Skip to main content
ವಿಡಿಯೋ
1/3
cinema

ಎಮ್ಮಿ ಪ್ರಶಸ್ತಿ ಗೆದ್ದ ಟಾಪ್ 7 ವೆಬ್ ಸೀರಿಸ್‌ಗಳನ್ನು ನೋಡಿದ್ದೀರಾ? ಸಂಪೂರ್ಣ ವಿವರ ಇಲ್ಲಿದೆ!

By Ram Chethan
ಎಮ್ಮಿ ಪ್ರಶಸ್ತಿ ಗೆದ್ದ ಟಾಪ್  7 ವೆಬ್ ಸೀರಿಸ್‌ಗಳನ್ನು ನೋಡಿದ್ದೀರಾ? ಸಂಪೂರ್ಣ ವಿವರ ಇಲ್ಲಿದೆ!

ಇತ್ತೀಚಿನ 77ನೇ ಪ್ರೈಮ್‌ಟೈಮ್ ಎಮ್ಮಿ ಅವಾರ್ಡ್ ವಿಜೇತ ಮತ್ತು ನಾಮಿನೇಟ್ ಆದ ಜನಪ್ರಿಯ ಟಿವಿ ಹಾಗೂ ವೆಬ್‌ ಸರಣಿಗಳನ್ನು ಈಗ ಜಿಯೋಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು. ‘ದಿ ಪಿಟ್’, ‘ದಿ ಪೆಂಗ್ವಿನ್’, ‘ಹ್ಯಾಕ್ಸ್’, ‘ದಿ ವೈಟ್ ಲೋಟಸ್’, ‘ದಿ ಲಾಸ್ಟ್ ಆಫ್ ಅಸ್’ ಸೇರಿದಂತೆ ಅಗ್ರಮಾನ್ಯ ಸರಣಿಗಳು ವೀಕ್ಷಕರನ್ನು ರಂಜಿಸಲು ಸಿದ್ಧವಾಗಿವೆ.

ಇತ್ತೀಚೆಗೆ ನಡೆದ 77ನೇ ಪ್ರೈಮ್‌ಟೈಮ್ ಎಮ್ಮಿ ಅವಾರ್ಡ್ಸ್ ಸಮಾರಂಭದಲ್ಲಿ ಟಿವಿ ಹಾಗೂ ವೆಬ್ ಸೀರಿಸ್‌ಗಳ ಜನಪ್ರಿಯ ತಾರೆಯರನ್ನು ಗೌರವಿಸಲಾಯಿತು. ಹಾಲಿವುಡ್ ಕಂಟೆಂಟ್‌ಗಳನ್ನು ಇಷ್ಟಪಡುವವರಿಗೆ ಈ ಪ್ರಶಸ್ತಿ ಸಮಾರಂಭ ಕುತೂಹಲ ಮೂಡಿಸಿತ್ತು. ಭಾರತದಲ್ಲೂ ಅನೇಕ ಸಿನಿಪ್ರೇಮಿಗಳು ಈ ಪ್ರಶಸ್ತಿಗಳನ್ನು ವೀಕ್ಷಿಸಿ ಸಂತೋಷಪಟ್ಟಿದ್ದಾರೆ.

ಎಮ್ಮಿ ಪ್ರಶಸ್ತಿ ವಿಜೇತ ಕೆಲವು ಪ್ರಖ್ಯಾತ ಟಿವಿ ಶೋಗಳು ಹಾಗೂ ವೆಬ್ ಸೀರಿಸ್‌ಗಳನ್ನು ಭಾರತದಲ್ಲೂ ವೀಕ್ಷಿಸಬಹುದು. ಜಿಯೋಹಾಟ್‌ಸ್ಟಾರ್‌ ಎಮ್ಮಿ ಪ್ರಶಸ್ತಿ ಗೆದ್ದ 7 ಅತ್ಯುತ್ತಮ ಟಿವಿ ಸೀರಿಸ್‌ಗಳನ್ನು ಪ್ರಸಾರ ಮಾಡುತ್ತಿದೆ. ವಾರಾಂತ್ಯದಲ್ಲಿ ಮನೆಯಲ್ಲೇ ಕುಳಿತು ಎಮ್ಮಿ ಪ್ರಶಸ್ತಿ ಪಡೆದ ಈ ಸರಣಿಗಳನ್ನು ಆನಂದಿಸಬಹುದು.

