Skip to main content
ವಿಡಿಯೋ
1/2
general

ಇಂಡಿಯನ್ IT ಕಂಪನಿಗಳಿಗೆ ಟ್ರಂಪ್ H1B ಫೀ ಆಘಾತ: ಮಾರುಕಟ್ಟೆಯಲ್ಲಿ ಇನ್ಫೋಸಿಸ್, ವಿಪ್ರೋ ಷೇರುಗಳ ಕುಸಿತ!

By Vinutha U
ಇಂಡಿಯನ್ IT ಕಂಪನಿಗಳಿಗೆ ಟ್ರಂಪ್ H1B ಫೀ ಆಘಾತ: ಮಾರುಕಟ್ಟೆಯಲ್ಲಿ ಇನ್ಫೋಸಿಸ್, ವಿಪ್ರೋ ಷೇರುಗಳ ಕುಸಿತ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯನಿರ್ವಾಹಕ ಆದೇಶದಿಂದ ಎಚ್-1ಬಿ ವೀಸಾ ಅರ್ಜಿಯ ವಾರ್ಷಿಕ ಶುಲ್ಕವನ್ನು 1,000 ಡಾಲರ್‌ನಿಂದ 1 ಲಕ್ಷ ಡಾಲರ್‌ಗೆ ಏರಿಕೆ ಮಾಡಿದ ಬೆನ್ನಲ್ಲೇ ಈ ಷೇರುಗಳಲ್ಲಿ ಭಾರೀ ಇಳಿಕೆ ಕಂಡುಬಂದಿದೆ.

ನವದೆಹಲಿ (ಸೆ.20): ಇನ್ಫೋಸಿಸ್ ಲಿಮಿಟೆಡ್ ಮತ್ತು ವಿಪ್ರೋ ಲಿಮಿಟೆಡ್‌ನ ಯುಎಸ್‌ನಲ್ಲಿ ಪಟ್ಟಿಮಾಡಲಾದ ಷೇರುಗಳು ಅಥವಾ ಅಮೇರಿಕನ್ ಡಿಪಾಸಿಟರಿ ರಿಸಿಟ್‌ಗಳು (ಎಡಿಆರ್‌ಗಳು) ಶುಕ್ರವಾರ ರಾತ್ರಿ ಶೇ. 4ರಷ್ಟು ಕುಸಿತ ಕಂಡಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯನಿರ್ವಾಹಕ ಆದೇಶದಿಂದ ಎಚ್-1ಬಿ ವೀಸಾ ಅರ್ಜಿಯ ವಾರ್ಷಿಕ ಶುಲ್ಕವನ್ನು 1,000 ಡಾಲರ್‌ನಿಂದ 1 ಲಕ್ಷ ಡಾಲರ್‌ಗೆ ಏರಿಕೆ ಮಾಡಿದ ಬೆನ್ನಲ್ಲೇ ಈ ಷೇರುಗಳಲ್ಲಿ ಭಾರೀ ಇಳಿಕೆ ಕಂಡುಬಂದಿದೆ.

ಇನ್ಫೋಸಿಸ್ ಎಡಿಆರ್ ಶೇ. 4ರಷ್ಟು ಕಡಿಮೆಯಾಗಿದ್ದರೆ, ವಿಪ್ರೋ ಎಡಿಆರ್ ಶೇ. 2ರಷ್ಟು ಇಳಿಕೆಯಾಗಿದೆ. ಎಚ್-1ಬಿ ವೀಸಾ ಅರ್ಜಿಗಳಿಗೆ 1 ಲಕ್ಷ ಡಾಲರ್ ಶುಲ್ಕ ಪಾವತಿಸಬೇಕು. ಈ ಶುಲ್ಕವನ್ನು ಪಾವತಿಸದಿದ್ದರೆ, ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ಅರ್ಜಿಯನ್ನು ತಿರಸ್ಕರಿಸಬಹುದು. GRECIILOOKS Shirts for Women – Korean Style Short Sleeve Oversized Button Down | Plus Size Workwear Top for Office & Casual Wear (Available in Plus Size)

ಈಗಿನ 1,000 ಡಾಲರ್ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಏರಿಕೆ ಮಾಡಿರುವುದು ಎಚ್-1ಬಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸಬಹುದು ಎಂದು ಅಮೆರಿಕದ ನಿರ್ಧಾರವಾಗಿದೆ. ಈ ಏಕಾಏಕಿ ಶುಲ್ಕ ಏರಿಕೆಯು ಅಮೆರಿಕನ್ ಕಂಪನಿಗಳಿಗೂ ಆಘಾತವನ್ನುಂಟು ಮಾಡಿದೆ.

ಈ ಬೆಳವಣಿಗೆ ಗಮನಾರ್ಹ ಅಡಚಣೆಯಾದರೂ, ಭಾರತೀಯ ಐಟಿ ಕಂಪನಿಗಳಿಗೆ ಅಸ್ತಿತ್ವದ ಬೆದರಿಕೆಯಲ್ಲ. ಯುಎಸ್‌ನಲ್ಲಿ ಈಗಾಗಲೇ ಎಚ್-1ಬಿ ವೀಸಾ ಹೊಂದಿರುವವರಿಗೆ ತಕ್ಷಣದ ಪರಿಣಾಮ ಅಥವಾ ಹೆಚ್ಚಿನ ವೆಚ್ಚ ಅನ್ವಯವಾಗುವುದಿಲ್ಲ. ಉತ್ತರ ಅಮೆರಿಕವು ಭಾರತೀಯ ಐಟಿ ಕಂಪನಿಗಳ ಪ್ರಮುಖ ಮಾರುಕಟ್ಟೆಯಾಗಿದ್ದು, ಅವುಗಳ ಆದಾಯದ ಕನಿಷ್ಠ ಮೂರನೇ ಎರಡರಷ್ಟು ಭಾಗವನ್ನು ಈ ಪ್ರದೇಶದಿಂದ ಪಡೆಯುತ್ತವೆ. ವಿಜಯಪುರದ ಪಾಳು ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ..!!

ಭಾರತದಲ್ಲಿ ಇನ್ಫೋಸಿಸ್, ಟಿಸಿಎಸ್, ವಿಪ್ರೋ ಮತ್ತು ಇತರ ಲಾರ್ಜ್‌ಕ್ಯಾಪ್ ಹಾಗೂ ಮಿಡ್‌ಕ್ಯಾಪ್ ಐಟಿ ಷೇರುಗಳು ಸೋಮವಾರ ಈ ಬೆಳವಣಿಗೆಗೆ ಪ್ರತಿಕ್ರಿಯಿಸಲಿವೆ. ನಿಫ್ಟಿ ಐಟಿ ಸೂಚ್ಯಂಕವು ಈ ವಾರ ಉತ್ತಮ ಪ್ರದರ್ಶನ ತೋರಿದ್ದು, ಷೇರುಗಳು ಶೇ. 1 ರಿಂದ 3ರಷ್ಟು ಏರಿಕೆ ಕಂಡಿವೆ.