Skip to main content
ವಿಡಿಯೋ
1/3
crime

ಪಾಂಗಳದ ಪುರಂದರ ಗೌಡ & ತುಕಾರಾಂ ಗೌಡ ಅವರಿಂದ 20 ಕ್ಕೂ ಹೆಚ್ಚು ಅಕ್ರಮ ಸಮಾಧಿಗಳನ್ನು ತೋರಿಸುವ ವಿಚಾರ; ಹೊಸ ಮಾಹಿತಿ ಇದ್ದರೆ ಸಲ್ಲಸಿ ಎಂದು ಹೈಕೋರ್ಟ್‌ ತಾಕೀತು

By Gireesh Vasishta
ಪಾಂಗಳದ ಪುರಂದರ ಗೌಡ & ತುಕಾರಾಂ ಗೌಡ ಅವರಿಂದ 20 ಕ್ಕೂ ಹೆಚ್ಚು ಅಕ್ರಮ ಸಮಾಧಿಗಳನ್ನು ತೋರಿಸುವ ವಿಚಾರ; ಹೊಸ ಮಾಹಿತಿ ಇದ್ದರೆ ಸಲ್ಲಸಿ ಎಂದು ಹೈಕೋರ್ಟ್‌ ತಾಕೀತು

ಚಿನ್ನಯ್ಯನ ಬಳಿ ಇದ್ದ ಮಾಹಿತಿಗಿಂತ ಹೆಚ್ಚಿನ ಮಾಹಿತಿ ಇದ್ದರೆ ಮೆಮೊದ ಜೊತೆ ಪಾಂಡುರಂಗ ಗೌಡ ಮತ್ತು ತುಕಾರಾಂ ಗೌಡ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದ್ದು, ವಿಚಾರಣೆಯನ್ನು ಸೆಪ್ಟೆಂಬರ್‌ 25ಕ್ಕೆ ಮುಂದೂಡಿದೆ. ಇದೇ ವೇಳೆ ಆರೋಪಿಯಾಗಿರುವ ಚಿನ್ನಯ್ಯನ ಹೇಳಿಕೆ ದಾಖಲಿಸಿಕೊಳ್ಳಲು ವಿಳಂಬಿಸುತ್ತಿರುವ ಮ್ಯಾಜಿಸ್ಟ್ರೇಟ್‌ ನಡೆಗೆ ಹೈಕೋರ್ಟ್‌ ಆಶ್ಚರ್ಯ ವ್ಯಕ್ತಪಡಿಸಿದ್ದು, ಅದನ್ನು ಆದೇಶದಲ್ಲಿ ದಾಖಲಿಸಿದೆ.

