Skip to main content
ವಿಡಿಯೋ
1/2
crime

ಬೈಯಪ್ಪನಹಳ್ಳಿ ಬಳಿ ಕ್ಯಾಬ್ ಡ್ರೈವರ್ ಮೇಲೆ ಯುವಕರ ತಂಡ ಹಲ್ಲೆ...

By Vinutha U
ಬೈಯಪ್ಪನಹಳ್ಳಿ ಬಳಿ ಕ್ಯಾಬ್ ಡ್ರೈವರ್ ಮೇಲೆ ಯುವಕರ ತಂಡ ಹಲ್ಲೆ...

ಮನಸ್ಸಿಗೆ ಬಂದಂತೆ ವ್ಯಕ್ತಿಯ ಮೇಲೆ ಥಳಿಸಿದ್ದಾರೆ, ಮತ್ತು ಆತನ ಫೋನ್‌ ಕಸಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.  ಈ ಜಾಗದಲ್ಲಿ ನೈಟ್ ಬೀಟ್ ಪೊಲೀಸರು ಡ್ಯೂಟಿ ಮಾಡಲಿ ಎಂದು ಚಾಲಕರ ಮನವಿ ಬಾಣಸವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು. ಆರೋಪಿಗಳ ಪತ್ತೆಗಾಗಿ ಪೊಲೀಸರ ಶೋಧ ಕಾರ್ಯ.

ಬೆಂಗಳೂರು: ಡ್ಯೂಟಿ ಮುಗಿಸಿ ರಾತ್ರಿ ಕ್ಯಾಬ್‌ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಡ್ರೈವರ್‌ ಮೇಲೆ ನಾಲ್ಕೈದು ಜನರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಇತ್ತೀಚಿನ ದಿನಗಳಲ್ಲಿ ಯಾರೋ ದುಡಿದು ತಂದು ಹಾಕಲಿ ಕೂತು ತಿನ್ನೋಣ ಎನ್ನುವರ ಮಧ್ಯೆ ಅದೆಷ್ಟೋ ಜನರು ಸ್ವಂತ ಕಾಲಿನ ಮೇಲೆ ನಿಂತುಕೊಂಡು ದುಡಿಯಲು ಪ್ರಾರಂಭಿಸುತ್ತಿರುತ್ತಾರೆ, ಊರಿಂದ ಊರು ಬಿಟ್ಟು ಯಾವುದೋ ಗೊತ್ತಿಲ್ಲದ ಊರಿಗೆ ಬಂದಿರುತ್ತಾರೆ,  ಬೆಳಿಗ್ಗೆ ಇಂದ ಕಷ್ಟ ಪಟ್ಟು ದುಡಿದು ರಾತ್ರಿ ದಣಿವಾದಾಗ ಕಾರಿನಲ್ಲೇ ವಿಶ್ರಾಂತಿ ಪಡೆದುಕೊಳ್ಳುತ್ತಾರೆ. ಆದರೆ ಅದನ್ನು ಆಳುಮಾಡಲೆಂದೆ ಕೆಲವರು ಅವರ ಜೀವನದ ಮೇಲೆ ಕಲ್ಲು ಹಾಕುತ್ತಾರೆ. ಇದೇ ರೀತಿಯ ಒಂದು ಘಟನೆ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ. JM LOOKS Fancy Pointed Toe Sandals: Stylish Stiletto Heels with Ankle Strap, Comfortable for Women & Girls

ರಾತ್ರಿ ಡ್ಯೂಟಿ ಮಾಡಿ ಸ್ವಲ್ಪ ರೆಸ್ಟ್ ಮಾಡಬೇಕೆಂದು ತನ್ನ ಕಾರಿನಲ್ಲೇ ವಿಶ್ರಾಂತಿ ಪಡೆಯುತ್ತಿದ್ದನು, ಕಾರಿನಲ್ಲಿ ಮಲಗಿದ್ದ ವ್ಯಕ್ತಿಯನ್ನು ನೋಡಿ ಬೈಯಪ್ಪನಹಳ್ಳಿ ಸಮೀಪದ ಯುವಕರು ಕಾರಿನ ಮೇಲೆ ಎಂಜಲು ಉಗಿದು ಗಲಾಟೆ ಮಾಡಿದ್ದಾರೆ. ಆಗ ಕಾರಿನ ಗ್ಲಾಸ್‌ ತೆಗೆದು ಯಾಕೆ ಈ ರೀತಿ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದಾಗ ಕಾರಿನಿಂದ ಕೆಳಗೆ ಬಲವಂತವಾಗಿ ಇಳಿಸಿ ಅವನ ಮೇಲೆ ಹಲ್ಲೆ ನಡೆಸಿದ್ದಾರೆ, ಅವರಿಂದ ತಪ್ಪಿಸಿಕೊಳ್ಳಲು ಕಿರುಚಿಕೊಂಡಾಗ ಅವನ ಮುಖದ ಮೇಲೆ ಹೊಡೆದಿದ್ದಾರೆ. ಎಂ.ಬಿ. ಪಾಟೀಲ್ ಆಕ್ರೋಶ: ಲಿಂಗಾಯತ ಜಾತಿ ಗಣತಿಗೆ ಸಿಟ್ಟು, ಕ್ಯಾಬಿನೆಟ್ ಸಭೆ ಕಂಗಾಲು!