ನಟಿ ಭಾವನಾ ರಾಮಣ್ಣ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದು, ಇದೀಗ ಆ ಪುಟ್ಟ ಕಂದನೊಂದಿಗೆ ಮೊದಲ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಾಯ್ತನದ ಅನನ್ಯ ಅನುಭವವನ್ನು ಪದಗಳಲ್ಲಿ ಹಿಡಿದಿಡಲು ಪ್ರಯತ್ನಿಸಿರುವ ಭಾವನಾ, ಆ ಸುಂದರ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಮದುವೆಯಾಗದೆಯೇ ಐವಿಎಫ್ ತಂತ್ರಜ್ಞಾನದ ಮೂಲಕ ತಾಯ್ತನದ ಭಾಗ್ಯ ಪಡೆದಿರುವ ಭಾವನಾ, ಮಗುವಿನ ಕೈ ಹಿಡಿದಿರುವ ಮನಮಿಡಿಯುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಮದನ್ ಕುಮಾರ್ ಅವರು ಸೆಪ್ಟೆಂಬರ್ 21, 2025 ರಂದು ಬೆಳಿಗ್ಗೆ 11:35 ಕ್ಕೆ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.Tommy Hilfiger Quartz Multifunction White Dial Silicone Strap Watch for Men-NETH1791353
ಈ ಫೋಟೋ ಹಂಚಿಕೊಳ್ಳುವ ಮೂಲಕ ತಮ್ಮ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಭಾವನಾ ಹೇಳಿಕೊಂಡಿದ್ದಾರೆ. "ದೊಡ್ಡ ಮನೆ, ಪುಟ್ಟ ಕುಟುಂಬ... ಈಗ ನಮ್ಮ ಗೂಡಿಗೆ ಬಂದ ಹೊಸ ಪುಟ್ಟ ಹಕ್ಕಿಯ ಚುಯ್ ಚುಯ್ ನಾದ," ಎಂದು ಅವರು ಬರೆದುಕೊಂಡಿದ್ದಾರೆ.
ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿರುವ ಭಾವನಾ, "ನಾನು ಮತ್ತು ನನ್ನ ತಂದೆ, ಬೆಳಗ್ಗೆ ಎದ್ದು ಮನೆಯಂಗಳದಲ್ಲಿ ಕಾಫಿ ಹೀರುತ್ತಾ ಕೂತರೆ, ಇಲ್ಲಿ ಹಕ್ಕಿಗಳದ್ದೇ ನಾದ ನಿನಾದ. ಹಕ್ಕಿಗಳ ಹಾಡು ಪಾಡು ಕೇಳುತ್ತಿದ್ದ ಮನೆಯಲ್ಲೀಗ, ಹೊಸದೊಂದು ಪುಟ್ಟ ಹಕ್ಕಿಯ ಸರಿಗಮ," ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.'ಕಾಂತಾರ: ಚಾಪ್ಟರ್ 1' ಟ್ರೈಲರ್ ಗ್ರಾಂಡ್ ಲಾಂಚ್‌ಗೆ ಕೌಂಟ್‌ಡೌನ್...ಹಲ್‌ಚಲ್ ಎಬ್ಬಿಸಲು ಇನ್ನೊಂದೇ ದಿನ ಬಾಕಿ!
ಮಗುವಿಗೆ ಹೆಸರಿಡುವ ಸಂಭ್ರಮದಲ್ಲಿರುವ ಭಾವನಾ, "ಮನೆಯ ಗೂಡಲ್ಲಿ ಚುಯ್ ಚುಯ್ ಸದ್ದು ಮಾಡುತ್ತಿರುವ ಈ ಪುಟ್ಟ ಹಕ್ಕಿಗೆ ಏನೆಂದು ಹೆಸರಿಡುವುದು? ನಮ್ಮನ್ನು ನಯವಾಗಿ ಬಂಧಿಸಿದ ಸುಂದರ ಬಲೆ, ಇದು ಹೊಸ ಪ್ರೀತಿಯ ಅಲೆ. ವಿನೂತನ ವಿಸ್ಮಯ," ಎಂದು ಬರೆದು ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದಾರೆ.
"ಏನೆಂದು ಹೆಸರಿಡಲಿ" ಎಂದು ಕೇಳಿದ ಭಾವನಾ ಅವರ ಪೋಸ್ಟ್‌ಗೆ ಅಭಿಮಾನಿಗಳಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವರು ಮಗುವಿಗೆ ವಿವಿಧ ಹೆಸರುಗಳನ್ನು ಸೂಚಿಸುತ್ತಿದ್ದಾರೆ. ಈ ಫೋಟೋ ಎಲ್ಲರಲ್ಲೂ ಸಂತೋಷ ಮೂಡಿಸಿದೆ.