ಹದಿಹರೆಯದ ವಯಸ್ಸಿನ ಮಕ್ಕಳು ಸೋಷಿಯಲ್ ಮೀಡಿಯಾ ಬಳಕೆ ಮಾಡುವಂತೆ ಇಲ್ಲ ಎಂದು ಕೆಲವು ದೇಶಗಳು ಪ್ರತಿಪಾದಿಸಿದೆ. ಇದನ್ನು ಕಾನೂನಾತ್ಮಕ ದೃಷ್ಟಿಕೋನದಿಂದ ಪರಿಗಣಿಸಲ್ಪಟ್ಟು, ಸೋಷಿಯಲ್ ಮೀಡಿಯಾವನ್ನು ನಿಷೇಧಗೊಳಿಸುವ ಕಾನೂನು ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನ ಮಕ್ಕಳ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಥ್ರೆಡ್ಸ್ ಬಳಕೆದಾರರ ಖಾತೆಗಳನ್ನು ಸ್ಥಗಿತಗೊಳಿಸುವುದು ಎಂದು ʻಮೆಟಾʼ ತಿಳಿಸಿದೆ.
ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಪ್ರಭಾವ ಬೀರಲಿರುವ ಈ ಆನ್‌ಲೈನ್ ಫ್ಲಾಟ್‌ಫಾರ್ಮ್‌ಗಳನ್ನು ಮುಕ್ತಗೊಳಿಸುವಲ್ಲಿ ಶ್ರಮಿಸಲಾಗುತ್ತಿದೆ. ಇದಕ್ಕೆ ಪೂರಕವಾದ ಕಾನೂನನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ಜಾರಿ ಮಾಡಲಾಗಿತ್ತು. ಇದರ ಉಲ್ಲಂಘನೆ ಉಂಟಾದರೆ, ದಂಡವನ್ನು ವಿಧಿಸುವುದಾಗಿ ವರದಿಯಲ್ಲಿ ತಿಳಿಸಿದೆ.
ಈ ದೃಷ್ಟಿಯಿಂದ ಇದರ ಅನುಕೂಲ/ ಪ್ರಯೋಜನಗಳನ್ನು ನೋಡುವುದಾದರೆ:
ಹಾನಿಕಾರಕ ವಿಚಾರಗಳ ತಡೆ: ಮಕ್ಕಳನ್ನು ಸೋಷಿಯಲ್ ಮೀಡಿಯಾ ಬಳಕೆಯಿಂದ ದೂರವಿರಿಸುವುದರಿಂದಾಗಿ, ಸ್ವಯಂ-ಹಾನಿ ಹಾಗೂ ಹಿಂಸಾತ್ಮಕ ಕಂಟೆಂಟ್ ವೀಕ್ಷಣೆ, ಅವರನ್ನು ಪ್ರಚೋದಿಸುವ ಹಾಗೂ ಉತ್ತೇಜಿಸುವ ಮಾರಕಾಂಶಗಳಿಂದ ತಡೆಗಟ್ಟಬಹುದಾಗಿದೆ.
ಸೈಬರ್ ಬೆದರಿಕೆ ಅಥವಾ ಬುಲ್ಲಿಂಗ್: ಸೋಷಿಯಲ್ ಮೀಡಿಯಾದಲ್ಲಿ ಬಿತ್ತರವಾಗುವ ಕಾಮೆಂಟ್ಸ್, ಅದರ ಬಳಕೆಯಿಂದುಂಟಾಗುವ ಸೈಬರ್ ಬೆದರಿಕೆ ಹಾಗೂ ಮಾನಸಿಕವಾಗಿ ಪರಿಣಮಿಸುವ ನಕಾರಾತ್ಮಕ ಪರಿಣಾಮಗಳನ್ನು ತಡೆಗಟ್ಟಬಹುದು. ಸಲ್ಲದ ಹೋಲಿಕೆಗಳನ್ನು ಇಲ್ಲವಾಗಿಸಬಹುದು.
