ಕೇರಳದಲ್ಲಿ ಅಪರೂಪದ ಹಾಗೂ ಅತ್ಯಂತ ಅಪಾಯಕಾರಿಯಾದ ನೆಗ್ಲೆರಿಯಾ ಫೊವ್ಲೆರಿ (brain-eating amoeba) ಸೋಂಕು ತೀವ್ರವಾಗಿ ಹರಡುತ್ತಿದೆ. ಇದುವರೆಗೆ 19 ಜನರು ಸಾವನ್ನಪ್ಪಿದ್ದು, 67 ಮಂದಿ ಸೋಂಕಿತರಾಗಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆ ಆಗುವ ಭೀತಿ ವ್ಯಕ್ತವಾಗಿದೆ.
ಹೇಗೆ ಹರಡುತ್ತದೆ ಈ ಸೋಂಕು?
ಸಾಮಾನ್ಯವಾಗಿ ನಿಂತ ನೀರು, ಕೆರೆ, ಕೊಳಗಳು ಮತ್ತು ಸರೋವರಗಳಲ್ಲಿ ಈ ಅಮೀಬಾ ಬೆಳೆಯುತ್ತದೆ. ಅಂತಹ ನೀರಿನಲ್ಲಿ ಈಜಿದಾಗ, ಅಮೀಬಾ ಮೂಗಿನ ಮೂಲಕ ದೇಹಕ್ಕೆ ಪ್ರವೇಶಿಸಿ ಮೆದುಳಿಗೆ ನೇರವಾಗಿ ಹಾನಿ ಮಾಡುತ್ತದೆ. ಇದು ಕೇಂದ್ರ ನರವ್ಯೂಹವನ್ನು ಹಾಳುಮಾಡಿ ಕೆಲವೊಮ್ಮೆ ಸಾವಿಗೂ ಕಾರಣವಾಗುತ್ತದೆ. ಕಲಬುರಗಿ ಕಾಲೋನಿಯಲ್ಲಿ ದಾರುಣ ಘಟನೆ: ವ್ಯಕ್ತಿಯನ್ನು ಬೆತ್ತಲೆ ಮಾಡಿ, ಕಟ್ಟಿಗೆಯಿಂದ ಹೊಡೆದು ಕೊ*ಲೆ..!
ಸೋಂಕಿನ ಲಕ್ಷಣಗಳು
ಸೋಂಕು ತಗುಲಿದ 1 ರಿಂದ 9 ದಿನಗಳ ಒಳಗೆ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು:
* ತಲೆನೋವು
* ಜ್ವರ
* ವಾಕರಿಕೆ
* ವಾಂತಿ
ಮುನ್ನೆಚ್ಚರಿಕೆ ಕ್ರಮಗಳು
* ನಿಂತ ನೀರು, ಕೊಳ, ಕೆರೆಗಳಲ್ಲಿ ಈಜುವುದು ಅಥವಾ ಸ್ನಾನ ಮಾಡುವುದು ತಪ್ಪಿಸಿಕೊಳ್ಳಿ.
* ಈಜುವಾಗ ಮೂಗಿಗೆ ಕ್ಲಿಪ್ ಬಳಸುವುದು.
* ಬಾವಿ ಮತ್ತು ಟ್ಯಾಂಕ್‌ಗಳನ್ನು ನಿಯಮಿತವಾಗಿ ಕ್ಲೋರಿನ್ ಬಳಸಿ ಸ್ವಚ್ಛಗೊಳಿಸುವುದು.
* ನೀರಿನ ಸಂಪರ್ಕದ ಬಳಿಕ ತಲೆನೋವು ಅಥವಾ ಜ್ವರದ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಕರ್ನಾಟಕದಲ್ಲಿ ಪರಿಸ್ಥಿತಿ:
ಪ್ರಸ್ತುತ ಕರ್ನಾಟಕದಲ್ಲಿ ಯಾವುದೇ ನೆಗ್ಲೆರಿಯಾ ಫೊವ್ಲೆರಿ ಪ್ರಕರಣ ಪತ್ತೆಯಾಗಿಲ್ಲ. ಆದಾಗ್ಯೂ, ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಭಯ ಪಡುವ ಅವಶ್ಯಕತೆ ಇಲ್ಲ. ಮುನ್ನೆಚ್ಚರಿಕೆ ಕೈಗೊಂಡರೆ ಸೋಂಕು ತಪ್ಪಿಸಿಕೊಳ್ಳಬಹುದು" ಎಂದು ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯ ಡಾ. ಸುರೇಶ್ ತಿಳಿಸಿದ್ದಾರೆ.