ʻಯಾ ಅಲಿʼ ಖ್ಯಾತಿಯ ಅಸ್ಸಾಂನ ಜನಪ್ರಿಯ ಸಂಗೀತಗಾರ, ಜುಬೀನ್ ಗಾರ್ಗ್ (52) ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ಮಾಡುವಾಗ ಅಕಾಲಿಕ ಮರಣ ಹೊಂದಿದ್ದಾರೆ. ಪ್ರಧಾನಿ ಮೋದಿ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೇರಿದಂತೆ ಇತರ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕಳೆದ 33 ವರ್ಷಗಳಲ್ಲಿ ಅವರು ಹೆಚ್ಚಾಗಿ ಹಿಂದಿ ಹಾಗೂ ಬಂಗಾಳಿ ಹಾಡುಗಳ ಜೊತೆಗೆ, ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲಿ 40,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ ಎನ್ನಲಾಗಿದೆ.
ಇಂದು ಸಿಂಗಾಪುರದಲ್ಲಿ ನಡೆಯಲಿದ್ದ ಈಶಾನ್ಯ ಸಂಗೀತ ಉತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಸ್ಸಾಂ ಮೂಲದ ಗಾಯಕ ಜುಬೀನ್ ತೆರಳಿದ್ದರು. ಅಲ್ಲಿನ ಸಿಂಗಾಪುರದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವಾಗ ಸಮುದ್ರಕ್ಕೆ ಯಾಚ್‌ನಲ್ಲಿ ತೆರಳಿ ಸ್ಕೂಬಾ ಡೈವಿಂಗ್ ಮಾಡುವಾಗ ಆಯ ತಪ್ಪಿಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಗಿದೆ. boAt Airdopes Prime 701 ANC (2025 Launch),46dB Hybrid ANC, 50Hr Battery, Real Spatial Audio,Multidevice Connect,App Support, Bluetooth Earbuds, TWS Ear Buds Wireless Earphones with mic (Obsidian Grey)
ಸೆ. 17 ರಂದು ಸಿಂಗಾಪುರಕ್ಕೆ ತೆರಳಿದ್ದ ಅವರು, ಸಾಂಸ್ಕೃತಿಕ ರಾಯಭಾರಿಯಾಗಿ ಅಸ್ಸಾಮೀಯರ ಪ್ರಬಲ ಧ್ವನಿಯಾಗಿ ಪ್ರತಿಬಿಂಬಿತರಾಗಿದ್ದರು. ತಮ್ಮ ಮೂರನೇ ವಯಸ್ಸಿಗೆ ಗಾಯನ ಪಯಣ ಆರಂಭಿಸಿದ ಅವರು ಅಸ್ಸಾಂ ಹಾಗೂ ಈಶಾನ್ಯ ಭಾಗಗಳಲ್ಲಿ ಮನೆಮಾತಾಗಿದ್ದರು. ಉತ್ಸವದ ಆಯೋಜಕರು ಹಾಗೂ ಅವರ ಪತ್ನಿ ಗರಿಮಾ ಸೈಕಿಯಾ ಅವರ ಸಾವಿನ ಬಗ್ಗೆ ದೃಢಪಡಿಸಿದ್ದು, ದುಖಃತಪ್ತರಾಗಿದ್ದಾರೆ. ಇದನ್ನೂ ಓದಿ: ಇಂಡಿಯನ್ IT ಕಂಪನಿಗಳಿಗೆ ಟ್ರಂಪ್ H1B ಫೀ ಆಘಾತ: ಮಾರುಕಟ್ಟೆಯಲ್ಲಿ ಇನ್ಫೋಸಿಸ್, ವಿಪ್ರೋ ಷೇರುಗಳ ಕುಸಿತ!