Skip to main content
ವಿಡಿಯೋ
1/3
sports

ಏಷ್ಯಾ ಕಪ್ 2025 ಸೂಪರ್ 4 ಹಂತ: ಭಾರತ vs ಪಾಕಿಸ್ತಾನ: ಮತ್ತೊಮ್ಮೆ ಪಾಕ್‌ಗೆ ಮುಖಭಂಗ ಮಾಡಲು ಭಾರತ ತಂಡ ಸಿದ್ದ

By Gireesh Vasishta
ಏಷ್ಯಾ ಕಪ್ 2025 ಸೂಪರ್ 4 ಹಂತ: ಭಾರತ vs ಪಾಕಿಸ್ತಾನ: ಮತ್ತೊಮ್ಮೆ ಪಾಕ್‌ಗೆ ಮುಖಭಂಗ ಮಾಡಲು ಭಾರತ ತಂಡ ಸಿದ್ದ

ಈ ಹಿಂದೆ ಸೂರ್ಯಕುಮಾರ್ ಯಾದವ್ ನೇತೃತ್ವದ ಅಜೇಯ ಭಾರತ, ಪಾಕಿಸ್ತಾನದ 128 ರನ್‌ಗಳನ್ನು 15.5 ಓವರ್‌ಗಳಲ್ಲಿ ಬೆನ್ನಟ್ಟಿ 7 ವಿಕೆಟ್‌ಗಳ ಗೆಲುವು ಮತ್ತು ಒಮಾನ್‌ನ ಮೇಲೆ 21 ರನ್‌ಗಳ ಜಯದೊಂದಿಗೆ ಸೂಪರ್ ಫೌರ್ಸ್‌ಗೆ ಪ್ರವೇಶಿಸಿದೆ.

ದುಬೈ: ಏಷ್ಯಾ ಕಪ್ 2025 ಸೂಪರ್ ಫೌರ್ಸ್ ಹಂತ ಇಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯಲಿದೆ. ಸ್ಥಳೀಯ ಸಮಯದ ಪ್ರಕಾರ ಸಾಯಂಕಾಲ 6:30ಕ್ಕೆ ಹಾಗೂ ಭಾರತೀಯ ಸಮಯ 8:00 PM ಆರಂಭವಾಗುತ್ತಿದೆ.


ಸೆಪ್ಟೆಂಬರ್
14 ರಂದು ಭಾರತ 7 ವಿಕೆಟ್ಗಳ ಅಂತರದಿಂದ ಪಾಕ್‌ನ ವಿರುದ್ದ ಗೆಲುವು ಸಾಧಿಸಿತ್ತು. ಎರಡು ತಂಡಗಳೂ ಸೆಮಿ-ಫೈನಲ್ ಸ್ಥಾನಕ್ಕಾಗಿ ಆಡುತ್ತಿದೆ, ಆದರೆ ಭಾರತ-ಪಾಕಿಸ್ತಾನ ಪಂದ್ಯವು ಕ್ರಿಡೆಗಿಂತ ಮಿಗಿಲಾಗಿ ಭಾರತೀಯರು ಬಣ್ಣಿಸುತ್ತಿದ್ದಾರೆ. ಏಕೆಂದರೆ ಪಹಲ್ಗಾಂ ದಾಳಿಯ ನಿಮಿತ್ತ ಪಾಕಿಸ್ತಾನ ತಂಡವನ್ನು ಈಗಾಗಲೇ ಏಷ್ಯಾ ಕಪ್‌ನಲ್ಲಿ ಭಾರತ ತಂಡ ಸೋಲಿಸಿದೆ. ಹೀಗಾಗಿ ಮತ್ತೊಮ್ಮೆ ಭಾರತಕ್ಕೆ ಅವಕಾಶ ದೊರಕಿದ್ದು, ಪಾಕಿಸ್ತಾನಕ್ಕೆ ಇನ್ನೊಮ್ಮೆ ಮುಖಭಂಗ ಉಂಟುಮಾಡುವ ಉತ್ಸಾಹದಲ್ಲಿದ್ದಾರೆ ಭಾರತೀಯ ಆಟಗಾರರು.ಇದನ್ನು ಓದಿ: ಸರಿ ಇರುವ ತೀರ್ಪುಗಳನ್ನೂ ಪ್ರಶ್ನಿಸುವ ಸರ್ಕಾರಿ ಇಲಾಖೆಗಳ ರೂಢಿ ತಪ್ಪಬೇಕು: ಕಾನೂನು ಸಚಿವ ಮೇಘವಾಲ್ ಹೇಳಿಕೆ

