Skip to main content
ವಿಡಿಯೋ
1/2
general

ಬೆಂಗಳೂರಿನಲ್ಲಿ ರಸ್ತೆ ಗುಂಡಿ ಅವಾಂತರ: ಗೂಡ್ಸ್ ಆಟೋ ಪಲ್ಟಿ, ತಪ್ಪಿದ ಅನಾಹುತ.!

By Shravanthi R
ಬೆಂಗಳೂರಿನಲ್ಲಿ ರಸ್ತೆ ಗುಂಡಿ ಅವಾಂತರ: ಗೂಡ್ಸ್ ಆಟೋ ಪಲ್ಟಿ, ತಪ್ಪಿದ ಅನಾಹುತ.!

ಬೆಂಗಳೂರು ರಸ್ತೆಗಳಲ್ಲಿನ ಗುಂಡಿಗಳು ಸಾರ್ವಜನಿಕರ ಸಂಚಾರಕ್ಕೆ ದೊಡ್ಡ ಅಡೆತಡೆಯಾಗಿದ್ದು, ಇತ್ತೀಚೆಗೆ ಈ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಸರ್ಕಾರ ಈ ಬಗ್ಗೆ ನಿಗಾವಹಿಸಿದ್ದು, ಅಧಿಕಾರಿಗಳು ಹಾಗೂ ಸಂಬಂಧಿತ ಇಂಜಿನಿಯರ್‌ಗಳಿಗೆ ಖಡಕ್‌ ಎಚ್ಚರಿಕೆ ನೀಡಿ ಗಡುವು ನೀಡಲಾಗಿದೆ. ಈ ಘಟನೆ ನಗರದ ರಸ್ತೆ ನಿರ್ವಹಣೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎನ್ನಬಹುದಾಗಿದೆ.

ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳ ಹಾವಳಿ ಹೆಚ್ಚುತ್ತಲೇ ಇದೆ. ಇದಕ್ಕೆ ಜಿದ್ದಾಜಿದ್ದಿ ಅನ್ನೋ ಹಾಗೆ ಸರ್ಕಾರಕ್ಕೂ, ಅಧಿಕಾರಿಗಳಿಗೂ ತಲೆನೋವಾಗಿ ಮಳೆ ಕಾಟವೂ ಹೆಚ್ಚಾಗಿದೆ. ಈ ಮದ್ಯೆ, ಜನರು ಸಂಕಷ್ಟ ಅನುಭವಿಸ್ತಿರೋದು ಸಾಮಾನ್ಯವಾಗಿಬಿಟ್ಟಿದೆ. ಜನಸಾಮಾನ್ಯರು ಓಡಾಟಕ್ಕೆ ಸವಾಲಾಗಿರೋದರ ಜೊತೆಗೆ ವಾಹನಗಳ ಸಂಚಾರ ಅಲ್ಲ ಇದು ಸಂಚಕಾರ ಆಗಿ ಪರಿಣಮಿಸಿದೆ ಎನ್ನಲಾಗಿದೆ. ನಗರದ ಅಶೋಕನಗರದ ಮಾಗ್ರತ್ ರಸ್ತೆಯ ಹಾಸ್ಮಾಟ್ ಆಸ್ಪತ್ರೆ ಬಳಿ ಗೂಡ್ಸ್ ಆಟೋ ಒಂದು ರಸ್ತೆ ಗುಂಡಿಯಲ್ಲಿ ಸಿಲುಕಿ ಪಲ್ಟಿಯಾದ ಘಟನೆ ವರದಿಯಾಗಿದೆ.

ಸೆ. 20, ಶನಿವಾರ ಬೆಳಗಿನ ಜಾವ 4.50 ರ ಸುಮಾರಿಗೆ ಈ ಘಟನೆ ನಡೆದಿದ್ದು, ನಸುಗತ್ತಲಲ್ಲಿ ಚಾಲಕ ಆಟೋ ಓಡಿಸಿಕೊಂಡು ಹೊರಟಿದ್ದಾರೆ. ಈ ಮದ್ಯೆ ಚಾಲಕ ಎದರುರಾದ ರಸ್ತೆ ಗುಂಡಿ ತಪ್ಪಿಸಲು ಯತ್ನಿಸಿದಾಗ ವಾಹನದ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಆನಂತರ, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ದೃಶ್ಯವು ಹಿಂಬದಿಯಲ್ಲಿ ಚಲಿಸುತ್ತಿದ ಕಾರಿನ  ಚಾಲಕರು ಅಲ್ಲಿ ಅಳವಡಿಸಲಾಗಿದ್ದ ಡ್ಯಾಶ್ ಕ್ಯಾಮರದಲ್ಲಿ ಸೆರೆಯಾಗಿದೆ ಎಂದು ತಿಳಿಸಲಾಗಿದೆ. Lava Bold N1 Pro (Titanium Gold, 4 GB RAM, 128 GB Storage)| Bigger 6.67" HD+ IP54 Display | 120 Hz Refresh Rate | 50 MP AI Triple Rear Camera | 8 MP Front Camera| 5000 mAh Battery | Charger in Box

ಬೆಂಗಳೂರು ರಸ್ತೆಗಳಲ್ಲಿನ ಗುಂಡಿಗಳು ಸಾರ್ವಜನಿಕರ ಸಂಚಾರಕ್ಕೆ ದೊಡ್ಡ ಅಡೆತಡೆಯಾಗಿದ್ದು, ಇತ್ತೀಚೆಗೆ ಈ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಸರ್ಕಾರ ಈ ಬಗ್ಗೆ ನಿಗಾವಹಿಸಿದ್ದು, ಅಧಿಕಾರಿಗಳು ಹಾಗೂ ಸಂಬಂಧಿತ ಇಂಜಿನಿಯರ್‌ಗಳಿಗೆ ಖಡಕ್‌ ಎಚ್ಚರಿಕೆ ನೀಡಿ ಗಡುವು ನೀಡಲಾಗಿದೆ. ಈ ಘಟನೆ ನಗರದ ರಸ್ತೆ ನಿರ್ವಹಣೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎನ್ನಬಹುದಾಗಿದೆ. ಇದನ್ನೂ ಓದಿ: ದಸರಾ ಹಬ್ಬಕ್ಕೆ ಜಿಎಸ್‌ಟಿ 2.0 ಬಂಪರ್ ಗಿಫ್ಟ್: ನಾಳೆಯಿಂದ ದಿನಸಿ ವಸ್ತುಗಳ ದರ ಇಳಿಕೆ!