Skip to main content
ವಿಡಿಯೋ
1/3
sports

ಏಷ್ಯಾ ಕಪ್ 2025 ಸೂಪರ್ 4 ಪಂದ್ಯ: ಶ್ರೀಲಂಕಾ vs ಬಾಂಗ್ಲದೇಶ: ಕೊನೆ ಓವರ್‌ ಥ್ರಿಲ್ಲರ್‌ ಪಂದ್ಯದ ಸಾರಾಂಶ ಹೀಗಿದೆ

By Gireesh Vasishta
ಏಷ್ಯಾ ಕಪ್ 2025 ಸೂಪರ್ 4 ಪಂದ್ಯ: ಶ್ರೀಲಂಕಾ vs ಬಾಂಗ್ಲದೇಶ: ಕೊನೆ ಓವರ್‌ ಥ್ರಿಲ್ಲರ್‌ ಪಂದ್ಯದ ಸಾರಾಂಶ ಹೀಗಿದೆ

ಬಾಂಗ್ಲಾದೇಶ್‌ನ ಚೇಸ್ ಒಂದು ರೋಲರ್‌ಕೋಸ್ಟರ್ ಆಗಿತ್ತು. ಓಪನರ್ ಬ್ಯಾಟ್ಸ್‌ಮ್ಯಾನ್‌ ತಂಜಿದ್ ಹಸನ್ ತಮಿಮ್, ನುವನ್ ಥುಶರಾಗೆ ಆರಂಭದಲ್ಲಿ ಔಟ್ ಆದರು, ಸೈಫ್ ಹಸನ್ (48 ಚೆಂಡುಗಳಲ್ಲಿ 61) ಮತ್ತು ತೌಹಿದ್ ಹೃದೋಯ್‌ (42 ಚೆಂಡುಗಳಲ್ಲಿ 58) ಎರಡನೇ ವಿಕೆಟ್‌ಗೆ 112 ರನ್‌ಗಳ ಜೊತೆಯಾಟ ರೂಪಿಸಿಸರು.

ದುಬೈ, ಸೆಪ್ಟೆಂಬರ್ 21, 2025 – ಏಷ್ಯಾ ಕಪ್ 2025 ರ ಸೂಪರ್ ಫೌರ್ಸ್ ಹಂತದ ಟ್ವೆಂಟಿ-20 ಪಂದ್ಯದಲ್ಲಿ ಬಾಂಗ್ಲಾದೇಶ್, ಶ್ರೀಲಂಕಾವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಈ ಪಂದ್ಯದಲ್ಲಿ 169 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾ ಟೈಗರ್‌ಗಳು ಡ್ರಾಮ್ಯಾಟಿಕ್ ಗೆಲುವು ಸಾಧಿಸಿದರು.

ಗ್ರೂಪ್ ಹಂತದಲ್ಲಿ ಮೂರು ಗೆಲುವುಗಳೊಂದಿಗೆ ಉನ್ನತ ಸ್ಥಾನದಲ್ಲಿದ್ದ ಶ್ರೀಲಂಕಾ, ಬಾಂಗ್ಲಾದೇಶ್ ನಾಯಕ ಲಿಟನ್ ದಾಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿದ ನಂತರ 20 ಓವರ್‌ಗಳಲ್ಲಿ 168/7 ರನ್‌ಗಳನ್ನು ಗಳಿಸಿತು. ದಸುನ್ ಶನಕ 37 ಚೆಂಡುಗಳಲ್ಲಿ 64* ರನ್‌ಗಳು (ಆರು ಬೌಂಡರಿ, ಮೂರು ಸಿಕ್ಸರ್‌ಗಳೊಂದಿಗೆ) ಕೊನೆಯಲ್ಲಿ ಉತ್ತಮ ಆಟ ಆಡಿದರು. 15ನೇ ಓವರ್‌ನಲ್ಲಿ 104/5 ಗಳಿಸಿ ಹೆಣಗಾಡುತ್ತಿದ್ದ ಶ್ರೀಲಂಕಾ ತಂಡಕ್ಕೆ ಆಸರೆಯಾದರು. ಕುಸಲ್ ಮೇಂಡಿಸ್ 34 ರನ್‌ಗಳನ್ನು ಸೇರಿಸಿದರು, ಅಂತಿಮವಾಗಿ ಲಂಕಾ 168/7 ರನ್‌ಗಳನ್ನು ಗಳಿಸಿತು.ಇದನ್ನು ಓದಿ: ಶೃಂಗೇರಿ ಲಾಡ್ಜ್‌ನಲ್ಲಿ ಹಿಂದೂ ಮಹಿಳೆ ಜತೆ ಮುಸ್ಲಿಂ ವ್ಯಕ್ತಿ ಲಾಕ್: ಅಬ್ದುಲ, ರಮೇಶನಾದ ಕಥೆ: ಇಲ್ಲಿದೆ ಮಾಹಿತಿ

