ಸೆಪ್ಟೆಂಬರ್ 21: ಭಾರತದ ರಾಜ್ಯಗಳ ಸಾಲ ಬೆಟ್ಟದಂತೆ ಬೆಳೆಯುತ್ತಿದೆ. ಒಂದು ದಶಕದಲ್ಲಿ ರಾಜ್ಯಗಳ ಸಾಲ ಮೂರು ಪಟ್ಟು ಹೆಚ್ಚಾಗಿದೆ. 2022-23ರಲ್ಲಿ 28 ರಾಜ್ಯಗಳ ಒಟ್ಟು ಸಾಲ 59.60 ಲಕ್ಷ ಕೋಟಿ ರೂ ತಲುಪಿದೆ. 2013-14ರಲ್ಲಿ ಇದು ಕೇವಲ 17.57 ಲಕ್ಷ ಕೋಟಿ ರೂ ಆಗಿತ್ತು, ಇದು 10 ವರ್ಷಗಳಲ್ಲಿ 3.3 ಪಟ್ಟು ಹೆಚ್ಚಳವನ್ನು ತೋರಿಸುತ್ತದೆ.
ಭಾರತದ ಒಟ್ಟು ಜಿಡಿಪಿಯ (GDP) ಶೇ. 22.17ರಷ್ಟು ಸಾಲವನ್ನು ರಾಜ್ಯಗಳು ಹೊಂದಿವೆ. ಈ ಮಾಹಿತಿಯನ್ನು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ಸಿಎಜಿಯ ವಿಶ್ಲೇಷಣಾತ್ಮಕ ದತ್ತಾಂಶ ಆಧರಿಸಿ ವರದಿ ಮಾಡಿದೆ. ರಾಜ್ಯಗಳ ಜಿಎಸ್ಡಿಪಿಗೆ ಸಾಲದ ಅನುಪಾತ ಏರಿಕೆ, ವೈಯಕ್ತಿಕವಾಗಿ ಮತ್ತು ದೇಶದ ಆದಾಯಕ್ಕೆ ತಕ್ಕಂತೆ ಸಾಲ ಮಾಡುವುದು ಮುಖ್ಯ. ದೇಶದ ಆದಾಯಕ್ಕೆ ಜಿಡಿಪಿ ಸಂಕೇತವಾದರೆ, ರಾಜ್ಯಗಳಿಗೆ ಅದು ಜಿಎಸ್ಡಿಪಿ (GSDP). 2013-14ರಲ್ಲಿ ರಾಜ್ಯಗಳ ಸರಾಸರಿ ಜಿಎಸ್ಡಿಪಿಗೆ ಹೋಲಿಸಿದರೆ ಸಾಲದ ಅನುಪಾತ ಶೇ. 16.66 ಇತ್ತು. 2022-23ರಲ್ಲಿ ಇದು ಶೇ. 23ಕ್ಕೆ ಏರಿದೆ. JYESHTA Women's American Crepe Wrao Floral Printed Skirt with Ruffle Hem and Elastic Waistband Closure | Skirts for Woman
ಈ ಅನುಪಾತ ಅತಿ ಹೆಚ್ಚಿರುವ ರಾಜ್ಯ ಪಂಜಾಬ್, ಇದರ ಸಾಲ-ಜಿಎಸ್ಡಿಪಿ ಅನುಪಾತ ಶೇ. 40.35. ನಾಗಾಲ್ಯಾಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ನಂತರದ ಸ್ಥಾನದಲ್ಲಿವೆ. ಒಟ್ಟು ಎಂಟು ರಾಜ್ಯಗಳು ತಮ್ಮ ಜಿಎಸ್ಡಿಪಿಯ ಶೇ. 30ಕ್ಕಿಂತ ಹೆಚ್ಚಿನ ಸಾಲವನ್ನು ಹೊಂದಿವೆ. ಒಡಿಶಾ ರಾಜ್ಯವು ಅತಿ ಕಡಿಮೆ ಸಾಲದ ಅನುಪಾತವನ್ನು (ಶೇ. 8.45) ಹೊಂದಿದ್ದು, ಆರ್ಥಿಕ ಶಿಸ್ತನ್ನು ತೋರಿಸಿದೆ. ಮಹಾರಾಷ್ಟ್ರ ಮತ್ತು ಗುಜರಾತ್‌ನಂತಹ ರಾಜ್ಯಗಳು ಶೇ. 20ಕ್ಕಿಂತ ಕಡಿಮೆ ಸಾಲದ ಅನುಪಾತ ಹೊಂದಿವೆ. ಒಟ್ಟು ಆರು ರಾಜ್ಯಗಳು ಈ ಮಟ್ಟದಲ್ಲಿವೆ. ಧರ್ಮಸ್ಥಳ ಕೇಸ್: ಚಿನ್ನಯ್ಯನ 3ನೇ ವಿಡಿಯೋ ವೈರಲ್...ತಿಮರೋಡಿ ತಂಡದ ವಿರುದ್ಧ ಹೊಸ ದೂರು!
ಕರ್ನಾಟಕದ ಸಾಲದ ಸ್ಥಿತಿ
ಸಿಎಜಿ ವರದಿಯಲ್ಲಿ ಕರ್ನಾಟಕದ ಸಾಲ ಮತ್ತು ಜಿಎಸ್ಡಿಪಿ ಅನುಪಾತವನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ. ಆದರೆ, ನೀತಿ ಆಯೋಗದ ಅಂದಾಜಿನ ಪ್ರಕಾರ, 2022-23ರಲ್ಲಿ ಕರ್ನಾಟಕದ ಸಾಲ-ಜಿಎಸ್ಡಿಪಿ ಅನುಪಾತ ಶೇ. 23.9 ಆಗಿತ್ತು. 2021ರಲ್ಲಿ ಇದು ಶೇ. 25.68ಕ್ಕೆ ಏರಿದ್ದರೂ, ಕರ್ನಾಟಕವು ನಂತರ ಸಾಲವನ್ನು ಕಡಿಮೆಗೊಳಿಸಿತ್ತು. ಆದರೆ, 2025-26ರಲ್ಲಿ ಕರ್ನಾಟಕದ ಸಾಲ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಯಿದೆ. 2024-25ರ ಕರ್ನಾಟಕ ಆರ್ಥಿಕ ಸಮೀಕ್ಷೆಯ ಪ್ರಕಾರ, ಕರ್ನಾಟಕದ ಒಟ್ಟು ಸಾಲ 6.85 ಲಕ್ಷ ಕೋಟಿ ರೂ ಇದ್ದು, 2025-26ರಲ್ಲಿ ಇದು 7.64 ಲಕ್ಷ ಕೋಟಿ ರೂಗೆ ಏರಬಹುದು.