‘ಓನ್ಲಿ ಮರ್ಡರ್ಸ್ ಇನ್ ದಿ ಬಿಲ್ಡಿಂಗ್’ ಇದು ಅಮೆರಿಕದ ಪ್ರಸಿದ್ಧ ಮಿಸ್ಟರಿ, ಕಾಮಿಡಿ, ಡ್ರಾಮಾ ವೆಬ್ ಸೀರಿಸ್. ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಮೂವರು ನಿವಾಸಿಗಳು ಅದೇ ಕಟ್ಟಡದಲ್ಲಿ ನಡೆದ ಕೊಲೆ ರಹಸ್ಯವನ್ನು ಭೇದಿಸುವ ಕಥೆಯುಳ್ಳ ಈ ಸರಣಿಗೆ ನಿರಂತರ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಆಕರ್ಷಕ ಕಥೆ, ಚುರುಕಾದ ಸಂಭಾಷಣೆ ಮತ್ತು ಹಾಸ್ಯಮಯ ನಟರ ಅಭಿನಯ ಗಮನ ಸೆಳೆದಿದೆ. ಇದು ಎಮ್ಮಿ ಪ್ರಶಸ್ತಿ ಗೆಲ್ಲದಿದ್ದರೂ, ಸತತವಾಗಿ ನಾಮಿನೇಟ್ ಆಗಿದೆ.Hush Puppies Mens Forest Slipon Loafer

‘ದಿ ಪಿಟ್’ ಅಮೆರಿಕದಲ್ಲಿ ಜನಪ್ರಿಯತೆ ಗಳಿಸುತ್ತಿರುವ ವೈದ್ಯಕೀಯ ಹಿನ್ನೆಲೆಯ ಟಿವಿ ಸರಣಿಗಳಲ್ಲಿ ಒಂದಾಗಿದೆ. ಅಮೆರಿಕದ ಮಹಾನಗರಗಳಲ್ಲಿನ ಆರೋಗ್ಯ ಕಾರ್ಯಕರ್ತರ ಕೆಲಸ, ಒತ್ತಡಗಳು, ಮತ್ತು 15 ಗಂಟೆಗಳ ಶಿಫ್ಟ್‌ಗಳನ್ನು ಆಧರಿಸಿ ಈ ಸರಣಿಯನ್ನು ಭಾವನಾತ್ಮಕವಾಗಿ ಚಿತ್ರಿಸಲಾಗಿದೆ. ಈ ಸರಣಿಯು ಹಲವಾರು ಎಮ್ಮಿ ಪ್ರಶಸ್ತಿಗಳನ್ನು ಗೆದ್ದು ಗಮನ ಸೆಳೆದಿದೆ.

ಡಿಸಿ ಕಾಮಿಕ್ಸ್ ನಿರ್ಮಿತ ‘ದಿ ಪೆಂಗ್ವಿನ್’ ಅಮೆರಿಕದಲ್ಲಿ ಜನಪ್ರಿಯ ಸೂಪರ್‌ವಿಲನ್ ಸರಣಿಯಾಗಿದೆ. ಅಮೆರಿಕದ ಜನರಿಗೆ ಅಚ್ಚುಮೆಚ್ಚಿನದಾಗಿರುವ ಈ ಸರಣಿ, ಭಾರತದ ಯುವಜನತೆಯ ಅಚ್ಚುಮೆಚ್ಚಿನ ಸರಣಿಯೂ ಆಗಿದೆ. ಒಬ್ಬ ಖಳನಾಯಕನ ಕಥೆಯನ್ನು ರೋಮಾಂಚಕ ನಿರೂಪಣೆಯ ಮೂಲಕ ವೀಕ್ಷಕರಿಗೆ ತಲುಪಿಸಲಾಗಿದೆ. ಈ ಸರಣಿಯೂ ಹಲವು ಎಮ್ಮಿ ಪ್ರಶಸ್ತಿಗಳನ್ನು ಗೆದ್ದಿದೆ.

‘ಹ್ಯಾಕ್ಸ್’ ಅಮೆರಿಕದ ಮತ್ತೊಂದು ಜನಪ್ರಿಯ ಡಾರ್ಕ್ ಕಾಮಿಡಿ ಟಿವಿ ಸರಣಿ. 2021ರಲ್ಲಿ ಪ್ರಾರಂಭವಾದ ಇದು 2025ರವರೆಗೂ ಮುಂದುವರೆದಿದ್ದು, ಈಗಾಗಲೇ 5 ಸೀಸನ್‌ಗಳನ್ನು ಕಂಡಿದೆ. ಪ್ರತಿಯೊಂದು ಸೀಸನ್ ಕೂಡ ಅಪಾರ ಜನಪ್ರಿಯತೆ ಗಳಿಸಿದೆ. ಇದರ ಅದ್ಭುತ ಬರಹ ಮತ್ತು ಚಿತ್ರಕಥೆ ಜಾಗತಿಕ ಗಮನ ಸೆಳೆದಿದ್ದು, ಇದು ಎಮ್ಮಿ ಪ್ರಶಸ್ತಿಯನ್ನೂ ಪಡೆದಿದೆ.ನಡೆಯೋಕಾಗದಷ್ಟು ಬೆನ್ನು ನೋವಿದ್ರು ದರ್ಶನ್ ಸರ್ಜರಿಗೆ ಮಾತ್ರ ಹಿಂದೇಟು! ಇದಕ್ಕೆ ಕಾರಣ ಏನು ಗೊತ್ತಾ?