ಧರ್ಮಸ್ಥಳ: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಲ ದೂರುದಾರನಾಗಿದ್ದ ಸಿ ಎನ್‌. ಚಿನ್ನಯ್ಯನೇ ಆರೋಪಿಯಾಗಿರುವುದರಿಂದ ಆತನ ಬಳಿ ಇದ್ದ ಮಾಹಿತಿಗೆ ಹೊರತಾದ ಹೆಚ್ಚಿನ ಮಾಹಿತಿಯನ್ನು ದಾಖಲೆಯಲ್ಲಿ ಸಲ್ಲಿಸಲು ಧರ್ಮಸ್ಥಳದ ಗ್ರಾಮದ ಪಾಂಗಳದ ಮನೆಯ ಪುರಂದರ ಗೌಡ ಮತ್ತು ತುಕಾರಾಂ ಗೌಡಗೆ ಕರ್ನಾಟಕ ಹೈಕೋರ್ಟ್ಗುರುವಾರ ನಿರ್ದೇಶಿಸಿದೆ. ತಾವು ತೋರಿಸುವ ಸ್ಥಳಗಳಲ್ಲಿ ಅಗೆಯುವಂತೆ ವಿಶೇಷ ತನಿಖಾ ದಳಕ್ಕೆ (ಎಸ್ಐಟಿ) ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ನಿರ್ದೇಶಿಸುವಂತೆ ಕೋರಿ ಪುರಂದರ ಗೌಡ ಮತ್ತು ತುಕಾರಾಂ ಗೌಡ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಚಿನ್ನಯ್ಯನ ಬಳಿ ಇದ್ದ ಮಾಹಿತಿಗಿಂತ ಹೆಚ್ಚಿನ ಮಾಹಿತಿ ಇದ್ದರೆ ಮೆಮೊದ ಜೊತೆ ಪಾಂಡುರಂಗ ಗೌಡ ಮತ್ತು ತುಕಾರಾಂ ಗೌಡ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದ್ದು, ವಿಚಾರಣೆಯನ್ನು ಸೆಪ್ಟೆಂಬರ್‌ 25ಕ್ಕೆ ಮುಂದೂಡಿದೆ. ಇದೇ ವೇಳೆ ಆರೋಪಿಯಾಗಿರುವ ಚಿನ್ನಯ್ಯನ ಹೇಳಿಕೆ ದಾಖಲಿಸಿಕೊಳ್ಳಲು ವಿಳಂಬಿಸುತ್ತಿರುವ ಮ್ಯಾಜಿಸ್ಟ್ರೇಟ್ನಡೆಗೆ ಹೈಕೋರ್ಟ್ಆಶ್ಚರ್ಯ ವ್ಯಕ್ತಪಡಿಸಿದ್ದು, ಅದನ್ನು ಆದೇಶದಲ್ಲಿ ದಾಖಲಿಸಿದೆ. ಇದಕ್ಕೂ ಮುನ್ನ, ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ಹಿರಿಯ ವಕೀಲ ದೀಪಕ್ಖೋಸ್ಲಾ ಅವರುನಾವು ಗುರುತಿಸಿರುವ ಸ್ಥಳಗಳಲ್ಲಿ ಎಸ್ಐಟಿ ಪರಿಶೀಲನೆ ನಡೆಸಿದರೆ ಡಜನ್ಗಟ್ಟಲೇ ಅಸ್ಥಿಗಳು ದೊರೆಯಲಿವೆಎಂದರು. “ಆಗ ಪೀಠವು ಕಳೆದ ವಿಚಾರಣೆಯಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಿಗೆ ಮಾಹಿತಿ ಪಡೆದು ತಿಳಿಸಲು ನಿರ್ದೇಶಿಸಲಾಗಿತ್ತು. ಅವರು ಏನು ಹೇಳುತ್ತಾರೆಎಂದು ನೋಡೋಣ ಎಂದಿತು.ಇದನ್ನು ಓದಿ: ನೀವು ವಿಷ್ಣುವಿನ ಕಟ್ಟಾ ಭಕ್ತ ಎಂದು ಹೇಳುತ್ತೀರಿ. ಆದ್ದರಿಂದ ಈಗಲೇ ಹೋಗಿ ಪ್ರಾರ್ಥಿಸಿ ಎಂಬ CJI ಗವಾಯಿ ಹೇಳಿಕೆ ವಿವಾದ: ಕೊನೆಗೆ ಏನಾಯಿತು? ಇಲ್ಲಿದೆ ಮಾಹಿತಿ

