Skip to main content
ವಿಡಿಯೋ
1/2
politics

ಎಂ.ಬಿ. ಪಾಟೀಲ್ ಆಕ್ರೋಶ: ಲಿಂಗಾಯತ ಜಾತಿ ಗಣತಿಗೆ ಸಿಟ್ಟು, ಕ್ಯಾಬಿನೆಟ್ ಸಭೆ ಕಂಗಾಲು!

By Vinutha U
ಎಂ.ಬಿ. ಪಾಟೀಲ್ ಆಕ್ರೋಶ: ಲಿಂಗಾಯತ ಜಾತಿ ಗಣತಿಗೆ ಸಿಟ್ಟು, ಕ್ಯಾಬಿನೆಟ್ ಸಭೆ ಕಂಗಾಲು!

ಸಿದ್ದರಾಮಯ್ಯ ನೇತೃತ್ವದ ಕ್ಯಾಬಿನೆಟ್ ಸಭೆಯಲ್ಲಿ ಎಂ.ಬಿ. ಪಾಟೀಲ್ ಲಿಂಗಾಯತರನ್ನು ತುಂಡು ಮಾಡಲು ಯಾರು ಅಧಿಕಾರ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಟೇಬಲ್ ಕುಟ್ಟಿ, ಕಡತಗಳನ್ನು ಎಸೆದ ಘಟನೆ ಸಭೆಯನ್ನು ಭಾರೀ ಅಸಹನೀಯವಾಗಿ ಮಾಡಿತು.

ಲಿಂಗಾಯತರನ್ನು ತುಂಡು ತುಂಡು ಮಾಡುತ್ತಿದ್ದೀರಿ ಎಂದು ಆರೋಪಿಸಿ ಸಚಿವ ಎಂ.ಬಿ. ಪಾಟೀಲ್ ಅವರು ಸಿದ್ದರಾಮಯ್ಯ ನೇತೃತ್ವದ ಕ್ಯಾಬಿನೆಟ್ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿ ಸಮೀಕ್ಷೆ ಮಾಡಲು ಯಾರು ಹೇಳಿದರು? ಕುಲಶಾಸ್ತ್ರೀಯ ಅಧ್ಯಯನ ಯಾರು ಮಾಡೋದು? ಎಂದು ಪ್ರಶ್ನಿಸಿದ್ದಾರೆ. ಸಭೆಯಲ್ಲಿ ಲಿಂಗಾಯತ ಶಾಸಕರು ಜಾತಿ ಗಣತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಘಟನೆಗೆ ಕಾರಣವಾಗಿದೆ.

ಸಭೆಯಲ್ಲಿ ಎದ್ದುನಿಂತ ಎಂ.ಬಿ. ಪಾಟೀಲ್, ಟೇಬಲ್ ಕುಟ್ಟಿ ಕೂಗಾಡಿದ್ದಾರೆ. ನಮ್ಮ ಸಮಾಜವನ್ನು ತುಂಡು ಮಾಡಲು ನಿಮಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿ ಕಡತಗಳನ್ನು ಎಸೆದು ಆಕ್ರೋಶ ಹೊರಹಾಕಿದ್ದಾರೆ. ಅವರ ಈ ವರ್ತನೆಯಿಂದ ಸಭೆಯಲ್ಲಿದ್ದ ಇತರ ಸಚಿವರು ಮತ್ತು ಅಧಿಕಾರಿಗಳು ದಂಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. JM LOOKS Fancy Pointed Toe Sandals: Stylish Stiletto Heels with Ankle Strap, Comfortable for Women & Girls

ಇದುವರೆಗೆ ಕ್ಯಾಬಿನೆಟ್ ಸಭೆಗಳು ಸಾಮಾನ್ಯವಾಗಿ ನಡೆಯುತ್ತಿದ್ದವು. ಆದರೆ ಇಂದಿನ ಸಭೆ ವಿಧಾನಸಭೆಯ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ವಾಗ್ವಾದದಂತೆ ಭಾಸವಾಯಿತು. ಸಚಿವರಾದ ಈಶ್ವರ್ ಖಂಡ್ರೆ, ಯಾವ ಆಧಾರದ ಮೇಲೆ ಹೊಸ ಜಾತಿಗಳನ್ನು ಸೃಷ್ಟಿ ಮಾಡಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.ಬೆಂಗಳೂರಿನಲ್ಲಿ ನಿಲ್ಲದ ಕೃತ್ಯ: ಜೊಮಾಟೋ ಡೆಲಿವರಿ ಬಾಯ್‌ ಮೇಲೆ ತೀವ್ರ ಹಲ್ಲೆ...

ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕೂಡ ಈ ವಿಚಾರವಾಗಿ ಸಿಟ್ಟು ಹೊರಹಾಕಿದ್ದು, ನಮ್ಮ ಜಾತಿ ಬಗ್ಗೆ ನಿಮಗೆ ಏನು ಗೊತ್ತು? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಂ.ಬಿ. ಪಾಟೀಲ್ ಅವರ ಮಾತಿಗೆ ಧ್ವನಿಗೂಡಿಸಿದ ಎಚ್.ಕೆ. ಪಾಟೀಲ್, "ಈ ಜಾತಿಗಳನ್ನು ಯಾವುದೇ ಕಾರಣಕ್ಕೂ ಒಪ್ಪುವಂತದ್ದಲ್ಲ ಎಂದು ಗರಂ ಆಗಿ ಮಾತನಾಡಿದ್ದಾರೆ.