ಬೆಂಗಳೂರು: ಬೆಂಗಳೂರು ನಗರ ದಿನೇ ದಿನೇ ಗುಂಡಿಯೂರಾಗಿ ಬದಲಾಗುತ್ತಿರುವುದರಿಂದ ಸಾಕಷ್ಟು ಜನ ಬೆಂಗಳೂರನ್ನು ಬಿಟ್ಟು ಹೋಗಲು ತೀರ್ಮಾನಿಸಿದ್ದರು ಆದರೆ ಅದಕ್ಕೆ ಸಂಬಂಧಿಸಿದಂತೆ ಈಗ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ರಸ್ತೆ ಗುಂಡಿಗಳ ಕುರಿತು ನಗರದಲ್ಲಿರುವ ಏಳು ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ಈಗಾಗಳೆ ಮುಚ್ಚಲಾಗಿದೆ. ಇನ್ನೂ ಬಾಕಿ ಇರುವ ಐದು ಸಾವಿರ ಗುಂಡಿಗಳನ್ನು ಮುಚ್ಚಬೇಕಿದೆ ಎಂದು ತಿಳಿಸಿದರು.ಇದನ್ನೂ ಓದಿ: ಮಹಾರಾಷ್ಟ್ರದ ಲಾತೂರ್‌ನಲ್ಲಿ ಭಾರೀ ಮಳೆಯಿಂದ ಭೀಕರ ಪ್ರವಾಹ..!
ಶನಿವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು ರಸ್ತೆ ಗುಂಡಿ ಸಮಸ್ಯೆ ಪರಿಹರಿಸಲು ನಾವು ಬದ್ಧರಾಗಿದ್ದು, ವೇಗ ಗತಿಯಲ್ಲಿ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ. ಇದರ ಮಧ್ಯೆ ರಾಜಕೀಯ ಮಾಡುವವರು ಮಾಡಲಿ ಎಂದರು.
ಯಾರೂ ಬೇಕೂ ಬೇಕೂ ಅಂತ ರಸ್ತೆ ಗುಂಡಿಗಳನ್ನು ಮಾಡುವುದಿಲ್ಲ ಅತಿಯಾಗಿ ಮಳೆ ಬಿದ್ದ ಕಾರಣಕ್ಕೆ ಗುಂಡಿಗಳಾಗುತ್ತದೆ. ಪೊಲೀಸ್ ಕಮಿಷನರ್ ಅವರಿಂದ ವರದಿಯನ್ನು ಕೇಳಲಾಗಿದೆ. ಸಾರ್ವಜನಿಕರು ಸೇರಿದಂತೆ ಎಲ್ಲರೂ ರಸ್ತೆ ಗುಂಡಿಗಳನ್ನು ಮುಚ್ಚಲು ಸಹಕಾರ ನೀಡಬೇಕು ಎಂದು ಕೇಳಿಕೊಂಡರು. ಹಾಗೆಯೇ ರಸ್ತೆ ಗುಂಡಿಗಳು ಕಂಡ ಕಡೆ ಸರ್ಕಾರಕ್ಕೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವ ಕೆಲಸವನ್ನು ಸಾರ್ವಜನಿಕರು ಸಹಕಾರ ನೀಡಬೇಕು..ಇದನ್ನೂ ಓದಿ: ಮುಂದಿನ ವಾರ ಡೊನಾಲ್ಡ್ ಟ್ರಂಪ್-ವೊಲೊಡಿಮಿರ್ ಝೆಲೆನ್ಸ್ಕಿ ಭೇಟಿ...ಉಭಯ ರಾಷ್ಟ್ರಗಳ ಭದ್ರತೆ ಬಗ್ಗೆ ಚರ್ಚೆ!
ಬಿಜೆಪಿಯವರು ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ರಾಜಕೀಯ ಮಾಡಲಿ ಮತ್ತು ರಸ್ತೆಗಳನ್ನು ತಡೆದು ಹೋರಾಟವನ್ನಾದರೂ ಮಾಡಲಿ ಎಂದರು. ಪ್ರತಿಯೊಬ್ಬ ಬಿಜೆಪಿ ಶಾಸಕನ ಕ್ಷೇತ್ರಕ್ಕೆ 25 ಕೋಟಿ ನೀಡಲಾಗಿತ್ತು. ಆದರೂ ಏಕೆ ರಸ್ತೆ ಗುಂಡಿ ಮುಚ್ಚಿಸುವ ಕೆಲಸಗಳು ಆಗಿಲ್ಲ ಎಂದು ಡಿ.ಕೆ ಶಿವಕುಮಾರ್ ಪ್ರಶ್ನಿಸಿದರು.ಇದನ್ನೂ ಓದಿ: ಕೋರ್ಟ್ ಹಾಲ್‌ನಲ್ಲೇ ಪತ್ನಿಗೆ ಚಾಕು ಇರಿದ ಪತಿ…!!
ಬಿಜೆಪಿಯವರು ಮೊದಲು ತಮ್ಮಪಾಲಿನ ಕೆಲಸ ಮಾಡಲಿ. ಅನಂತರ ರಾಜಕೀಯ ಮಾಡಲಿ. ನಾವು ರಸ್ತೆಗುಂಡಿ ಸಮಸ್ಯೆಯನ್ನು ಬಗೆಹರಿಸುತ್ತೇವೆ. ನಾವು ರಾಜಕೀಯ ಮಾಡುವುದು ಬಿಟ್ಟು ಜನರ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಅವರು ಕೇವಲ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.SGF11 Women's Kanjivaram Soft Lichi Silk Saree With Blouse Piece