Skip to main content
ವಿಡಿಯೋ
1/2
general

ಗುಡ್‌ನ್ಯೂಸ್....ನಂದಿನಿ ಹಾಲು ಉತ್ಪನ್ನಗಳ ಬೆಲೆ 4 ರೂ. ಇಳಿಕೆಯಾಗುತ್ತೆ! ಯಾವಾಗಿಂದ..?

By Sushmitha R
ಗುಡ್‌ನ್ಯೂಸ್....ನಂದಿನಿ ಹಾಲು ಉತ್ಪನ್ನಗಳ ಬೆಲೆ 4 ರೂ. ಇಳಿಕೆಯಾಗುತ್ತೆ! ಯಾವಾಗಿಂದ..?

ಜಿಎಸ್‌ಟಿ ಕಡಿತದ ಹಿನ್ನೆಲೆಯಲ್ಲಿ ಕೆಎಂಎಫ್ ಮೊಸರು, ತುಪ್ಪ, ಬೆಣ್ಣೆ, ಲಸ್ಸಿ ಸೇರಿದಂತೆ ಹಲವಾರು ಉತ್ಪನ್ನಗಳ ಬೆಲೆ ಪ್ರತಿ ಲೀಟರ್‌ಗೆ ₹4 ಇಳಿಸುತ್ತದೆ.

ಕೇಂದ್ರ ಸರ್ಕಾರವು ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಕಡಿತಗೊಳಿಸಿದ ಬೆನ್ನಲ್ಲೇ, ನಂದಿನಿ ಮೊಸರು, ತುಪ್ಪ, ಬೆಣ್ಣೆ, ಮತ್ತು ಲಸ್ಸಿ ಸೇರಿದಂತೆ ಹಲವಾರು ಕೆಎಂಎಫ್ ಉತ್ಪನ್ನಗಳ ಬೆಲೆಯನ್ನು ಇಳಿಕೆ ಮಾಡಲು ನಿರ್ಧರಿಸಲಾಗಿದೆ. ಈ ಹೊಸ ದರಗಳು ಸೆಪ್ಟೆಂಬರ್ 22ರಿಂದ ಜಾರಿಗೆ ಬರುವ ಸಾಧ್ಯತೆಯಿದೆ.ಕ್ರ್ಯಾನ್‌ಬೆರಿ ಶ್ರೀಖಂಡ್ ಟ್ರೈಫಲ್: ಭಾರತೀಯ ಹಬ್ಬದ ಸಿಹಿತಿಂಡಿಗೆ ವಿಶ್ವದ ರುಚಿಯ ಸಂಯೋಜನೆ..!

ಈ ಮೂಲಕ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ರಾಜ್ಯದ ಜನರಿಗೆ ಸಿಹಿ ಸುದ್ದಿ ನೀಡಿದೆ. ಆದಾಗ್ಯೂ, ಈ ಕುರಿತು ಅಧಿಕೃತ ಆದೇಶ ಇನ್ನೂ ಹೊರಬೀಳಬೇಕಿದೆ. ಜಿಎಸ್‌ಟಿ ಕಡಿತದ ಹಿನ್ನೆಲೆಯಲ್ಲಿ ಬೆಲೆ ಇಳಿಕೆಗೆ ಸಜ್ಜಾಗಿರುವ ಕೆಎಂಎಫ್, ಈ ಬಗ್ಗೆ ಶುಕ್ರವಾರದಂದು ಅಧಿಕಾರಿಗಳ ಸಭೆ ನಡೆಸಿತ್ತು.Naixa Women's Orange BSY Viscose Embroidered Straight Kurta with BSY Viscose Pant and Silk Blend Embroidered Laced Dupatta Sets (Available in Plus Size) (NX-640)