ಬಾಂಗ್ಲಾದೇಶ್‌ನ ಚೇಸ್ ಒಂದು ರೋಲರ್‌ಕೋಸ್ಟರ್ ಆಗಿತ್ತು. ಓಪನರ್ ಬ್ಯಾಟ್ಸ್‌ಮ್ಯಾನ್‌ ತಂಜಿದ್ ಹಸನ್ ತಮಿಮ್, ನುವನ್ ಥುಶರಾಗೆ ಆರಂಭದಲ್ಲಿ ಔಟ್ ಆದರು, ಸೈಫ್ ಹಸನ್ (48 ಚೆಂಡುಗಳಲ್ಲಿ 61) ಮತ್ತು ತೌಹಿದ್ ಹೃದೋಯ್‌ (42 ಚೆಂಡುಗಳಲ್ಲಿ 58) ಎರಡನೇ ವಿಕೆಟ್‌ಗೆ 112 ರನ್‌ಗಳ ಜೊತೆಯಾಟ ರೂಪಿಸಿ, ಆಕ್ರಮಣಾತ್ಮಕ ಸ್ಟ್ರೋಕ್‌ಪ್ಲೇ ಮತ್ತು ಸ್ಮಾರ್ಟ್ ರೊಟೇಷನ್‌ನೊಂದಿಗೆ ಪಂದ್ಯ ನಡೆಯಿತು. ಹೃದೋಯ್‌ನ ಉತ್ಕೃಷ್ಟ ಕವರ್ ಡ್ರೈವ್‌ಗಳು ಮತ್ತು ಹಸನ್‌ರ ಬ್ಯಾಟಿಂಗ್‌ ಶೈಲಿ, ಬಾಂಗ್ಲಾದೇಶ್ ಅನ್ನು 15ನೇ ಓವರ್‌ನಲ್ಲಿ 120/1 ಕ್ಕೆ ತಂದು ನಿಲ್ಲಿಸಿದರು.Monte Carlo Mens Solid Lace Up Genuine Leather Casual Shoes (201803FW).

ಶ್ರೀಲಂಕಾ ಇನ್ನಿಂಗ್ಸ್‌: Pathum Nissanka-22(18balls) 4s/6s-3/0

Kusal Mendis (wk)-34(28balls) 4s/6s-3/1

Kamil Mishara-18(15balls)4s/6s- 2/0

Charith Asalanka (c)- 20(16balls)6s/4s-1/1

Dasun Shanaka- 64not out(37balls) 6s/4s- 6/3

Kamindu Mendis- 25(20balls)6s/4s- 2/1

ಬಾಂಗ್ಲಾದೇಶ್‌ ಇನ್ನಿಂಗ್ಸ್‌-

Saif Hassan- 61run(48 balls) 4s/6s-5/2

Towhid Hridoy-58 (42balls) 4s/6s- 6/1

Litton Das (c & wk)-22(14balls)-4s/6s 2/1

Shamim Hossain- 14*(7balls) 4s/6s 2/0

ಆದರೆ, ವನಿಂದು ಹಸರಂಗ (2/22) ಮತ್ತು ಶನಕ (2/21) ವಿಕೆಟ್‌ ಪಡೆಯುವುದರ ಮೂಲಕ ಬಾಂಗ್ಲಾ ರನ್‌ ಚೇಸ್‌ಗೆ ಸಾವಾಲೊಡ್ಡಿದರು, ಈ ಮೂಲಕ ಬಾಂಗ್ಲಾದೇಶ್‌ಅನ್ನು 148 ರನ್‌ಗೆ 5 ವಿಕೆಟ್‌ಗೆ ತಂದು ನಿಲ್ಲಿಸಿದರು, ನಂತರ ಕೊನೆಯ 28 ಚೆಂಡುಗಳಲ್ಲಿ 21 ರನ್‌ಗಳ ಅಗತ್ಯತೆ ಬಾಂಗ್ಲಾಕ್ಕೆ ಇತ್ತು.

- ಶಮಿಮ್ ಹೊಸೇನ್ (7 ಚೆಂಡುಗಳಲ್ಲಿ 14*) ರನ್‌ ಬಾರಿಸಿ, 19ನೇ ಓವರ್‌ನಲ್ಲಿ ದುಶ್ಮಂತ ಚಾಮೀರಾ ವಿರುದ್ಧ ಎರಡು ಬೌಂಡರಿ ಸಿಡಿಸಿ ಒತ್ತಡವನ್ನು ಕಡಿಮೆ ಮಾಡಿದರು.

-ನಾಸುಮ್ ಅಹ್ಮದ್ 2 ಚೆಂಡುಗಳಲ್ಲಿ 1 ರನ್‌ ಗಳಿಸಿ ಕೊನೆಯ ಓವರ್‌ನಲ್ಲಿ  ಬಾಂಗ್ಲಾಕ್ಕೆ ಗೆಲುವು ತಂದುಕೊಟ್ಟರು.