‘ದಿ ವೈಟ್ ಲೋಟಸ್’ ಐಷಾರಾಮಿ ರೆಸಾರ್ಟ್‌ನಲ್ಲಿರುವ ಅತಿಥಿಗಳು ಮತ್ತು ಉದ್ಯೋಗಿಗಳ ಜೀವನದ ಮೇಲೆ ಕೇಂದ್ರೀಕರಿಸುತ್ತದೆ. ಪ್ರತಿ ಸೀಸನ್ ಅನ್ನು ವಿಭಿನ್ನ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ರೆಸಾರ್ಟ್‌ನ ಅತಿಥಿಗಳು ಮತ್ತು ಸಿಬ್ಬಂದಿ ತಮ್ಮ ವೈಯಕ್ತಿಕ ಜೀವನವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆ. ಈ ಸರಣಿ ಹಲವು ಬಾರಿ ಎಮ್ಮಿ ಪ್ರಶಸ್ತಿಗೆ ನಾಮಿನೇಟ್ ಆಗಿ ಕೆಲವು ಪ್ರಶಸ್ತಿಗಳನ್ನು ಗೆದ್ದಿದೆ.

ನಾಟಿ ಡಾಗ್‌ನ ಜನಪ್ರಿಯ ವಿಡಿಯೋ ಗೇಮ್ ಸರಣಿಯನ್ನು ಟಿವಿ ಸರಣಿಯಾಗಿ ರೂಪಿಸಿದ ಶೋ ‘ದಿ ಲಾಸ್ಟ್ ಆಫ್ ಅಸ್’. ಅನ್ಯಲೋಕದ ಜಗತ್ತನ್ನು ಜೀವಂತವಾಗಿರಿಸಿದ ಈ ಸರಣಿಯ ಆಳವಾದ ಭಾವನಾತ್ಮಕ ದೃಶ್ಯಗಳು ವೀಕ್ಷಕರನ್ನು ಆಕರ್ಷಿಸಿವೆ. ಇದು ಹಲವು ಬಾರಿ ಎಮ್ಮಿಗೆ ನಾಮಿನೇಟ್ ಆಗಿ, ಕಿರುತೆರೆಯ ಬ್ಲಾಕ್‌ಬಸ್ಟರ್ ಸರಣಿ ಎಂದು ಸಾಬೀತಾಗಿದೆ.

‘ಅಂಡೋರ್’ 2016ರಲ್ಲಿ ತೆರೆಕಂಡ ‘ದಿ ರೋಗ್ ಒನ್’ನ ಪ್ರೀಕ್ವೆಲ್ ಆಗಿದೆ. ಇದು ರಾಜಕೀಯ ಸೈ-ಥ್ರಿಲ್ಲರ್ ಆಗಿದ್ದು, ವಿಮರ್ಶಕರಿಂದ ಮೆಚ್ಚುಗೆ ಗಳಿಸಿದೆ. ಎಮ್ಮಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ತನ್ನ ಜನಪ್ರಿಯತೆಯನ್ನು ಸಾಬೀತುಪಡಿಸಿದೆ.

‘ಸಂಬಡಿ ಸಮ್‌ವೇರ್’ ಹಾಸ್ಯನಟಿ ಬ್ರಿಡ್ಜೆಟ್ ಎವೆರೆಟ್ ಅವರ ಬದುಕಿನಿಂದ ಪ್ರೇರಿತವಾದ ಕಥೆ. ಈ ವೆಬ್ ಸೀರಿಸ್‌ನಲ್ಲಿ ಬ್ರಿಡ್ಜೆಟ್ ಎವೆರೆಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಸಂಗೀತದ ಮೂಲಕ ಸಂತೋಷವನ್ನು ಕಂಡುಕೊಳ್ಳುವ ಮಹಿಳೆಯ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ. ಈ ಸರಣಿಯು ಪೋಷಕ ನಟರ ವಿಭಾಗದಲ್ಲಿ ಎಮ್ಮಿ ಪ್ರಶಸ್ತಿಯನ್ನು ಗಳಿಸಿದೆ.