬಳಿ ಕಳೆದೆರಡು ದಿನಗಳ ಹಿಂದೆ (ಸೆಪ್ಟೆಂಬರ್ 17, 2025) ನಡೆದ ಒಂದು ಚಂಚಲ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಜೊಮಾಟೋ ಡೆಲಿವರಿ ಬಾಯ್‌ಗೆ ಕೆಲವರು ಕೈಗೆ ಸಿಕ್ಕ ಸಿಕ್ಕ ವಸ್ತುಗಳಿಂದ ಹೊಡೆದು ತೀವ್ರ ಹಲ್ಲೆ ನಡೆಸಿದ್ದಾರೆ.
ಈ ಘಟನೆ ಬ್ಯಾಟರಾಯನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದ್ದು, ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ನಡೆದಿರಬಹುದು ಎಂದು ಸ್ಥಳೀಯರು ಊಹಿಸುತ್ತಿದ್ದಾರೆ. ಶೋಭಾ ಥಿಯೇಟರ್ ಬಳಿ, ಬಾಪೂಜಿನಗರದ ರಾತ್ರಿ ಸಮಯದಲ್ಲಿ ನಡೆದಿದೆ, ಜೊಮಾಟೋ ಡೆಲಿವರಿ ಬಾಯ್ ಅವರಿಗೆ ತೀವ್ರವಾದ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
4-5 ಜನ ಯುವಕರು, ಡೆಲಿವರಿ ಬಾಯ್ ನನ್ನು ಹಿಂಸೆ ಮಾಡಿ ಹಲ್ಲೆ ನಡೆಸಿ ಹೊಡೆದಿದ್ದಾರೆ. JM LOOKS Fancy Pointed Toe Sandals: Stylish Stiletto Heels with Ankle Strap, Comfortable for Women & Girls
ವೀಡಿಯೋದಲ್ಲಿ ಕಾಣುವಂತೆ, ಹಲ್ಲೆದಾರರು ಯಾವುದೋ ಉದ್ದೇಶ ಇಟ್ಟುಕೊಂಡು ಕಿರುಚಾಡುತ್ತಾ ಹಲ್ಲೆ ನಡೆಸಿದ್ದಾರೆ. ಡೆಲಿವವರಿ ಬಾಯ್ ಗೆ ತಲೆ ಮತ್ತು ದೇಹದ ಕೆಲವು ಭಾಗಗಳಿಗೆ ತೀವ್ರವಾದ ಗಾಯಗಳು ಆಗಿವೆ, ಆದರೆಜೀವಕ್ಕೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ. ಗುಂಡಿಯೂರಾಗಿ ಬದಲಾಗುತ್ತಿರುವ ಬೆಂಗಳೂರನ್ನು ಬಿಟ್ಟು ಹೋಗಲು ಉದ್ಯಮಿಗಳು ನಿರ್ಧಾರ, ಬ್ಲಾಕ್ ಮೇಲ್‌ಗೆ ಹೆದರಲ್ಲ ಎಂದು ಡಿಕೆ ಗರಂ..!!
ಇನ್ನೂ ಯಾವುದೇ FIR (ಪ್ರಕರಣ) ದಾಖಲಾಗಿಲ್ಲ. ಬ್ಯಾಟರಾಯನಹಳ್ಳಿ ಪೊಲೀಸ್ ಠಾಣೆಯು ತನಿಖೆ ನಡೆಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೋವನ್ನು ಆಧರಿಸಿ ತನಿಖೆಯನ್ನು ತ್ವರಿತಗೊಳಿಸಲಾಗುವುದು ಎಂದು ಸ್ಥಳೀಯರು ತಿಳಿಸಿದ್ದಾರೆ.