ಬೆಂಗಳೂರು: ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ಜನ ಪರದಾಡುವಂತಾಗಿದೆ. ಹೊಮ್ಮದೇವನಹಳ್ಳಿ ರಸ್ತೆ ಗುಂಡಿಗಳಿಂದಲೇ ತುಂಬಿ ಹೋಗಿದೆ. ಬೆಂಗಳೂರಿನ ದಕ್ಷಿಣ ತಾಲೂಕಿನಲ್ಲಿರುವ ಹೊಮ್ಮದೇವನಹಳ್ಳಿ ರಸ್ತೆ ಗುಂಡಿಗಳಿಂದಲೇ ಸಂಪೂರ್ಣಗೊಂಡಿದೆ. ಇಂತಹ ರಸ್ತೆಯಲ್ಲಿ ಓಡಾಟ ನಡೆಸುವುದಾ ಅಥವಾ ಏನು ಮಾಡುವುದು ಎಂದು ಜನ ಕಂಗಾಲಾಗಿದ್ದಾರೆ.ಇದನ್ನೂ ಓದಿ:ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದೇ ಬರೆಯಿರಿ: ಅರವಿಂದ ಬೆಲ್ಲದ್..!
ಬನ್ನೇರುಘಟ್ಟ ಮತ್ತು ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ನೀಡುವ ರಸ್ತೆ ಇದಾಗಿದ್ದು ಈ ರಸ್ತೆಯ ಸ್ಥಿತಿಯೇ ಹೀಗಾದರೆ ಮಿಕ್ಕದ ರಸ್ತೆಗಳ ಪರಿಸ್ಥಿತಿ ಏನಾಗಬಹುದು ಎಂಬುದು ಜನರ ಚಿಂತೆಯಾಗಿದೆ. ಎಲ್ಲಾದರೂ ಸಣ್ಣ ಮಳೆಯಾದರೂ ಸಹ ಕೆರೆಯಂತಾಗುವ ಪ್ರಮುಖ ರಸ್ತೆಗಳು ಕೆರೆಗಳಂತಾಗಿ ಮಾರ್ಪಡುತ್ತವೆ ಎಂದು ದಿನಿನಿತ್ಯ ಅಂತಹ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ದೂರಿದ್ದಾರೆ.ಇದನ್ನೂ ಓದಿ: ಗೊಂದಲದ ನಡುವೆ ಜಾತಿ ಗಣತಿ ಸಮೀಕ್ಷೆಗೆ ಕ್ಷಣಗಣನೆ..ಸಕಲ ಸಿದ್ಧತೆ ನಡೆಸುತ್ತಿರುವ ಹಿಂದುಳಿದ ಆಯೋಗ…!!
ಎಷ್ಟು ಭಾರಿ ಸರ್ಕಾರದ ಗಮನಕ್ಕೆ ತಂದರೆ ಯಾವುದೇ ಪ್ರಯೋಜನವಾಗಲಿಲ್ಲ ಇಂತಹ ಗುಂಡಿ ಬಿದ್ದ ರಸ್ತೆಗಳಲ್ಲಿ ಓಡಾಟ ನಡೆಸುವುದು ಅಪಾಯಕಾರಿ ಅಂಥ ತಿಳಿದಿದ್ದರೂ ಸಹ ಓಡಾಟ ನಡೆಸದೇ ಬೇರೆ ದಾರಿಯಿಲ್ಲ. ದಿನಿತ್ಯ ಇಂತಹ ರಸ್ತೆಯಲ್ಲಿ ಓಡಾಟ ನಡೆಸಿ ಸಾಕಾಗಿ ಹೋಗಿದೆ. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಇಂತಹ ರಸ್ತೆಗಳಲ್ಲಿ ಸ್ವಲ್ಪ ಅಜಾಗಾರೂಕತೆಯಿಂದ ವರ್ತಿಸಿದರೆ ಪ್ರಾಣಕ್ಕೇ ಕುತ್ತು ಬರುತ್ತದೆ ಎಂದು ಪ್ರಯಾಣಿಕರು ಅಭಿಪ್ರಾಯ ಪಟ್ಟಿದ್ದಾರೆ.NOBERO Men's Cotton Solid Regular Fit Polo Shirt