Skip to main content
ವಿಡಿಯೋ
1/2
politics

ದಸರಾ ಉತ್ಸವ ವೀಕ್ಷಣೆ ಪಾಸ್‌, ಕುಕ್ಕೆ ಪೂಜೆ ದರ ದುಬಾರಿ ವಿಚಾರ - ಗರಂ ಆದ ವಿರೋಧ ಪಕ್ಷಗಳು.!

By Shravanthi R
ದಸರಾ ಉತ್ಸವ ವೀಕ್ಷಣೆ ಪಾಸ್‌, ಕುಕ್ಕೆ ಪೂಜೆ ದರ ದುಬಾರಿ ವಿಚಾರ - ಗರಂ ಆದ ವಿರೋಧ ಪಕ್ಷಗಳು.!

ಈ ಬಾರಿ ಕರ್ನಾಟಕ ಸರ್ಕಾರದ ದಸರಾ ಆಯೋಜನೆಯಲ್ಲಿ ಸಾರ್ವಜನಿಕರಿಗೆ ಉಚಿತ ದಸರಾ ವೀಕ್ಷಣೆಗೆ ತಡೆಯೊಡ್ಡಿದ್ದು, ಪಾಸ್‌ಗಾಗಿ 2,000 ದಿಂದ 5,000 ರೂ ವರೆಗೆ ನಿಗದಿ ಪಡಿಸಿರುವುದು ಒಂದೆಡೆಯಾದರೆ ಕುಕ್ಕೆ ದೇವರ ದರ್ಶನಭಾಗ್ಯ ಹಾಗೂ ಪೂಜೆ ದರವನ್ನು ಏರಿಕೆ ಮಾಡಲಾಗಿದೆ.

ಇತ್ತೀಚೆಗೆ ದಸರಾ ಉದ್ಘಾಟನೆ ವಿಷಯವಾಗಿ ಗದ್ದಲಗಳು ಹೆಚ್ಚಾಗಿದ್ದವು. ಇದೀಗ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಪೂಜೆ ದರ ಹೆಚ್ಚಳ, ಟಿಕೆಟ್‌ ಶುಲ್ಕ ನಿಗದಿ ಸೇರಿದಂತೆ ಹಲವು ವಿಚಾರಗಳಿಗೆ ವಿರೋಧಗಳು ಹುಟ್ಟಿಕೊಂಡಿವೆ. ಹಿಂದೂಗಳ ದೇವಾಲಯ, ಹಬ್ಬ ಆಚರಣೆಗೆ ಅಡಚಣೆ ಉಂಟು ಮಾಡುವುದರಲ್ಲಿ ಸಿದ್ದರಾಮಯ್ಯನವರಿಗೆ ಏನು ಖುಷಿಯೋ ಎಂದು ಸಿದ್ದರಾಮಯ್ಯನವರ ಆಡಳಿತ ಸರ್ಕಾರವನ್ನು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಂಡಿದೆ ಎನ್ನಲಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಅವರು ತೀವ್ರ ಟೀಕೆ ಮಾಡಿದ್ದಾರೆ. ಬಾನು ಮುಷ್ತಾಕ್‌ ಅವರನ್ನು ದಸರಾಗೆ ಉದ್ಘಾಟಿಸಿದ್ದಾಯಿತು, ಜನಸಾಮಾನ್ಯರಿಗೆ ದುಬಾರಿ ಪಾಸ್‌ ಮಾಡಿ ವೀಕ್ಷಣೆಗೆ ತೊಂದರೆಪಡಿಸಿದ್ದಾಯಿತು. ಈಗ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಸೇರಿದಂತೆ ಕರ್ನಾಟಕದ 14 ಪ್ರಸಿದ್ದ ಮುಜರಾಯಿ ದೇವಾಲಯಗಳಲ್ಲಿ ಸೇವಾ ಶುಲ್ಕ ಏರಿಕೆ ಮಾಡಿ, ಹಿಂದೂಗಳಿಗೆ ಪೆಟ್ಟು ನೀಡಿದ್ದಾರೆ ಎಂದು ವರದಿಯಾಗಿದೆ.  PAULA'S CHOICE PERFECTING 2% BHA Liquid Salicylic Acid Exfoliant-Facial Exfoliant for Blackheads, Enlarged Pores, Wrinkles, Fine Lines- 118 ml Bottle (Model Number: 22010)

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಸಂವಿಧಾನ ಪುಸ್ತಕದಲ್ಲಿ ಹಿಂದೂಗಳೂ ಎರಡನೇ ದರ್ಜೆಯ ಪ್ರಜೆಗಳೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಬಾರಿ ಕರ್ನಾಟಕ ಸರ್ಕಾರದ ದಸರಾ ಆಯೋಜನೆಯಲ್ಲಿ ಸಾರ್ವಜನಿಕರಿಗೆ ಉಚಿತ ದಸರಾ ವೀಕ್ಷಣೆಗೆ ತಡೆಯೊಡ್ಡಿದ್ದು, ಪಾಸ್‌ಗಾಗಿ 2,000 ದಿಂದ 5,000 ರೂ ವರೆಗೆ ನಿಗದಿ ಪಡಿಸಿರುವುದು ಒಂದೆಡೆಯಾದರೆ ಕುಕ್ಕೆ ದೇವರ ದರ್ಶನಭಾಗ್ಯ ಹಾಗೂ ಪೂಜೆ ದರವನ್ನು ಏರಿಕೆ ಮಾಡಲಾಗಿದೆ. ಇದರಿಂದ ಜನರಿಗೆ ಆರ್ಥಿಕ ಹೊರೆಯಾಗಿದೆ ಎಂದು ಪ್ರತಿಪಕ್ಷಗಳು ಕಿಡಿಕಾರಿವೆ ಎನ್ನಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಕುಟುಂಬ ವಯನಾಡಿನಲ್ಲಿ - ರಾಜಕೀಯ ಬಿಕ್ಕಟ್ಟಿನ ನಡುವೇ ಮಹತ್ವದ ಭೇಟಿ