ಈ ಹಿಂದೆ ಸೂರ್ಯಕುಮಾರ್ ಯಾದವ್ ನೇತೃತ್ವದ ಅಜೇಯ ಭಾರತ, ಪಾಕಿಸ್ತಾನದ 128 ರನ್ಗಳನ್ನು 15.5 ಓವರ್ಗಳಲ್ಲಿ ಬೆನ್ನಟ್ಟಿ 7 ವಿಕೆಟ್ಗಳ ಗೆಲುವು ಮತ್ತು ಒಮಾನ್ ಮೇಲೆ 21 ರನ್ಗಳ ಜಯದೊಂದಿಗೆ ಸೂಪರ್ ಫೌರ್ಸ್ಗೆ ಪ್ರವೇಶಿಸಿದೆ.

ಸಂಭಾವ್ಯ ಭಾರತ ತಂಡ:

ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (c), ತಿಲಕ್ ವರ್ಮಾ, ಸಂಜು ಸ್ಯಾಮ್‌ಸನ್ (wk), ಶಿವಮ್ ದುಬೆ, ಹಾರ್ದಿಕ್ ಪಂಡ್ಯಾ, ಅಕ್ಸರ್ ಪಟೇಲ್, ಕುಲ್‌ದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾSafari Flip 32L Casual Printed Backpack, 2 Compartments, Bottle Holder, Front Pocket, School Bag for Boys and Girls, College Bag, Office Bag, Travel Bag for Men and Women

ಸಂಭಾವ್ಯ ಪಾಕಿಸ್ಥಾನ ತಂಡ:

ಸಹಿಬ್ಜಾದಾ ಫರ್ಹಾನ್, ಸೈಮ್ ಅಯುಬ್, ಮೊಹಮ್ಮದ್ ಹಾರಿಸ್ (wk), ಫಖರ್ ಜಮಾನ್, ಸಲ್ಮಾನ್ ಅಘಾ (c), ಖುಶ್ದಿಲ್ ಶಾ, ಹಸನ್ ನವಾಜ್, ಮೊಹಮ್ಮದ್ ನವಾಜ್, ಶಹೀನ್ ಅಫ್ರಿದಿ, ಹಾರಿಸ್ ರೌಫ್, ಅಬ್ರಾರ್ ಅಹ್ಮದ್

ಒಟ್ಟಾರೆ ಭಾರತ ಮತ್ತು ಪಾಕಿಸ್ತಾನದ ಪಂದ್ಯದಲ್ಲಿ ಭಾರತ ಗೆಲ್ಲುವ ಫೇವರೇಟ್ ತಂಡವಾಗಿದ್ದು, ಪಾಕಿಸ್ತಾನ ತಂಡದಲ್ಲಿ ಅನುಭವಿಗಳ ಕೊರತೆ ಇದ್ದು ಗೆಲ್ಲುವ ಮನಸ್ಸು ಮಾಡಬೇಕಾಗಿದೆ. ಆದರೆ ಈ ಮೊದಲೇ ಹೇಳಿದಂತೆ ಭಾರತ-ಪಾಕಿಸ್ತಾನ ಪಂದ್ಯ ಪಹಲ್ಗಾಂ ದಾಳಿಯ ನಂತರ ಬರಿ ಕ್ರಿಕೆಟ್ ಪಂದ್ಯವಾಗಷ್ಟೇ ಉಳಿಯದೆ ಎರಡು ದೇಶಗಳ ದೇಶಾಭಿಮಾನಕ್ಕೆ ಸಂಬಂಧಿಸಿದಂತೆ ಬಿಂಬಿಸಲಾಗುತ್ತಿದೆ. ಹೀಗಾಗಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಎರಡು ತಂಡಗಳಿಗೂ ಸಹ ಇದೆ.