ರೇಣುಕಾಸ್ವಾಮಿ ಪ್ರಕರಣದಲ್ಲಿ ಪ್ರಮುಖ ಆರೋಪಿ ದರ್ಶನ್ ಮತ್ತೆ ಜೈಲುಪಾಲಾಗಿದ್ದಾರೆ. ಕಳೆದ ವರ್ಷ ಬೆನ್ನು ನೋವಿನ ಶಸ್ತ್ರಚಿಕಿತ್ಸೆಯ ನೆಪವೊಡ್ಡಿ ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದರು. ನಂತರ ಈ ಪ್ರಕರಣದ ಇತರ ಎಲ್ಲಾ ಆರೋಪಿಗಳಿಗೆ ನಿಯಮಿತ ಜಾಮೀನು ಸಿಕ್ಕಿತು.
ಆದರೆ, ಜೈಲಿನಿಂದ ಹೊರಬಂದ ನಂತರ ದರ್ಶನ್ ಶಸ್ತ್ರಚಿಕಿತ್ಸೆಗೆ ಒಳಗಾಗಿರಲಿಲ್ಲ. ಕಳೆದ ವರ್ಷ ಅಕ್ಟೋಬರ್ 30ರಂದು ಬಿಡುಗಡೆಯಾದ ದರ್ಶನ್, ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಸ್ವಲ್ಪ ವಿಶ್ರಾಂತಿ ಬಳಿಕ 'ಡೆವಿಲ್' ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿ ಸಹಜ ಜೀವನಕ್ಕೆ ಮರಳಿದರು.
ಬೆನ್ನು ನೋವಿನಿಂದಾಗಿ ಕೆಲವೊಮ್ಮೆ ಅವರಿಗೆ ಓಡಾಡಲು ಕಷ್ಟವಾಗಿದ್ದು ನಿಜ. ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದರು. ಆದರೆ ಶಸ್ತ್ರಚಿಕಿತ್ಸೆಗೆ ಮಾತ್ರ ಒಪ್ಪಲಿಲ್ಲ. ದರ್ಶನ್ ಅವರ ಆಪ್ತ ಝೈದ್ ಖಾನ್, ಇಷ್ಟೊಂದು ಬೆನ್ನು ನೋವಿದ್ದರೂ ದರ್ಶನ್ ಏಕೆ ಶಸ್ತ್ರಚಿಕಿತ್ಸೆಗೆ ಒಪ್ಪಲಿಲ್ಲ ಎಂಬುದನ್ನು ವಿವರಿಸಿದ್ದಾರೆ.ಇದನ್ನು ಓದಿ:ತನ್ನ ಪುಟ್ಟ ಕಂದಮ್ಮನೊಂದಿಗಿನ ಸುಂದರ ಕ್ಷಣ ಹಂಚಿಕೊಂಡ ನಟಿ ಭಾವನ..ಪೋಸ್ಟ್‌ನಲ್ಲೇನಿದೆ ಗೊತ್ತಾ?
"ದರ್ಶನ್ ಅವರಿಗೆ ಇದ್ದ ಬೆನ್ನು ನೋವಿನ ಸಮಸ್ಯೆ ನನಗೆ ಗೊತ್ತು. 'ಕಾಟೇರ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಆದರೆ ದರ್ಶನ್ ಸರ್ ಒಪ್ಪಲಿಲ್ಲ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಒಂದು ವರ್ಷ ವಿಶ್ರಾಂತಿ ಪಡೆಯಬೇಕು. ಸಿನಿಮಾ ಮಾಡದೇ, ಅಭಿಮಾನಿಗಳನ್ನು ರಂಜಿಸದೆ ಒಂದು ವರ್ಷ ಕಾಲ ವ್ಯರ್ಥ ಮಾಡಲು ನನಗೆ ಇಷ್ಟವಿಲ್ಲ. ಅದಕ್ಕೆ ಶಸ್ತ್ರಚಿಕಿತ್ಸೆ ಬೇಡ ಎಂದು ಅವರು ನನ್ನ ಬಳಿ ಹೇಳಿದ್ದರು" ಎಂದು ಝೈದ್ ಖಾನ್ ನೆನಪಿಸಿಕೊಂಡಿದ್ದಾರೆ.
