Skip to main content
ವಿಡಿಯೋ
1/2
general

ಆರ್ಯರು ಎಂದರೆ ಯಾರು? ಎಲ್ಲಿಂದ ಬಂದವರು…!!ಇಲ್ಲಿದೆ ಮಾಹಿತಿ

By Pavitra Ganapathi Baradavalli
ಆರ್ಯರು ಎಂದರೆ ಯಾರು? ಎಲ್ಲಿಂದ ಬಂದವರು…!!ಇಲ್ಲಿದೆ ಮಾಹಿತಿ

ನಮಗೆಲ್ಲಾ ತಿಳಿದಿರುವ ಸಂಗತಿ ಏನು ಅಂತ ಅಂದ್ರೆ ಆರ್ಯರು ಯಾರು ಎಲ್ಲಿಂದ ಬಂದರು ಅವರು ಮೂಲತಃ ಎಲ್ಲಿಯವರು ಅನ್ನೋ ಪ್ರಶ್ನೆ ಇತಿಹಾಸವನ್ನು ಮೆಲುಕು ಹಾಕಿದವರಿಗೆ ಬಂದೇ ಬರುತ್ತದೆ. ಹಾಗಾದರೆ ನಾವು ಇಷ್ಟು ದಿನ ಓದಿಕೊಂಡು ಬಂದ ಚರಿತ್ರೆಯಲ್ಲಿ ತಿಳಿಸಿದುದು ಏನು ಎಂಬುದನ್ನು ಒಂದು ಭಾರಿ ನೆನಪಿಸಿಕೊಂಡು ಬರೋಣ.

ಆರ್ಯರು ಯಾರು ಎಲ್ಲಿಂದ ಬಂದರು ಅವರು ಮೂಲತಃ ಎಲ್ಲಿಯವರು ಅನ್ನೋ ಪ್ರಶ್ನೆ ಇತಿಹಾಸವನ್ನು ಮೆಲುಕು ಹಾಕಿದವರಿಗೆ ಬಂದೇ ಬರುತ್ತದೆ. ಹಾಗಾದರೆ ನಾವು ಇಷ್ಟು ದಿನ ಓದಿಕೊಂಡು ಬಂದ ಚರಿತ್ರೆಯಲ್ಲಿ ತಿಳಿಸಿದುದು ಏನು ಎಂಬುದನ್ನು ಒಂದು ಬಾರಿ ನೆನಪಿಸಿಕೊಂಡು ಬರೋಣ.


ನಮಗೆಲ್ಲಾ ತಿಳಿದಿರುವ ಸಂಗತಿ ಏನು ಅಂತ ಅಂದ್ರೆ ಆರ್ಯರು ಎಂದರೆ ವಿದೇಶಿ ಆಕ್ರಮಣಕಾರರು ಎಲ್ಲಿಂದಲೋ ಬಂದು ನಮ್ಮ ಭಾರತದ ಮೇಲೆ ದಾಳಿ ಮಾಡಿ ನಮ್ಮ ಸಂಸ್ಕೃತಿ ಆಚರಣೆಗಳನ್ನು ನೆಲಸಮ ಮಾಡಿದರು, ಮತ್ತು ಋಗ್ವೇದ ಎಂಬ ಬೃಹತ್‌ ವೇದವನ್ನು ರಚಿಸಿದರು ಎಂದು ಇಷ್ಟು ದಿನ ಓದಿದ ಚರಿತ್ರೆ ನಮಗೆ ತಿಳಿಸುತ್ತದೆ.ಇದನ್ನೂ ಓದಿ: ಜಾತಿ ಗಣತಿ ಸಮೀಕ್ಷೆಗೆ ಸರ್ಕಾರದ ಆದೇಶ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ..!


