Skip to main content
ವಿಡಿಯೋ
1/2
politics

ಗೊಂದಲದ ನಡುವೆ ಜಾತಿ ಗಣತಿ ಸಮೀಕ್ಷೆಗೆ ಕ್ಷಣಗಣನೆ..ಸಕಲ ಸಿದ್ಧತೆ ನಡೆಸುತ್ತಿರುವ ಹಿಂದುಳಿದ ಆಯೋಗ…!!

By Pavitra Ganapathi Baradavalli
ಗೊಂದಲದ ನಡುವೆ ಜಾತಿ ಗಣತಿ ಸಮೀಕ್ಷೆಗೆ ಕ್ಷಣಗಣನೆ..ಸಕಲ ಸಿದ್ಧತೆ ನಡೆಸುತ್ತಿರುವ ಹಿಂದುಳಿದ ಆಯೋಗ…!!

ಗೊಂದಲದ ನಡುವೆ ಜಾತಿ ಗಣತಿ ಸಮೀಕ್ಷೆ ಆರಂಭವಾಗಲಿದೆ. ಬೆಂಗಳೂರು ಹೊರತುಪಡಿಸಿ ರಾಜ್ಯಾದಾದ್ಯಂತ ಜಾಥಿ ಗಣತಿ ಆರಂಭವಾಗಲಿದೆ. ಜಾತಿ ಗಣತಿಗೆ ಹಿಂದುಳಿದ ವರ್ಗದ ಆಯೋಗದಿಂದ ಸಕಲ ಸಿದ್ಧತೆಗಳು ನಡೆಯುತ್ತಲಿವೆ.

ಬೆಂಗಳೂರು: ಗೊಂದಲದ ನಡುವೆ ಜಾತಿ ಗಣತಿ ಸಮೀಕ್ಷೆ ಆರಂಭವಾಗಲಿದೆ. ಬೆಂಗಳೂರು ಹೊರತುಪಡಿಸಿ ರಾಜ್ಯಾದಾದ್ಯಂತ ಜಾಥಿ ಗಣತಿ ಆರಂಭವಾಗಲಿದೆ. ಜಾತಿ ಗಣತಿಗೆ ಹಿಂದುಳಿದ ವರ್ಗದ ಆಯೋಗದಿಂದ ಸಕಲ ಸಿದ್ಧತೆಗಳು ನಡೆಯುತ್ತಲಿವೆ. ಜಾತಿ ಗಣತಿ ಸಮೀಕ್ಷೆಗೆ ಒಂದು ಲಕ್ಷಕ್ಕೂ ಅಧಿಕ ಶಿಕ್ಷಕರನ್ನು ಫೀಲ್ಡ್‌ಗೆ ಇಳಿಸೋಕೆ ಸಕಲ ತಯಾರಿಯನ್ನು ನಡೆಸಿದೆ.ಇದನ್ನೂ ಓದಿ: ಬೆಂಗಳೂರು ವಿಶ್ವವಿದ್ಯಾಲಯದ ಐವರು ಅತಿಥಿ ಉಪನ್ಯಾಸಕರಿಂದ ಲೈಂಗಿಕ ಕಿರು**ಕುಳ - ಎಫ್‌ಐಆರ್‌ ದಾಖಲು


ಜಾತಿ ಗಣತಿ ಸಮೀಕ್ಷೆಗೆಂದು 60 ಪ್ರಶ್ನೆಗಳನ್ನು ಈಗಾಗಲೇ ಹಿಂದುಳಿದ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಆದಾದಮೇಲೆ ಜಾತಿ ಗಣತಿ ಪ್ರಕ್ರಿಯೆಯಲ್ಲಿ ಬ್ರಾಹ್ಮಣ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌ ಬರೆಸೋದಾದರೆ ಇತರೆ ಕಾಲಂನಲ್ಲಿ ಬರೆಸಿ ಅಂತ ಹಿಂದುಳಿದ ಆಯೋಗ ತಿಳಿಸಿದೆ. ಕಾರ್ಯದರ್ಶಿ ದಯಾನಂದ್‌ ಹೇಳಿಕೆಗೆ ಆರ್‌ ಅಶೋಕ್‌ ತಿರುಗೇಟನ್ನು ನೀಡಿದ್ದಾರೆ. ನಾನು ಪಾಕಿಸ್ತಾನದವನು ಅಂದ್ರೆ ಅದನ್ನೂ ಬರೆದುಕೊಳ್ಳುತ್ತೀರಾ ಅಂತ ಪ್ರಶ್ನೆಯನ್ನು ಕೇಳಿದ್ದಾರೆ.
ಇದನ್ನೂ ಓದಿ: ಗಾಜಾ ಮೇಲೆ ಇಸ್ರೇಲ್‌ ದಾಳಿ, ದಾಳಿಯಲ್ಲಿ 91 ಬಲಿ…!!


ಹಿಂದಿನ ಸಮೀಕ್ಷೆಯಲ್ಲಿ ಇದ್ದ ಜಾತಿಗಳನ್ನೇ ಸೇರಿಸಲಾಗಿದೆ. ಜಾತಿಗಳನ್ನು ಡ್ರಾಪ್ಟ್‌ಡೌನ್‌ಗೆ ಹಾಕಿದ್ದು ಕೇವಲ ಜಾತಿ ಸಮೀಕ್ಷೆಗಾಗಿ ಮಾತ್ರ ಎಂದು ಆಯೋಗದ ಅಧ್ಯಕ್ಷ ಮಧುಸೂದನ್‌ ಅವರು ಹೇಳಿಕೆ ನೀಡಿದ್ದಾರೆ. ಈ ಡ್ರಾಪ್ಟ್‌ಡೌನ್‌ ಎನಿದೆ ಅದು ನಮ್ಮ ಜಾತಿ ಗಣತಿದಾರರ ಲೆಕ್ಕಕ್ಕೆ ಮತ್ತು ಅವರ ಅನುಕೂಲಕ್ಕೆ ಮಾತ್ರ ಎಂದು ತಿಳಿಸಿದ್ದಾರೆ. ಮತ್ತು ಜಾತಿದಾರರ ಪಟ್ಟಿಯಿಂದ ಯಾರಿಗೂ ಅನುಕೂಲ ಇಲ್ಲ ಎಂದು ಹೇಳಿದ್ದಾರೆ.
NOBERO Men's Cotton Solid Regular Fit Polo Shirt