Skip to main content
ವಿಡಿಯೋ
1/2
politics

ಬಾಂಗ್ಲಾ, ನೇಪಾಳ, ಪಾಕಿಸ್ತಾನ ನಮ್ಮ ಮನೆಯಂತೆ ಭಾಸವಾಯಿತು - ಸ್ಯಾಮ್‌ ಪಿತ್ರೋಡಾ ವಿವಾದಾತ್ಮಕ ಹೇಳಿಕೆ

By Shravanthi R
ಬಾಂಗ್ಲಾ, ನೇಪಾಳ, ಪಾಕಿಸ್ತಾನ ನಮ್ಮ ಮನೆಯಂತೆ ಭಾಸವಾಯಿತು - ಸ್ಯಾಮ್‌ ಪಿತ್ರೋಡಾ ವಿವಾದಾತ್ಮಕ ಹೇಳಿಕೆ

ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಅವರು, ನಾನು ಬಾಂಗ್ಲಾದೇಶಕ್ಕೆ, ನೇಪಾಳಕ್ಕೆ ಹೋಗಿದ್ದೇನೆ. ಪಾಕಿಸ್ತಾನದ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ನಾನು ಅಲ್ಲಿಗೆ ತೆರಳಿದ್ದೆ. ಆಗ ನಾನು ವಿದೇಶದಲ್ಲಿರುವಂತೆ ನನಗನಿಸಲಿಲ್ಲ, ಮನೆಯಂತೆ ಭಾಸವಾಯಿತು ಎಂದಿದ್ದಾರೆ.

ಇಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್‌ ಮುಖ್ಯಸ್ಥ ಸ್ಯಾಮ್‌ ಪಿತ್ರೋಡಾ ಅವರು ಮತ್ತೊಂದು ವಿವಾದ ಸೃಷ್ಟಿಸಿಕೊಂಡಿದ್ದಾರೆ. ಭಾರತದ ವಿದೇಶಾಂಗ ಸಚಿವಾಲಯದ ಕುರಿತು ಮಾತನಾಡುವ ಸಂದರ್ಭದಲ್ಲಿ ʻಪಾಕಿಸ್ತಾನವು ನಮ್ಮ ಮನೆಯಂತೆ ಭಾಸವಾಯಿತುʼ ಎಂಬ ಹೇಳಿಕೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಪಕ್ಷದ ಮಾನ ಹರಾಜು ಹಾಕಿದ ರೀತಿಯಂತಾಗಿದೆ ಎನ್ನಲಾಗಿದೆ. ವಿದೇಶಾಂಗ ನೀತಿಯಲ್ಲಿ ಬದಲಾವಣೆ ತರುವಲ್ಲಿ ನೆರೆಹೊರೆಯ ದೇಶಗಳ ಬಗ್ಗೆ ಗಮನಹರಿಸಬೇಕೆಂದ ವೇಳೆ ತಮ್ಮ ನಾಲಿಗೆ ಹರಿಬಿಟ್ಟ ರಾಹುಲ್‌ ಆಪ್ತರಾಗಿರುವ ಸ್ಯಾಮ್‌ ಪಿತ್ರೋಡಾ ಅವರು ವಿವಾದಗಳ ಸೆಲೆಗೆ ತುತ್ತಾಗಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಅವರು, ನಾನು ಬಾಂಗ್ಲಾದೇಶಕ್ಕೆ, ನೇಪಾಳಕ್ಕೆ ಹೋಗಿದ್ದೇನೆ. ಪಾಕಿಸ್ತಾನದ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ನಾನು ಅಲ್ಲಿಗೆ ತೆರಳಿದ್ದೆ. ಆಗ ನಾನು ವಿದೇಶದಲ್ಲಿರುವಂತೆ ನನಗನಿಸಲಿಲ್ಲ, ಮನೆಯಂತೆ ಭಾಸವಾಯಿತು ಎಂದಿದ್ದಾರೆ. ಅಲ್ಲಿನ ಜನರು, ವಾತಾವರಣದ ಕುರಿತು ಹಂಚಿಕೊಳ್ಳುತ್ತಿದ್ದ ಅವರು, ನಾವು ಅವರೊಂದಿಗೆ ಶಾಂತಿ ಹಾಗೂ ಸಾಮರಸ್ಯದಿಂದ ಬದುಕುವ ರೀತಿಯನ್ನು ಕಲಿಯಬೇಕು ಎಂದು ತಿಳಿಸಿದ್ದಾರೆ. The Derma Co 5% Niacinamide Daily Face Serum with Alpha Arbutin & Multivitamin for Clear & Spotless Skin - 30ml

ಇದರಿಂದ ಸಾಮಾಜಿಕ ಜಾಲತಾಣದಲ್ಲಿ ವಿರೋಧಗಳು ಹುಟ್ಟಿಕೊಂಡಿದೆ. ಮುಂಬೈನಲ್ಲಿ 166 ಜನರ ಸಾವಿಗೆ ಕಾರಣವಾದ 26/11 ದಾಳಿಗೂ ಯುಪಿಎ ಸರ್ಕಾರ ಹಾಗೂ ಪಿತ್ರೋಡಾರ ಈ ಹೇಳಿಕೆಗೂ ಸಂಬಂಧವಿದೆ ಎಂದು ಪ್ರತಿಬಿಂಬಿಸಲಾಗಿದೆ. ಬಿಜೆಪಿಯು ಇದಕ್ಕೆ ತೀವ್ರ ಟೀಕೆ ಮಾಡಿದ್ದು, ಕಾಂಗ್ರೆಸ್‌ ಪಾಕಿಸ್ತಾನದ ನೆಚ್ಚಿನ ವ್ಯಕ್ತಿಯನ್ನು ಆಯ್ಕೆ ಮಾಡಿದೆ ಎಂದು ತಂಟೆ ತೆಗೆದಿದೆ. ಈ ಮೂಲಕ ವ್ಯಾಪಕವಾಗಿ ರಾಜಕೀಯ ಚರ್ಚೆಗಳು ಎದುರುಗೊಂಡಿದೆ ಎನ್ನಲಾಗಿದೆ. ಇದನ್ನೂ ಓದಿ: ಜಾತಿ ಗಣತಿ ಮುಂದೂಡಲು ಸಾಧ್ಯವಿಲ್ಲ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ…!!