ಸಭೆಯಲ್ಲಿ ಯಾವ ಉತ್ಪನ್ನದ ಬೆಲೆಯನ್ನು ಎಷ್ಟು ಇಳಿಸಬೇಕು ಎಂಬುದನ್ನು ನಿರ್ಧರಿಸಲಾಗಿದೆ. ಅದರಂತೆ, ಮೊಸರಿನ ಬೆಲೆ ಪ್ರತಿ ಲೀಟರ್‌ಗೆ ₹4 ಇಳಿಕೆಯಾಗುವ ನಿರೀಕ್ಷೆಯಿದೆ. ಇದರ ಜೊತೆಗೆ, ತುಪ್ಪ, ಬೆಣ್ಣೆ, ಲಸ್ಸಿ ಸೇರಿದಂತೆ ಇತರ ಹಲವು ಉತ್ಪನ್ನಗಳ ಬೆಲೆಯೂ ಕಡಿಮೆಯಾಗಲಿದೆ.

2017ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಲಾಗಿತ್ತು. ನಂತರ 2022ರಲ್ಲಿ ಅದನ್ನು ಶೇಕಡಾ 12ಕ್ಕೆ ಹೆಚ್ಚಿಸಲಾಗಿತ್ತು. ಆದರೆ, ಇತ್ತೀಚೆಗೆ ಕೇಂದ್ರ ಸರ್ಕಾರವು ಹಾಲಿನ ಉತ್ಪನ್ನಗಳ ಮೇಲಿನ ಸರಕು ಸೇವಾ ತೆರಿಗೆಯನ್ನು ಶೇಕಡಾ 12ರಿಂದ 5ಕ್ಕೆ ಇಳಿಕೆ ಮಾಡಿದೆ. ಈ ಜಿಎಸ್‌ಟಿ ಕಡಿತ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ. ಇದರಿಂದ ಗ್ರಾಹಕರಿಗೆ ಒಂದಷ್ಟು ನಿರಾಳತೆ ಸಿಕ್ಕಿದೆ.ಪ್ಲಾಸ್ಟಿಕ್ ಮುಕ್ತ ಪ್ಯಾಕೇಜಿಂಗ್ ಕಡೆ ದಿಟ್ಟ ಹೆಜ್ಜೆ: ನಂದಿನಿಯಿಂದ ಪರಿಸರ ಸ್ನೇಹಿ ಹಾಲು ಪ್ಯಾಕೆಟ್ ಪ್ರಯೋಗ!

ಕರ್ನಾಟಕದ ಸ್ಟಾರ್ ಬ್ರ್ಯಾಂಡ್ ಆಗಿರುವ ಕೆಎಂಎಫ್ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದು, ಅದರ ಉತ್ಪನ್ನಗಳಿಗೆ ಎಲ್ಲೆಡೆ ಭಾರಿ ಬೇಡಿಕೆ ಇದೆ. ಈ ಹಿಂದೆ, ನಂದಿನಿ ಹಾಲಿನ ಎಲ್ಲಾ ಮಾದರಿಯ ಪ್ಯಾಕೆಟ್‌ಗಳ ಬೆಲೆಯನ್ನು ಪ್ರತಿ ಲೀಟರ್‌ಗೆ ₹4 ಹೆಚ್ಚಿಸಲಾಗಿತ್ತು. ಅದೇ ರೀತಿ ಮೊಸರಿನ ಬೆಲೆಯನ್ನೂ ಪ್ರತಿ ಲೀಟರ್‌ಗೆ ₹4 ಏರಿಕೆ ಮಾಡಲಾಗಿತ್ತು. ಸದ್ಯ, ಈ ₹4 ಏರಿಕೆಯನ್ನು ಮರಳಿ ಕಡಿತಗೊಳಿಸಲು ಕೆಎಂಎಫ್ ನಿರ್ಧರಿಸಿದೆ. ಈ ಬೆಲೆ ಇಳಿಕೆಯು ಗ್ರಾಹಕರಿಗೆ ದೊಡ್ಡ ಮಟ್ಟದಲ್ಲಿ ಪ್ರಯೋಜನವಾಗಲಿದೆ.ಭಾರತೀಯ ಆಹಾರ ಪದಾರ್ಥಗಳು, ಪ್ರತಿದಿನ ಹಬ್ಬದ ಅಡುಗೆಯ ರುಚಿ…!