Skip to main content
ವಿಡಿಯೋ
1/2
general

ಸಾಕುವ ಸಾಮರ್ಥ್ಯವಿಲ್ಲದ ಮುಸ್ಲಿಂ ಪುರುಷನಿಗೆ ಬಹುಪತ್ನಿತ್ವವನ್ನು ಅನುಮತಿಸಲು ಸಾಧ್ಯವಿಲ್ಲ: ಕೇರಳ ಹೈಕೋರ್ಟ್ ಹೇಳಿಕೆ

By Gireesh Vasishta
ಸಾಕುವ ಸಾಮರ್ಥ್ಯವಿಲ್ಲದ ಮುಸ್ಲಿಂ ಪುರುಷನಿಗೆ ಬಹುಪತ್ನಿತ್ವವನ್ನು ಅನುಮತಿಸಲು ಸಾಧ್ಯವಿಲ್ಲ: ಕೇರಳ ಹೈಕೋರ್ಟ್ ಹೇಳಿಕೆ

ಕೇರಳದ ಪೆರಿಂತಲ್ಮನ್ನದ 39 ವರ್ಷದ ಮುಸ್ಲಿಂ ಮಹಿಳೆಯೊಬ್ಬಳು ಗಂಡನಿಂದ ಜೀವನಾಂಶ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪಿ.ವಿ. ಕುನ್ನಿಕೃಷ್ಣನ್‌ ಅವರಿದ್ದ ಪೀಠ ಈ ರೀತಿ ತಿಳಿಸಿದೆ.

ಕೊಚ್ಚಿ, ಸೆಪ್ಟೆಂಬರ್ 20, 2025 – ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ಬಹುಪತ್ನಿತ್ವವು ಕೇವಲ ಎಲ್ಲಾ ಪತ್ನಿಯರಿಗೆ ಸಮಾನ ನ್ಯಾಯ ಮತ್ತು ನಿರ್ವಹಣೆ ನೀಡುವ ಸಾಮರ್ಥ್ಯವಿರುವ ಪುರುಷರಿಗೆ ಮಾತ್ರ ಅನುಮತಿಸಲು ಸಾಧ್ಯವೆಂದು ಕೇರಳ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ. ಕೋರ್ಟ್, ಕುರಾನ್‌ ಶ್ಲೋಕಗಳನ್ನು ಉಲ್ಲೇಖಿಸಿ, ಸಾಕುವ ಸಾಮರ್ಥ್ಯವಿಲ್ಲದ ವ್ಯಕ್ತಿಗೆ ಎರಡನೇ ಅಥವಾ ಮೂರನೇ ವಿವಾಹ ಮಾಡಿಕೊಳ್ಳಲು ಹಕ್ಕು ಇಲ್ಲ ಎಂದು ಸ್ಪಷ್ಟಪಡಿಸಿದೆ.Monte Carlo Mens Solid Lace Up Genuine Leather Casual Shoes (201803FW)

ಕೇರಳದ ಪೆರಿಂತಲ್ಮನ್ನದ 39 ವರ್ಷದ ಮುಸ್ಲಿಂ ಮಹಿಳೆಯೊಬ್ಬಳು  ಗಂಡನಿಂದ ಜೀವನಾಂಶ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪಿ.ವಿ. ಕುನ್ನಿಕೃಷ್ಣನ್‌ ಅವರಿದ್ದ ಪೀಠ ಈ ರೀತಿ ತಿಳಿಸಿದೆ.

ಪಾಲಕ್ಕಾಡ್ ಅಂಧ ಮುಸ್ಲಿಂ ವ್ಯಕ್ತಿಯೊಬ್ಬ (46) ಮಸೀದಿಯ ಮುಂದೆ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ. ಈತನಿಗೆ ಇಬ್ಬರು ಹೆಂಡತಿಯರು. 2ನೇ ಹೆಂಡತಿಯೂ ಭಿಕ್ಷೆ ಬೇಡುತ್ತಿದ್ದಳು. ಇತ್ತೀಚೆಗೆ 2ನೇ ಹೆಂಡತಿಗೆತಲಾಖ್‌’ ನೀಡಿ 3ನೇ ಮದುವೆಯಾಗುವುದಾಗಿ ಆತ ಬೆದರಿಸುತ್ತಿದ್ದ. ಇದರಿಂದ ಬೇಸತ್ತ ಆಕೆ ಮಾಸಿಕ 10,000 ರು. ಜೀವನಾಂಶ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು. ಕೋರ್ಟ್ಆಕೆಯ ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಆಕೆ ಹೈಕೋರ್ಟ್ಮೆಟ್ಟಿಲೇರಿದ್ದಳು.ಇದನ್ನು ಓದಿ: ಏಷ್ಯಾ ಕಪ್ 2025 ಸೂಪರ್ 4 ಪಂದ್ಯ: ಶ್ರೀಲಂಕಾ vs ಬಾಂಗ್ಲದೇಶ: ಕೊನೆ ಓವರ್‌ ಥ್ರಿಲ್ಲರ್‌ ಪಂದ್ಯದ ಸಾರಾಂಶ ಹೀಗಿದೆ

ಹೈಕೋರ್ಟ್ಹೇಳಿದ್ದೇನು?:

ಪ್ರತಿವಾದಿ ಮುಸ್ಲಿಂ ಸಮುದಾಯಕ್ಕೆ ಸೇರಿದವನಾದ್ದರಿಂದ ಅವನು ತನ್ನ ಸಾಂಪ್ರದಾಯಿಕ ಕಾನೂನಿನ ಪ್ರಯೋಜನಗಳನ್ನು ಪಡೆಯುತ್ತಿದ್ದು. ಅದು ಅವನಿಗೆ 2 ಮತ್ತು 3 ಬಾರಿ ಮದುವೆಯಾಗಲು ಅನುವು ಮಾಡಿಕೊಡುತ್ತದೆ. ಆದರೆ 2ನೇ ಅಥವಾ ಮೂರನೇ ಹೆಂಡತಿ ಸಾಕುವ ಸಾಮರ್ಥ್ಯವಿಲ್ಲದ ವ್ಯಕ್ತಿ ಮತ್ತೊಂದು ಮದುವೆ ಆಗುವುದನ್ನು ಒಪ್ಪಲು ಸಾಧ್ಯವಿಲ್ಲ. ಮುಸ್ಲಿಮರಲ್ಲಿ ಶಿಕ್ಷಣದ ಕೊರತೆ ಇದ್ದು ಮುಸ್ಲಿಂ ವೈಯಕ್ತಿಕ ಕಾನೂನಿನ ಕುರಿತು ತಿಳಿವಳಿಕೆ ಇಲ್ಲದಿರುವುದು ಇಂತಹ ಮದುವೆಗಳಿಗೆ ಕಾರಣವಾಗುತ್ತಿದೆಎಂದು ಕೋರ್ಟ್ಕಳವಳ ವ್ಯಕ್ತಪಡಿಸಿದೆ. ಜೊತೆಗೆ ವ್ಯಕ್ತಿಗೆ ಆಪ್ತ ಸಮಾಲೋಚನೆ ನಡೆಸುವಂತೆ ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದೆ.