Skip to main content
ವಿಡಿಯೋ
1/2
politics

ಧರ್ಮಸ್ಥಳ ಪ್ರಕರಣ: 2 ವರ್ಷದ ಹಿಂದೆಯೇ ತಿಮರೋಡಿ ಭೇಟಿಯಾಗಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ..ವಿಡಿಯೋ ವೈರಲ್!

By Gireesh Vasishta
ಧರ್ಮಸ್ಥಳ ಪ್ರಕರಣ: 2 ವರ್ಷದ ಹಿಂದೆಯೇ ತಿಮರೋಡಿ ಭೇಟಿಯಾಗಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ..ವಿಡಿಯೋ ವೈರಲ್!

ನೂರಾರು ಶವ ಹೂತ ಪ್ರಕರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಚಿನ್ನಯ್ಯ–ತಿಮರೋಡಿ ಭೇಟಿಯ ವೀಡಿಯೊ ಈಗ ಬಹಿರಂಗವಾಗಿದೆ. ಈ ವೀಡಿಯೊದಿಂದ ಪ್ರಕರಣದ ಹಿಂದೆ ಅಡಗಿದ್ದ ಬೆಚ್ಚಿಬೀಳಿಸುವ ಸಂಗತಿಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಬೆಳವಣಿಗೆಗಳ ನಡುವೆ, ಮಾಸ್ಕ್ ಮ್ಯಾನ್ ಚಿನ್ನಯ್ಯ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಭೇಟಿಯ ವೀಡಿಯೊ ಇದೀಗ ಬಹಿರಂಗಗೊಂಡಿದೆ.

 

ವೀಡಿಯೊ ಎರಡು ವರ್ಷಗಳ ಹಿಂದೆ ತಿಮರೋಡಿ ಅವರ ನಿವಾಸದಲ್ಲಿ ಚಿತ್ರೀಕರಿಸಲ್ಪಟ್ಟಿದೆ. ಮಂಗಳೂರಿನಿಂದ ಲಭ್ಯವಾದ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 19 ರಂದು ವೀಡಿಯೊ ಸಾರ್ವಜನಿಕಗೊಂಡಿದೆ. ಧರ್ಮಸ್ಥಳ ಗ್ರಾಮದ ಪ್ರಕರಣದಲ್ಲಿ ಹೊಸ ಆಯಾಮಗಳು ಬಯಲಾಗುತ್ತಿವೆ.TRASE Block Heels Sandals For Women, Dusky Stylish & Comfortable Footwear

 

ತಿಮರೋಡಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ, ಚಿನ್ನಯ್ಯ ಶವಗಳನ್ನು ಹೂತಿದ್ದರ ಬಗ್ಗೆ ಪ್ರಮುಖ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ನಾನು ಗುಂಡಿ ತೆಗೆದು ಶವಗಳನ್ನು ಹೂಳುತ್ತಿದ್ದೆ, ಎಂದು ಚಿನ್ನಯ್ಯ ಹೇಳಿದ್ದಾರೆ. ನೇತ್ರಾವತಿ ಸ್ನಾನಘಟ್ಟದ ಸರ್ಕಾರಿ ಜಾಗದ ಕುರಿತು ಪ್ರಶ್ನಿಸಿದವರನ್ನು, ತನಗೆ ರಕ್ತ ಬರುವಂತೆ ಹೊಡೆಯಲು ಸೂಚಿಸಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

 

ಒಂದು ಶವವನ್ನು ಹೂಳುವಾಗ ವೈದ್ಯರ ಬದಲು ಕಾಂಪೌಂಡರ್ ಪೋಸ್ಟ್ ಮಾರ್ಟಮ್ ನಡೆಸಿದ್ದ ಎಂಬ ಸ್ಫೋಟಕ ಅಂಶವನ್ನೂ ಚಿನ್ನಯ್ಯ ಹೇಳಿಕೊಂಡಿದ್ದಾರೆ. ಮೂಲಕ ಪ್ರಕರಣದ ಸುತ್ತಲಿನ ರಹಸ್ಯಗಳು ಇನ್ನಷ್ಟು ತೆರೆದುಕೊಳ್ಳುತ್ತಿವೆ.ಇದನ್ನು ಓದಿ: ಪಾಂಗಳದ ಪುರಂದರ ಗೌಡ & ತುಕಾರಾಂ ಗೌಡ ಅವರಿಂದ 20 ಕ್ಕೂ ಹೆಚ್ಚು ಅಕ್ರಮ ಸಮಾಧಿಗಳನ್ನು ತೋರಿಸುವ ವಿಚಾರ; ಹೊಸ ಮಾಹಿತಿ ಇದ್ದರೆ ಸಲ್ಲಸಿ ಎಂದು ಹೈಕೋರ್ಟ್‌ ತಾಕೀತು