ಸುಧಾರಿತ ಯೋಗಕ್ಷೇಮ: ಅಂತರ್ಜಾಲದ ಜಾಡನ್ನು ಬಿಟ್ಟ ಮಕ್ಕಳು ಹೊರಪ್ರಪಂಚವನ್ನು ಅನ್ವೇಷಿಸುವತ್ತ ಹೆಜ್ಜೆಯಿಡಬಹುದು. ಇದರಿಂದ ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳಿಗೆ ಸಮಯ ಮೀಸಲಿಡಲು ಅವಕಾಶವಿದೆ. Noise Pulse 2 Max 1.85" Display, Bluetooth Calling Smart Watch, 10 Days Battery, 550 NITS Brightness, Smart DND, 100 Sports Modes, Smartwatch for Men and Women (Jet Black)
ಸಂಭಾವ್ಯ ಅನಾನುಕೂಲಗಳು ಎಂದರೆ:
ಸಕಾರಾತ್ಮಕ ಸಂಪರ್ಕಗಳ ಕಳೆದುಕೊಳ್ಳುವಿಕೆ: ಸಾಮಾಜಿಕ ಜಾಲತಾಣಗಳ ನಿರ್ಬಂಧಗಳಿಂದಾಗಿ ಇತರರೊಂದಿಗೆ ಸಂಪರ್ಕ ಸಾಧಿಸುವ ಸಾಮಾಜಿಕ ಅನುಭವಗಳು ಹಾಗೂ ಅವಕಾಶಗಳ ಪರಿಮಿತಿ ಉಂಟಾಗುತ್ತದೆ.
ಇತರೆ ವೇದಿಕೆಗಳ ಅವಲಂಬನೆ: ಸೋಷಿಯಲ್ ಮೀಡಿಯಾ ಟಚ್ ಸಿಗದೇ ಇರದ ಮಕ್ಕಳು ಇತರೆ ಗೇಮಿಂಗ್ ಹಾಗೂ ಅನಿಯಂತ್ರಿತ ಸೈಟ್‌ಗಳ ಮೊರೆ ಹೋಗಬಹುದು.
ನಿಯಮಿತ ಪರಿಣಾಮಕಾರಿತ್ವ: ಇದು ಜೆನ್ ಝೀ ಕಾಲವಾದ್ದರಿಂದ ಈ ನಿಯಮಗಳನ್ನು ಜಾರಿಗೊಳಿಸುವುದರಿಂದಾಗಿ ಸೀಮಿತ ಪರಿಣಾಮಕಾರಿತ್ವವನ್ನು ಕಾಣಬಹುದು ಎನ್ನಲಾಗಿದೆ.
ಒಟ್ಟಾರೆ, ಮಕ್ಕಳನ್ನು ಜಾಗತಿಕ ತೊಂದರೆಗೆ ಒಡಮಾಡದೇ, ಅವರ ಮಾನಸಿಕ ಹಾಗೂ ದೈಹಿಕ ಸ್ವಸ್ಥತೆಗೆ ಇಂಟರ್‌ನೆಟ್ ಹಾಗೂ ಸೋಷಿಯಲ್ ಮೀಡಿಯಾಗಳು ಮುಕ್ತ ಅವಕಾಶಗಳನ್ನು ನೀಡುವಂತಿದ್ದರೆ ಸ್ವಾಗತಾರ್ಹ ಹಾಗೂ ಇದರಿಂದ ದುಷ್ಟಪರಿಣಾಮ ಉಂಟಾಗುತ್ತಿದೆ ಎಂದರೆ ಆಕ್ಷೇಪಾರ್ಹ ಎಂಬ ಮಾನದಂಡಗಳು ಕೇಳಿಬಂದಿದೆ. ಇದನ್ನೂ ಓದಿ: 22 ವರ್ಷದ ಆದರ್ಶ್ ಹಿರೇಮಠ್ - ವಿಶ್ವದ ಕಿರಿಯ ಸ್ವಯಂ ಸಿರಿವಂತನ ಕಥೆ ಗೊತ್ತಾ!?