ಆಗ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ಜಗದೀಶ್ಅವರುಎಸ್ಐಟಿಗೆ ಎರಡು ಮನವಿಗಳನ್ನು ನೀಡಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಮೂಲ ದೂರುದಾರ ಚಿನ್ನಯ್ಯ ನೀಡಿದ ಹೇಳಿಕೆ ಎರಡೂ ದೂರುಗಳ ಆಧಾರವಾಗಿದೆ. ಚಿನ್ನಯ್ಯ ಅವರು ಹಾಲಿ ಅರ್ಜಿದಾರರಿಗೆ ಪ್ರಕರಣದ ಬಗ್ಗೆ ನೀಡಿದ್ದ ಮಾಹಿತಿಯನ್ನು ಇದು ಒಳಗೊಂಡಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ಚಿನ್ನಯ್ಯ ಹೇಳಿದ್ದರು. ಧರ್ಮಸ್ಥಳದ ಆಡಳಿತ ಸೂಚನೆಯ ಮೇರೆಗೆ ದಫನ್ಮಾಡಿದ್ದು, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಮಹಿಳೆಯರು ಮತ್ತು ಶಾಲಾ ಮಕ್ಕಳ ದೇಹಗಳನ್ನು ದಫನ್ಮಾಡಿದ್ದಾಗಿ ಚಿನ್ನಯ್ಯ ಹೇಳಿದ್ದರು. ಮ್ಯಾಜಿಸ್ಟ್ರೇಟ್ನ್ಯಾಯಾಲಯದಲ್ಲಿ ಬಿಎನ್ಎಸ್‌ 183 ಅಡಿ ಚಿನ್ನಯ್ಯನ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತುಎಂದು ವಿವರಿಸಿದರು.

ಮುಂದುವರಿದು, “ಚಿನ್ನಯ್ಯನ ಹೇಳಿಕೆ ಆಧರಿಸಿ, ಆತನೇ ಗುರುತಿಸಿದ್ದ 13 ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು. ಅಗತ್ಯ ಅನುಮತಿ ಪಡೆದು ಕಾರ್ಯಕಾರಿ ಮ್ಯಾಜಿಸ್ಟ್ರೇಟ್ಉಪಸ್ಥಿತಿಯಲ್ಲಿ ಶವ ಉತ್ಖನನ ನಡೆಸಲಾಗಿತ್ತು. 13 ಸ್ಥಳಗಳ ಪೈಕಿ ಒಂದು ಸ್ಥಳದಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ಇದು ಪುರುಷನ ದೇಹ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹೇಳಿತ್ತು. ಎರಡನೇ ದೇಹ ಪತ್ತೆಯಾಗಿದ್ದು, ಅದು ಸಹ ಮಹಿಳೆಯ ಶವವಾಗಿರಲಿಲ್ಲ. ದೂರು ನೀಡುವ ಸಂದರ್ಭದಲ್ಲಿ ಚಿನ್ನಯ್ಯ ಒಪ್ಪಿಸಿದ್ದ ತಲೆಬರುಡೆಯು ಮಹಿಳೆಯದ್ದು ಎಂದು ಆತ ಬಿಎನ್ಎಸ್ಸೆಕ್ಷನ್‌ 164 ಹೇಳಿಕೆ ಮತ್ತು ದೂರಿನಲ್ಲಿ ಹೇಳಿದ್ದನು. ಆತ ನೀಡಿದ್ದ ತಲೆಬುರುಡೆಯು ಮಹಿಳೆಯದ್ದಲ್ಲ, ಪುರುಷನದ್ದು ಎಂದು ಎಫ್ಎಸ್ಎಲ್ವರದಿ ಹೇಳಿದೆ. ಇದು 30 ವರ್ಷದ ವ್ಯಕ್ತಿಯದ್ದಿರಬಹುದು ಎಂದೂ ಹೇಳಿದೆ. ಇದುವರೆಗೆ ನಡೆದಿರುವ ತನಿಖೆಯ ಪ್ರಕಾರ ಚಿನ್ನಯ್ಯ ನ್ಯಾಯಾಲಯದಲ್ಲಿ ಸೂಕ್ತ ಮಾಹಿತಿ ನೀಡಿಲ್ಲ. ಇದರಿಂದ ಎಸ್ಐಟಿಗೆ ಚಿನ್ನಯ್ಯ ಸುಳ್ಳು ಹೇಳುತ್ತಿದ್ದಾನೆ ಎಂದು ಅರ್ಥವಾಗಿತ್ತುಎಂದರು.TRASE Block Heels Sandals For Women, Dusky Stylish & Comfortable Footwear

