ವಯನಾಡು - ಕಾಂಗ್ರೆಸ್ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು, ಖಾಸಗಿ ಭೇಟಿ ಎಂಬಂತೆ ಸೆ. 19 ನೆನ್ನೆ, ಕೇರಳದ ವಯನಾಡಿಗೆ ತೆರಳಿದ್ದಾರೆ. ಇದೊಂದು ವೈಯಕ್ತಿಕ ಭೇಟಿಯಾಗಿದೆ ಎಂದು ಈಗಾಗಲೇ ಅಧಿಕೃತವಾಗಿ ತಿಳಿಸಿದ್ದರೂ, ಕೇರಳ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷಗಳ ನಡುವೆ ಈ ಭೇಟಿಯು ಮಹತ್ವ ಪಡೆದುಕೊಂಡಿದೆ ಎನ್ನಲಾಗಿದೆ.
ಅವರ ಈ ಭೇಟಿ ಮೇಲ್ನೋಟಕ್ಕೆ ಖಾಸಗಿಯಾಗಿತ್ತಾದರೂ, ಕೇಂದ್ರದ ನಾಯಕತ್ವವು ಹೆಚ್ಚುತ್ತಿರುವ ಒಳಜಗಳದ ಬಗ್ಗೆ ಮಾತ್ರವಲ್ಲದೆ; ಈ ನಿರ್ಣಾಯಕ ಭೇಟಿಯಿಂದ ರಾಜಕೀಯ ಬೆಳವಣಿಗೆ ಸಾಧಿಸಲು ಬದ್ಧವಾಗಿದೆ ಎಂದು ಮೂಲಗಳು ಸೂಚಿಸಿವೆ ಎನ್ನಲಾಗಿದೆ. ಅಲ್ಲಿನ ಮುಂಬರುವ ಸ್ಥಳೀಯ ಚುನಾವಣೆಗಳು ಹಾಗೂ ವಿಧಾನಸಭಾ ಚುನಾವಣೆಗಳಿಗೆ ಕೆಪಿಸಿಸಿ ಸಜ್ಜಾಗಬೇಕೆಂದು ಪಕ್ಷದ ನಾಯಕತ್ವ ಬಯಸಿದೆ ಎಂದು ಆಶಿಸಲಾಗಿದೆ ಎನ್ನಲಾಗಿದೆ. boAt Nirvana Space, 360º Spatial Audio, Active Noise Cancellation (~32dB), 100Hrs Battery,4Mics ENx, Fast Charge, v5.3 Bluetooth Earbuds, TWS Ear Buds Wireless Earphones with mic (Cosmic Black)
ನೆನ್ನೆ ಬೆಳಗ್ಗೆ, ಕರಿಪುರ್ ವಿಮಾನ ನಿಲ್ದಾಣದಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಅವರನ್ನು ಬರಮಾಡಿಕೊಂಡರು. ಅಲ್ಲಿಂದ ಅವರು ವಯನಾಡುನ ಪದಿಂಜರೆಥರನಲ್ಲಿ ಸರ್ಕಾರಿ ಶಾಲಾ ಮೈದಾನಕ್ಕೆ ಪ್ರಯಾಣಿಸಿ, ಬಳಿಕ ಅವರು ತಾಜ್ ಹೋಟೆಲ್ಗೆ ಹೊರಟರು. ಮೂಲಗಳ ಪ್ರಕಾರ, ವೈಯಕ್ತಿಕ ಕಾರಣದಿಂದ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗಿದೆ. ಆದರೆ ಇಂದು, ಕೆ.ಸಿ. ವೇಣುಗೋಪಾಲ್ ಮತ್ತು ಪಾರ್ಟಿ ಲೀಡರ್ಸ್‌ಗಳೊಂದಿಗೆ ಅನೌಪಚಾರಿಕವಾಗಿ ಸಭೆ ನಡೆಸಿದರು ಎಂದು ತಿಳಿದು ಬಂದಿದೆ.
ಕಾಫಿ ಬೆಳೆಗಾರರೊಂದಿಗೆ ಸಂವಾದ -
ಚಂದೇಲ್‌ನ ಕಾಫಿ ಸಂಶೋಧನಾ ಪ್ರಯೋಗಾಲಯಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕಿಯರು, ಅಲ್ಲಿನ ಬೆಳೆಗಾರರ ಸಮಸ್ಯೆಯನ್ನು ಆಲಿಸಿದರು ಎನ್ನಲಾಗಿದೆ. ಅಲ್ಲಿನ ರೈತರೊಟ್ಟಿಗೆ ಸಂವಾದ ನಡೆಸಿ, ಅವರು ಎದುರುಗೊಳ್ಳುತ್ತಿರುವ ಸಮಸ್ಯೆಗಳನ್ನು, ಹವಾಮಾನ ವೈಪರೀತ್ಯಗಳ ಬಗ್ಗೆ ಉತ್ಪಾದನಾ ವೆಚ್ಚಗಳು ಸೇರಿದಂತೆ ಇತರೆ ಸಮಸ್ಯೆಗಳನ್ನು ಮನಗಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪ್ರಸಿದ್ಧ ಗಾಯಕ ಜುಬೀನ್ ಗಾರ್ಗ್ ಅಕಾಲಿಕ ಮರಣ - ಅಸ್ಸಾಂ ಸಂಗೀತ ಲೋಕದಲ್ಲಿ ಶೋಕ