Skip to main content
ವಿಡಿಯೋ
1/2
metro

ಯೆಲ್ಲೋ ಲೈನ್ ಮೆಟ್ರೋ ಬಳಿ ಪ್ರಯಾಣಿಕರಿಗೆ ನೂರೆಂಟು ತೊಂದರೆ..ಪಾರ್ಕಿಂಗ್‌ಗೂ ಸ್ಥಳವಿಲ್ಲದೆ ಪರದಾಟ!

By Shravanthi R
ಯೆಲ್ಲೋ ಲೈನ್ ಮೆಟ್ರೋ ಬಳಿ ಪ್ರಯಾಣಿಕರಿಗೆ ನೂರೆಂಟು ತೊಂದರೆ..ಪಾರ್ಕಿಂಗ್‌ಗೂ ಸ್ಥಳವಿಲ್ಲದೆ ಪರದಾಟ!

ಬೆಂಗಳೂರು ಮೆಟ್ರೋದಲ್ಲಿ ಪಾರ್ಕಿಂಗ್ ಸೌಲಭ್ಯಗಳ ಕೊರತೆ, ಟಿಕೆಟ್ ವಿತರಣೆಯ ವಿಳಂಬ ಹಾಗೂ ಲಿಫ್ಟ್–ಎಸ್ಕಲೇಟರ್ ಸಮಸ್ಯೆಯಿಂದ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರು ಪಾರ್ಕಿಂಗ್ ಸಮಸ್ಯೆ ಹಾಗೂ ಟಿಕೆಟ್ ವಿತರಣೆಯಲ್ಲಿನ ವಿಳಂಬದಿಂದ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ವಿಶೇಷವಾಗಿ ಆರ್‌.ವಿ. ರೋಡ್ ಬೊಮ್ಮಸಂದ್ರ ಯೆಲ್ಲೋ ಲೈನ್ ಮತ್ತು ಪರ್ಪಲ್ ಲೈನ್ ಮಾರ್ಗಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ನಿಗದಿತ ಸಮಯಕ್ಕೆ ತಲುಪಲು ಪರದಾಡುವಂತಾಗಿದೆ.

ಪರ್ಪಲ್ ಲೈನ್‌ನಲ್ಲಿ ಟಿಕೆಟ್ ಕೌಂಟರ್‌ಗಳಲ್ಲಿ ಸಿಬ್ಬಂದಿಯ ಕೊರತೆಯಿಂದಾಗಿ, ಪ್ರಯಾಣಿಕರು 20 ರಿಂದ 30 ನಿಮಿಷಗಳ ಕಾಲ ಕ್ಯೂನಲ್ಲಿ ನಿಲ್ಲಬೇಕಿದೆ. ಚಲ್ಲಘಟ್ಟದಿಂದ ವೈಟ್‌ಫೀಲ್ಡ್ ವರೆಗಿನ ಈ ಮಾರ್ಗದಲ್ಲಿ ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಪಡೆಯಲು ಅರ್ಧಗಂಟೆ ಬೇಕಾಗುತ್ತಿದೆ. ಸಿಬ್ಬಂದಿಯ ಅನುಪಸ್ಥಿತಿಯಿಂದಾಗಿ ಟಿಕೆಟ್‌ಗಾಗಿ ಕಾದು ನಿಲ್ಲುವುದು ಸಾಮಾನ್ಯವಾಗಿದೆ.

ಇದೇ ಮಾರ್ಗದಲ್ಲಿ ಲಿಫ್ಟ್‌ಗಳು ಮತ್ತು ಎಸ್ಕಲೇಟರ್‌ಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದು ಪ್ರಯಾಣಿಕರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಇದರಿಂದ 15 ನಿಮಿಷಗಳಲ್ಲಿ ತಲುಪಬೇಕಾದ ಸ್ಥಳಕ್ಕೆ 90 ನಿಮಿಷಗಳವರೆಗೆ ಸಮಯ ವ್ಯಯವಾಗುತ್ತಿದೆ. ವಿದ್ಯಾರ್ಥಿಗಳು ತರಗತಿಗಳಿಗೆ ತಡವಾಗಿ ಹೋಗುತ್ತಿದ್ದು, ಬಿಎಂಟಿಸಿ ಬಸ್ ಪ್ರಯಾಣವೇ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಈ ಸಮಸ್ಯೆಗಳತ್ತ ಗಮನ ಹರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. Samsung Galaxy M35 5G (DayBreak Blue,8GB RAM,128GB Storage)| Corning Gorilla Glass Victus+| AnTuTu Score 595K+| Vapour Cooling Chamber| 6000mAh Battery| 120Hz Super AMOLED Display| AI| Without Charger

ಯೆಲ್ಲೋ ಲೈನ್ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯ ಕೊರತೆಯೂ ದೊಡ್ಡ ಸಮಸ್ಯೆಯಾಗಿದೆ. ಆರ್‌.ವಿ. ರೋಡ್‌ನಿಂದ ಬೊಮ್ಮಸಂದ್ರ ಮೆಟ್ರೋ ಮಾರ್ಗದಲ್ಲಿರುವ 16 ನಿಲ್ದಾಣಗಳ ಪೈಕಿ 11 ನಿಲ್ದಾಣಗಳಲ್ಲಿ ಮಾತ್ರ ಪಾರ್ಕಿಂಗ್ ಲಭ್ಯವಿದೆ. ಉಳಿದ 5 ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯ ಇಲ್ಲ. ಇದು ಪ್ರತಿದಿನ ಈ ಮಾರ್ಗದಲ್ಲಿ ಸಂಚರಿಸುವ 70 ರಿಂದ 80 ಸಾವಿರ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿದೆ. ಇದನ್ನೂ ಓದಿ: ನಡುರಸ್ತೆಯಲ್ಲೇ ವ್ಯಕ್ತಿ ಹಾಸಿಗೆ ಮೇಲೆ ಮಲಗಿ ಸಂಚಾರಕ್ಕೆ ಅಡ್ಡಿ - ವಿಡಿಯೋ ವೈರಲ್‌