Skip to main content
ವಿಡಿಯೋ
1/2
politics

ಜಾತಿ ಗಣತಿ ಗೊಂದಲಗಳಿಗೆ ತೆರೆ: ಸಿಎಂ ಸಿದ್ದರಾಮಯ್ಯ ನಿರ್ಧಾರ, ಸೆಪ್ಟೆಂಬರ್ 22ರಿಂದ ಮನೆ ಮನೆ ಸಮೀಕ್ಷೆ ಸಾಧ್ಯತೆ!

By Vinutha U
ಜಾತಿ ಗಣತಿ ಗೊಂದಲಗಳಿಗೆ ತೆರೆ: ಸಿಎಂ ಸಿದ್ದರಾಮಯ್ಯ ನಿರ್ಧಾರ, ಸೆಪ್ಟೆಂಬರ್ 22ರಿಂದ ಮನೆ ಮನೆ ಸಮೀಕ್ಷೆ ಸಾಧ್ಯತೆ!

ಜಾತಿ ಗಣತಿ ಕುರಿತ ಗೊಂದಲಗಳಿಗೆ ತೆರೆ ಎಳೆದು, 331 ಉಪಜಾತಿ ಕಾಲಂಗಳನ್ನು ತೆಗೆದುಹಾಕಿ, ನಿಗದಿಯಂತೆ ಸಮೀಕ್ಷೆ ಮುಂದುವರಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ನಿರ್ಧಾರ.

ಜಾತಿ ಗಣತಿ ಕುರಿತ ಗೊಂದಲಗಳಿಗೆ ತೆರೆ ಎಳೆದು ನಿಗದಿಯಂತೆ ಸಮೀಕ್ಷೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ವರದಿಗಳು ಬಂದಿವೆ. ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ವಿರೋಧಿಗಳಿಗೆ ಜಗ್ಗದೆ ತಮ್ಮ ಆಶಯದ ಯೋಜನೆಯನ್ನು ಮುಂದುವರಿಸಲು ತೀರ್ಮಾನಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರೊಂದಿಗೆ ಸಮಾಲೋಚಿಸಿ ಈ ನಿರ್ಧಾರ ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಸಭೆಯಲ್ಲಿ ಜಾತಿ ಗಣತಿ ಬಗ್ಗೆ ಎದ್ದಿರುವ ಗೊಂದಲಗಳನ್ನು ನಿವಾರಿಸಲು ನಿರ್ಧರಿಸಲಾಗಿದ್ದು, 331 ಉಪಜಾತಿಗಳ ಕಾಲಂ ತೆಗೆದುಹಾಕುವ ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ. JM LOOKS Fancy Pointed Toe Sandals: Stylish Stiletto Heels with Ankle Strap, Comfortable for Women & Girls

ಸೆಪ್ಟೆಂಬರ್ 18ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಹುತೇಕ ಸಚಿವರು ಜಾತಿ ಗಣತಿಯನ್ನು ವಿರೋಧಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕಾವೇರಿ ನಿವಾಸದಲ್ಲಿ ಮಹತ್ವದ ಸಭೆ ನಡೆಸಿದರು. ಸಭೆಯ ನಂತರ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಒಟ್ಟಾಗಿ ರಣದೀಪ್ ಸುರ್ಜೇವಾಲಾ ಅವರನ್ನು ಭೇಟಿಯಾದರು.

ಖಾಸಗಿ ಹೋಟೆಲ್‌ನಲ್ಲಿ ಸುರ್ಜೇವಾಲಾ ಅವರು ಸಿಎಂ ಸಿದ್ದರಾಮಯ್ಯ ಜೊತೆ ಸಭೆ ನಡೆಸಿ, ಜಾತಿ ಗಣತಿ ಸಮೀಕ್ಷೆ ಕುರಿತು ನಿರ್ಣಾಯಕ ನಿರ್ಧಾರ ಕೈಗೊಂಡರು. ಜಾತಿ ಗಣತಿ ಪರ ಮತ್ತು ವಿರೋಧಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸುರ್ಜೇವಾಲಾ ಅವರಿಗೆ ವಿವರವಾದ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಜಾತಿ ವಿಚಾರದಲ್ಲಿ ಸರ್ಕಾರದಿಂದ ಎಡವಟ್ಟು ಇದೊಂದು ಎಡವಟ್ಟಿನ ಸರ್ಕಾರ : ಅಶ್ವತ್ಥ್‌ ನಾರಾಯಣ್‌ ಕಿಡಿ..!!

ಜಾತಿ ಗಣತಿ ಕುರಿತ ಗೊಂದಲಗಳಿಗೆ ತೆರೆ ಎಳೆದು, ನಿಗದಿಯಂತೆ ಸಮೀಕ್ಷೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹಿಂದೂ ಜಾತಿ ಹೆಸರಿನ ಮುಂದೆ 'ಕ್ರಿಶ್ಚಿಯನ್' ಕಾಲಂಗಳನ್ನು ತೆಗೆದುಹಾಕಲು ಸಿಎಂ ಸೂಚನೆ ನೀಡಿದ್ದಾರೆ. ಇದರಿಂದಾಗಿ 331 ಉಪಜಾತಿಗಳ ಕಾಲಂಗಳಿಗೆ ತಡೆ ಬಿದ್ದಂತಾಗಿದೆ. ಆಯೋಗದೊಂದಿಗೆ ಸಭೆ ನಡೆಸಿ ಗೊಂದಲಗಳನ್ನು ನಿವಾರಿಸಿ ಸೆಪ್ಟೆಂಬರ್ 22ರಿಂದ ಮನೆ ಮನೆ ಸಮೀಕ್ಷೆ ನಡೆಸಲು ಸಿಎಂ ನಿರ್ದೇಶನ ನೀಡುವ ಸಾಧ್ಯತೆ ಇದೆ.