ಹಂತದಲ್ಲಿ ಪೀಠವುಅರ್ಜಿದಾರರ ಕೋರಿಕೆ ಏನುಎಂದಿತು.-

ಇದಕ್ಕೆ ಜಗದೀಶ್ಅವರುನಾವು ಶವ ಹೂತಿರುವ ಸ್ಥಳಗಳನ್ನು ತೋರಿಸುತ್ತೇವೆ ಎಂದು ಎಸ್ಐಟಿಗೆ ಅರ್ಜಿದಾರರು ಮನವಿ ನೀಡಿದ್ದಾರೆ. ಮ್ಯಾಜಿಸ್ಟ್ರೇಟ್ಮುಂದೆ ಚಿನ್ನಯ್ಯನು ತಾನು ಪೊಲೀಸರಿಗೆ ಒಪ್ಪಿಸಿರುವ ತಲೆಬರುಡೆಯನ್ನು ತಾನು ಪತ್ತೆ ಮಾಡಿಲ್ಲ. ಬೇರೆ ಯಾರೋ ತನಗೆ ಕೊಟ್ಟರು. ನ್ಯಾಯಾಲಯದ ಮುಂದೆ ತಾನು ನೀಡಿರುವ ಹೇಳಿಕೆ ಸುಳ್ಳು ಎಂದು ಹೇಳಿದ್ದಾನೆ. ಬೇರೆಯವ ಸೂಚನೆಯಂತೆ ಹೇಳಿಕೆ ನೀಡಿದ್ದೇನೆ. ಆದರೆ, ಧರ್ಮಸ್ಥಳದಲ್ಲಿ ತಾನು ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದೇನೆ. ತಾನು ಹೂತಿರುವ ಶವಗಳನ್ನು ಪೊಲೀಸರು, ವೈದ್ಯರು ಪರಿಶೀಲಿಸಿದ್ದರು ಎಂದು ಹೇಳಿದ್ದಾನೆ. ಹೀಗಾಗಿ, ತನಿಖೆಯನ್ನು ಮುಕ್ತಾಯಗೊಳಿಸಲಾಗಿದೆಎಂದು ವಿವರಿಸಿದರು.ಇದನ್ನು ಓದಿ: ಸೌಜನ್ಯ ಮಾವ ವಿಠ್ಹಲ್‌ ಗೌಡ ವಿರುದ್ಧ SITಗೆ ದೂರು...ಧರ್ಮಸ್ಥಳದ ಶಾಂತಿಗೆ ಧಕ್ಕೆ ತಂದ ಆರೋಪ!

ಅದಕ್ಕೆ ಪೀಠವು ಕೋಸ್ಲಾ ಅವರನ್ನು ಕುರಿತುಸದ್ಯ ನೀವು ಅರ್ಜಿದಾರರ ಪರ ವಕೀಲರು, ಚಿನ್ನಯ್ಯನನ್ನು ಪ್ರತಿನಿಧಿಸುವಾಗ ಪ್ರಶ್ನೆ ಕೇಳಬಹುದುಎಂದರು.

ಮುಂದುವರಿದು, “ಚಿನ್ನಯ್ಯನ ಬಳಿ ಇರುವ ಮಾಹಿತಿಗಿಂತ ನಿಮ್ಮ ಬಳಿ ಸ್ವತಂತ್ರ ಮಾಹಿತಿ ಇದ್ದರೆ ಅದನ್ನು ಪರಿಗಣಿಸಬಹುದಿತ್ತು. ನಿಮ್ಮ ಕೋರಿಕೆಗೆ ಅನುಮತಿಸಿದರೆ ನಾಳೆ ಬೇರೆ ಯಾರೋ ನಾವೂ ಶವಗಳನ್ನು ಹೂತಿರುವುದನ್ನು ನೋಡಿದ್ದೇವೆ ಎಂದು ಮುಂದೆ ಬರಬಹುದು. ಇದಕ್ಕೆ ಕೊನೆ ಮೊದಲೇ ಇರುವುದಿಲ್ಲಎಂದಿತು.