Skip to main content
ವಿಡಿಯೋ
1/2
local

ಸದ್ದಿಲ್ಲದೇ ಕಾವೇರಿ ಆರತಿಗೆ ಚಾಲನೆ..ಕೆಆರ್‌ಎಸ್‌ನಲ್ಲಿ ಪ್ರಾಯೋಗಿಕವಾಗಿ ನಡೆದ ಕಾವೇರಿ ಆರತಿ…!!

By Pavitra Ganapathi Baradavalli
ಸದ್ದಿಲ್ಲದೇ ಕಾವೇರಿ ಆರತಿಗೆ ಚಾಲನೆ..ಕೆಆರ್‌ಎಸ್‌ನಲ್ಲಿ ಪ್ರಾಯೋಗಿಕವಾಗಿ ನಡೆದ ಕಾವೇರಿ ಆರತಿ…!!

ಕೆಆರ್‌ಎಸ್‌ನಲ್ಲಿನ ಕಾವೇರಿ ಆರತಿ ವಿಚಾರ ಈಗಾಗಲೇ ನ್ಯಾಯಾಲಯದಲ್ಲಿ ಇದ್ದರೂ ಸಹ ಕೆಆರ್‌ಎಸ್‌ನ ಬೃಂದಾವನದಲ್ಲಿ ಕಾವೇರಿ ಆರತಿ ಸದ್ದಿಲ್ಲದೆ ಆರಂಭಗೊಂಡಿದೆ. ನಿನ್ನೆ ರಾತ್ರಿ ಸುಮಾರು 8 ಗಂಟೆಯ ಅವಧಿಗೆ ಕಾವೇರಿ ಆರತಿ ಪ್ರಾಯೋಗಿಕವಾಗಿ ನಡೆದಿದೆ.

ಮಂಡ್ಯ: ಕೆಆರ್‌ಎಸ್‌ನಲ್ಲಿನ ಕಾವೇರಿ ಆರತಿ ವಿಚಾರ ಈಗಾಗಲೇ ನ್ಯಾಯಾಲಯದಲ್ಲಿ ಇದ್ದರೂ ಸಹ ಕೆಆರ್‌ಎಸ್‌ನ ಬೃಂದಾವನದಲ್ಲಿ ಕಾವೇರಿ ಆರತಿ ಸದ್ದಿಲ್ಲದೆ ಆರಂಭಗೊಂಡಿದೆ. ನಿನ್ನೆ ರಾತ್ರಿ ಸುಮಾರು 8 ಗಂಟೆಯ ಅವಧಿಗೆ ಕಾವೇರಿ ಆರತಿ ಪ್ರಾಯೋಗಿಕವಾಗಿ ನಡೆದಿದೆ.ಇದನ್ನೂ ಓದಿ: ಸಂಪತ್ತನ್ನು ಸಂಪಾದನೆ ಮಾಡುವುದನ್ನು ಐಟಿ-ಜಿಎಸ್‌ಟಿ ಅಧಿಕಾರಿಗಳು ಕಳ್ಳರಂತೆ ಕಾಣುತ್ತಿದ್ದಾರೆ: ನ್ಯಾ. ಮನಮೋಹನ್‌ ಗಂಭೀರ ಎಚ್ಚರಿಕೆ


ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಹಾಗೂ ಮಿರ್ಜಾ ಇಸ್ಮಾಯಿಲ್ ಅವರ ಯೋಜನೆಯಿಂದ ಪ್ರವಾಸಿಗರನ್ನು ಆಕರ್ಷಿಸಲು ಕೃಷ್ಣರಾಜಸಾಗರ ಅಣೆಕಟ್ಟು ಕೆಳಭಾಗದಲ್ಲಿ ನಿರ್ಮಿಸಿದ ವಿಶ್ವವಿಖ್ಯಾತ ಬೃಂದಾವನ ಪ್ರವಾಸಿಗರ ಪಾಲಿಗೆ ಸ್ವರ್ಗವಾಗಿತ್ತು. ಇದೀಗ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಬೃಂದಾವನದೊಳಗೆ ಪಿಒಪಿಯಲ್ಲಿ ಕಾವೇರಿ ಪ್ರತಿಮೆ ನಿರ್ಮಿಸಿ ಸದ್ದಿಲ್ಲದೆ ಕಾವೇರಿ ಆರತಿಗೆ ಸಿದ್ಧತೆ ನಡೆಸಲಾಗುತ್ತಿದೆ.ಇದನ್ನೂ ಓದಿ: ಕುಮಾರಸ್ವಾಮಿ-ಡಿಕೆ ಶಿವಕುಮಾರ್: ರಾಜಕೀಯ ವೈರತ್ವ ಮರೆತು ಒಂದೇ ವೇದಿಕೆಯಲ್ಲಿ..!

ಈಗಾಗಲೇ ಕಾವೇರಿ ಆರತಿಯನ್ನು ವಿರೋಧಿಸಿ ಹಲವಾರು ರೈತ ಸಂಘಟನೆಗಳು ನ್ಯಾಯಾಲಯಕ್ಕೆ ದಾವೆ ಹೂಡಿವೆ. ಈ ವಿಚಾರ ಕೋರ್ಟ್‌ನಲ್ಲಿ ಇದ್ದರೂ ಸಹ ಡಿಸಿಎಂ ಡಿ.ಕೆ.ಶಿವಕುಮಾರ್ ಆದೇಶದ ಮೇರೆಗೆ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಇದರ ಒಂದು ಭಾಗವಾಗಿ ಕಳೆದ ರಾತ್ರಿ ಪ್ರಯೋಗಿಕವಾಗಿ ಕಾವೇರಿ ಆರತಿ ನಡೆದಿದೆ.ಇದನ್ನೂ ಓದಿ: ದಸರಾ ಉತ್ಸವ ವೀಕ್ಷಣೆ ಪಾಸ್‌, ಕುಕ್ಕೆ ಪೂಜೆ ದರ ದುಬಾರಿ ವಿಚಾರ - ಗರಂ ಆದ ವಿರೋಧ ಪಕ್ಷಗಳು.!


ಕಾವೇರಿ ನೀರಾವರಿ ನಿಗಮ ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಯಿತು. 13 ಅರ್ಚಕರ ತಂಡದಿಂದ 30 ನಿಮಿಷಗಳ ಕಾಲ ಕಾವೇರಿ ಆರತಿ ಜರುಗಿದೆ ಎನ್ನಲಾಗುತ್ತಿದೆ. 

ಅಧಿಕೃತವಾಗಿ ಯಾವ ದಿನ ಕಾವೇರಿ ಆರತಿ ನಡೆಯುತ್ತೆ ಎಂದು ದಿನಾಂಕ ನಿಗದಿಯಾಗಿಲ್ಲ. ಈಗಾಗಲೇ ಕಾವೇರಿ ಆರತಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದೀಗ ನ್ಯಾಯಾಲಯ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬ ಕುತೂಹಲ ಸಹ ಎದುರಾಗಿದೆ.SGF11 Women's Kanjivaram Soft Lichi Silk Saree With Blouse Piece