ಆದರೆ ವಾಸ್ತವ ಸಂಗತಿ ಬೇರೆಯೇ ಇದೆ. ಅಸಲಿಯಾಗಿ ಈ ಆರ್ಯರು ಎಂಬುವ ಪಂಗಡವೇ ಇರಲಿಲ್ಲ. ಬದಲಿಗೆ ನಮ್ಮ ದೇಶವನ್ನು ಸಾವಿರಾರು ವರ್ಷಗಳ ಕಾಲ ಆಳಿದ ಪಾಶ್ಚಿಮಾತ್ಯರು ಮಾಡಿದ ಕರಾಮತ್ತು ಇದೆಲ್ಲಾ. ಈ ಎಲ್ಲಾ ಕಟ್ಟು ಕಥೆಗಳ ಮೂಲ ಬರಹಗಾರ ಬ್ರಿಟಿಷರ ಕಾಲದಲ್ಲಿ ದಿ ಗ್ರೇಟ್‌ ಸಂಸ್ಕೃತ ಪಂಡಿತನೆಂದು ಹೆಸರು ತೆಗೆದುಕೊಂಡ ಮ್ಯಾಕ್ಸ್‌ ಮುಲ್ಲರ್‌ ಎಂಬ ಮಹಾಶಯ. ಸಾಮಾನ್ಯವಾಗಿ ಋಗ್ವೇದವನ್ನು
 ದೇಶದಿಂದ ದೇಶಬಿಟ್ಟು ಬಂದು ಭಾರತದ ಮೇಲೆ ಆಕ್ರಮಣ ನಡೆಸಿದ ಆರ್ಯರು ಎಂದು ಕೊಚ್ಚಿಕೊಂಡರಲ್ಲ ಸ್ವಯಂ ಋಗ್ವೇದದಲ್ಲೇ ಆರ್ಯ ಎಂಬ ಪದ ಒಟ್ಟು 36 ಸ್ಥಳಗಳಲ್ಲಿ ಬಳಕೆಯಾಗಿದೆ.ಇದನ್ನೂ ಓದಿ: ಇಂಡಿಯನ್ IT ಕಂಪನಿಗಳಿಗೆ ಟ್ರಂಪ್ H1B ಫೀ ಆಘಾತ: ಮಾರುಕಟ್ಟೆಯಲ್ಲಿ ಇನ್ಫೋಸಿಸ್, ವಿಪ್ರೋ ಷೇರುಗಳ ಕುಸಿತ!

 


ಋಗ್ವೇದದ ಪ್ರಕಾರ ಆರ್ಯ ಎಂದರೆ ಒಳ್ಳೆಯ, ಸಾಧು, ಸಜ್ಜನ ಎಂಬ ಅರ್ಥವನ್ನು ನೀಡುತ್ತದೆ. ಅದನ್ನು ತೆಗೆದುಕೊಂಡು ಹೋಗಿ ಆರ್ಯರು ಎಂಬ ಪ್ರತ್ಯೇಕ ಪಂಗಡವನ್ನು ಮಾಡಿ ಕೂರಿಸಿದರಲ್ಲಾ ಅವರಿಗೆ ಸಾಷ್ಟಾಂಗ ನಮಸ್ಕಾರ. ಅಲ್ಲದೇ ಆರ್ಯರದು ಬೇರೆ ಜನಾಂಗ ಎನ್ನುತ್ತಾ 1851 ರಲ್ಲಿ ಮೊದಲ ಭಾರಿಗೆ ಲೇಖನ ಬರೆದು ಅದೇ ಸಂಗತಿಯನ್ನು ಡಂಗೂರ ಹೊಡೆಯುತ್ತಾ ಸರಣಿ ಉಪನ್ಯಾಸಗಳನ್ನು ನೀಡಿದ ಕಲಿಯುಗದ ವ್ಯಾಸ 1871 ರಲ್ಲಿ ಆರ್ಯರದು ಪ್ರತ್ಯೇಕ ಜನಾಂಗವಲ್ಲ ಅದೊಂದು ಭಾಷಾ ಕುಟುಂಬ ಎಂದು ಪುನಃ ಪ್ಲೇಟ್‌ ಬದಲಾಯಿಸಿದ  ಈ ಎಲ್ಲಾ ಸಂಗತಿಗಳನ್ನು ಎಂವಿಆರ್‌ ಶಾಸ್ತ್ರಿ ರಚಿಸಿದ ಯಾವುದು ಚರಿತ್ರೆ ಪುಸ್ತಕದ ಅನುವಾದ ರೂಪವಾದ ಬಾಬು ಕೃಷ್ಣಮೂರ್ತಿ ಅನುವಾದಿಸಿದ ಯಾವುದು ಚರಿತ್ರೆಯ ಪುಟ ಸಂಖ್ಯೆ 23 ರಲ್ಲಿ ಆರ್ಯರು ಯಾರು?? ಎಂಬ ಭಾಗದಲ್ಲಿ ಗಮನಿಸಬಹುದಾಗಿದೆ.Vardha Women's Banarasi Art Silk Saree with Jacquard Weave and Unstitched Matching Blouse Piece | Sari for Women