"ನನಗೂ ಬೆನ್ನು ನೋವಿನ ಸಮಸ್ಯೆ ಎದುರಾಗಿತ್ತು. ಆ ನೋವು ಎಷ್ಟು ಕಠಿಣ ಎಂದು ನನಗೆ ಗೊತ್ತು. ಒಂದು ವರ್ಷ ನಾನು ಮಂಚದ ಮೇಲೆ ಮಲಗಲು ಸಾಧ್ಯವಾಗದೇ, ಚಾಪೆ ಹಾಸಿ ಕೆಳಗೆ ಮಲಗುತ್ತಿದ್ದೆ. ಅಷ್ಟು ನೋವಿತ್ತು. ದರ್ಶನ್ ಸರ್‌ಗೆ ಎಷ್ಟು ನೋವು ಇರಬಹುದು ಎನ್ನುವುದು ನನಗೆ ಅರ್ಥವಾಗುತ್ತದೆ" ಎಂದು ಝೈದ್ ಖಾನ್ ಸಂದರ್ಶನದಲ್ಲಿ ತಿಳಿಸಿದ್ದಾರೆ.Tommy Hilfiger Clark Blue Dial Men Watch Analog Watch - for Men TH1792083
"ಪರೀಕ್ಷೆ ವೇಳೆ, ಬೆನ್ನಿನ ಮೂಳೆಯಲ್ಲಿ ಸಣ್ಣ ಸ್ಕ್ರಾಚ್ ಆಗಿ ಎಕ್ಸ್ಟ್ರಾ ಫ್ಯಾಟ್ ಒತ್ತಿದ ಕಾರಣ ರಕ್ತ ಪರಿಚಲನೆ ಸರಿಯಾಗಿ ಆಗದೆ ಅಷ್ಟು ನೋವಾಗುತ್ತದೆ. ಜೀವ ಹೋಗುವಂತಾಗುತ್ತದೆ. ನನಗೆ ಅದೇ ಆಗಿತ್ತು. ಆ ನೋವು ಗೊತ್ತು. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ವೈದ್ಯರು ಹೇಳಿದ್ದರು. ಇದೆಲ್ಲಾ 'ಕಾಟೇರ' ಚಿತ್ರದ ಚಿತ್ರೀಕರಣದ ವೇಳೆ ನಡೆದಿತ್ತು."
"ಸರಿ ಎಂದವರು ನಂತರ ಶಸ್ತ್ರಚಿಕಿತ್ಸೆಗೆ ಒಪ್ಪುತ್ತಲೇ ಇರಲಿಲ್ಲ. ಕೊನೆಗೊಮ್ಮೆ ನಾನೇ ಈ ಬಗ್ಗೆ ಕೇಳಿಬಿಟ್ಟೆ, 'ಅಣ್ಣಾ, ನೋವಿದ್ದರೂ ಶಸ್ತ್ರಚಿಕಿತ್ಸೆ ಬೇಡ ಎನ್ನುತ್ತಿದ್ದೀರಾ?' ಎಂದಾಗ ಅವರು ಒಂದು ಮಾತು ಹೇಳಿದರು" ಎಂದು ಝೈದ್ ಖಾನ್ ನೆನಪಿಸಿಕೊಂಡಿದ್ದಾರೆ.
"ನಾನು ಅಷ್ಟು ಬಲವಂತ ಮಾಡಿ ಕೇಳಿದಾಗ ಅವರು ಹೇಳಿದರು: 'ಶಸ್ತ್ರಚಿಕಿತ್ಸೆ ಸರಿ. ಆದರೆ ಒಂದು ವರ್ಷ ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಹೇಳಿದ್ದಾರೆ. ನಾನು ಒಂದು ವರ್ಷ ಸಿನಿಮಾ ಮಾಡದೆ ವಿಶ್ರಾಂತಿ ಪಡೆದರೆ ಅಭಿಮಾನಿಗಳು, ಇಂಡಸ್ಟ್ರಿ ಕಥೆ ಏನಾಗಬೇಕು? ನನಗೆ ಶಸ್ತ್ರಚಿಕಿತ್ಸೆ ಬೇಡ, ಸ್ಟೆರಾಯ್ಡ್, ಸಿರಿಂಜ್ ತಗೊಂಡು ಹೇಗೋ ಸಹಿಸಿಕೊಳ್ಳುತ್ತೇನೆ. ಇದರಿಂದ ಚಿತ್ರರಂಗಕ್ಕೆ ನಷ್ಟವಾಗುವುದು ಬೇಡ' ಎಂದಿದ್ದರು" ಎಂದು ಝೈದ್ ಖಾನ್ ವಿವರಿಸಿದ್ದಾರೆ.