Skip to main content
ವಿಡಿಯೋ
1/2
crime

ತಂದೆಯ ಮೇಲಿನ  ದ್ವೇಷಕ್ಕೆ ಮಗಳನ್ನೇ ಕೊಂದ ಪಾಪಿ…..!!

By Pavitra Ganapathi Baradavalli
ತಂದೆಯ ಮೇಲಿನ  ದ್ವೇಷಕ್ಕೆ ಮಗಳನ್ನೇ ಕೊಂದ ಪಾಪಿ…..!!

ದಿನಬೆಳಿಗ್ಗೆಯಾದರೆ ಕೊಲೆ ದರೋಡೆ ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ. ಆದರೆ ಇಲ್ಲೋಂದು ಪ್ರಕರಣ ಭಾರೀ ಟ್ವಿಸ್ಟ್‌ ತಂದಿದೆ ಯಾರಾದರೂ ಒಬ್ಬರ ಮೇಲಿನ ದ್ವೇಷಕ್ಕೆ ಅವರನ್ನೇ ಕೊಲೆ ಮಾಡೋದು ನೋಡಿರ್‌ತ್ತೀವಿ ಆದರೆ ಇಲ್ಲಿ ತಂದೆ ಮೇಲಿನ ದ್ವೇಷಕ್ಕೆ ಮಗಳನ್ನ ಬಲಿ ತೆಗೆದುಕೊಂಡಿದ್ದಾನೆ ಹಂತಕ.

ಕಲಬುರಗಿ: ದಿನಬೆಳಿಗ್ಗೆಯಾದರೆ ಕೊಲೆ ದರೋಡೆ ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ. ಆದರೆ ಇಲ್ಲೋಂದು ಪ್ರಕರಣ ಭಾರೀ ಟ್ವಿಸ್ಟ್‌ ತಂದಿದೆ ಯಾರಾದರೂ ಒಬ್ಬರ ಮೇಲಿನ ದ್ವೇಷಕ್ಕೆ ಅವರನ್ನೇ ಕೊಲೆ ಮಾಡೋದು ನೋಡಿರ್‌ತ್ತೀವಿ ಆದರೆ ಇಲ್ಲಿ ತಂದೆ ಮೇಲಿನ ದ್ವೇಷಕ್ಕೆ ಮಗಳನ್ನ ಬಲಿ ತೆಗೆದುಕೊಂಡಿದ್ದಾನೆ ಹಂತಕ. ಸಹೋದರನ ಸಾವಿನ ಸೇಡು ತೀರಿಸಿಕೊಳ್ಳಲು ಮಗಳನ್ನೇ ಬಲಿ ತೆಗೆದುಕೊಂಡಿದ್ದಾನೆ.ಇದನ್ನೂ ಓದಿ: BWSSB - ತುರ್ತು ಕಾಮಗಾರಿಗೆ ಕಾವೇರಿ ನೀರಿನ ಸರಬರಾಜು ಎರಡು ದಿನದ ಮಟ್ಟಿಗೆ ವ್ಯತ್ಯಯ


ರಾಜಶ್ರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿನೋದ್‌ ಅನ್ನುವಂಥ ವ್ಯಕ್ತಿ ಈತನಿಗೆ ಖಾಯಂ ಉದ್ಯೋಗ ಸಿಗದೇ ಇರೋದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಈತನಿಗೆ ಖಾಯಂ ಕೆಲಸ ಸಿಗದೇ ಇರೋ ತರ ಮಾಡಿದ್ದು, ಚೆನ್ನವೀರಪ್ಪ ಕಾರಣ ಅನ್ನೋ ಶಂಕೆಯನ್ನ ಇಟ್ಟುಕೊಂಡಿದ್ದ ವಿನೋದ್‌ ಸಹೋದರ ಮಂಜುನಾಥ್‌. ತನ್ನ ಸಹೋದರನ ಸಾವಿಗೆ ಸರಿಯಾಗೇ ಸೇಡು ತೀರಿಸಿಕೊಳ್ಳುವುದಾಗಿ ಮೊದಲೇ ಎಚ್ಚರಿಸಿದ್ದನು.
ಇದನ್ನೂ ಓದಿ: ಯೆಲ್ಲೋ ಲೈನ್ ಮೆಟ್ರೋ ಬಳಿ ಪ್ರಯಾಣಿಕರಿಗೆ ನೂರೆಂಟು ತೊಂದರೆ..ಪಾರ್ಕಿಂಗ್‌ಗೂ ಸ್ಥಳವಿಲ್ಲದೆ ಪರದಾಟ!


ಚೆನ್ನವೀರಪ್ಪ ಪುತ್ರಿಯರು ವಾಕಿಂಗ್‌ ತೆರಳಿದಾಗ ಏಕಾಏಕಿ ಮಂಜುನಾಥ್‌ ಎಂಟ್ರಿಯಾಗಿದೆ. ನಡೆದುಕೊಂಡು ಹೋಗುತ್ತಿದ್ದವರ ಮೇಲೆರಗಿದ ಮಂಜುನಾಥ್‌ ಭಾಗ್ಯಶ್ರಿಯ ಉಸಿರನ್ನೇ ನಿಲ್ಲಿಸಿ ಬಿಟ್ಟಿದ್ದಾನೆ. ಅಲ್ಲಾ ನೋಡಿ ಕೊಲೆ ಯಾವ ಯಾವ ಕಾರಣಕ್ಕೆ
  ಮಾಡ್ತಾರೆ ಅಂತಾನೆ ತಿಳಿಯುವುದಿಲ್ಲ. ನೋಡಿ ಅಪ್ಪ ತಪ್ಪು ಮಾಡಿದ ಅನ್ನೋ ಕಾರಣಕ್ಕೆ ಇಲ್ಲಿ ಮಗಳ ಜೀವವೇ ಹೋಗಿದೆ. ಏನೂ ತಪ್ಪು ಮಾಡದ ಮಗಳು ಇಲ್ಲಿ ಶಿಕ್ಷೆ ಅನುಭವಿಸುವ ಹಾಗಾಗಿದೆ. ಸದ್ಯ ಆರೋಪಿ ಮಂಜುನಾಥ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.C J Enterprise Women's Banarasi Pure Soft Kanjivaram Silk Saree With Blouse Piece For Wedding (Champa-51)