ಪಾಕ್ ಬೌಲರ್‌ಗಳ ಬೆಂಡೆತ್ತಿದ ಅಭಿಷೇಕ್ ಮತ್ತು ಶುಭಮನ್ ಗಿಲ್: ಭಾರತಕ್ಕೆ ಭರ್ಜರಿ ಜಯ
ದುಬೈನಲ್ಲಿ ನೆನ್ನೆ ನಡೆದ ಏಷ್ಯಾ ಕಪ್‍ನ ಸೂಪರ್ ಫೋರ್ಸ್ ಹಂತದ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಅಲ್ಲಿ ಎಲ್ಲರೂ ಅಂದುಕೊಂಡಂತೆ ಭಾರತ ತಂಡ ಗೆದ್ದು ಬೀಗಿದೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಉತ್ತಮ ಆಟವಾಡಿ ಒಟ್ಟು 171-5 (20 Ov) ರನ್ಗಳನ್ನು ಕಲೆ ಹಾಕಿತು. ಆದರೆ 10 ಓವರ್ ತನಕ ಸರಾಸರಿ ಹತ್ತರಷ್ಟು ರನ್ ರೇಟ್ ನಲ್ಲಿ ಆಡುತ್ತಿದ್ದ ಪಾಕ್ನ ಬ್ಯಾಟ್ಸ್ಮನ್‌ಗಳು ನಂತರ ಯಾಕೋ ಸೈಲೆಂಟ್ ಆದರು 13ನೇ ಓವರ್ ನಲ್ಲಿಯೂ ಸಹ ಕೇವಲ 110 ರನ್ ಗಳಿಸಿ ಆಟ ಆಡುತ್ತಿದ್ದರು.
ಹೊಡಿಬಡಿ ಆಟವಾದ ಟಿ-20 ಪಂದ್ಯದಲ್ಲಿ ರನ್ ಗಳಿಸುವ ಆಟ ಆಡಲೇ ಇಲ್ಲ ಪಾಕ್‌ನ ಆಟಗಾರರು. ಒಟ್ಟಿನಲ್ಲಿ 20 ಓವರ್‌ಗಳಲ್ಲಿ 171 ರನ್ ಗಳಿಸಿ ಭಾರತಕ್ಕೆ 172 ರನ್‌ಗಳ ಗುರಿ ನೀಡಿದರು. ಗುರಿ ಬೆನ್ನತ್ತಿದ ಭಾರತ ಸ್ಪಷ್ಟವಾಗಿ ದಿಟ್ಟವಾದ ಆಟವಾಡಿದ ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮ ಬಿರುಸಾದ ಆಟವಾಡಿದರು. ಮೊದಲ ಬಾಲ್‌ನಲ್ಲೆ ಸಿಕ್ಸ್ ಮೂಲಕ ಇನ್ನಿಂಗ್ಸ್ ಶುರು ಮಾಡಿದ ಅಭಿಷೇಕ್ 74 ರನ್ ಗಳಿಸಿದರು. ಇವರ ಜೊತೆ ಗಿಲ್ ಕೂಡ ಉತ್ತಮ ಸಾಥ್ ನೀಡಿ 47 ರನ್ ಗಳಿಸಿದರು.ಇದನ್ನು ಓದಿ: ಸರಿ ಇರುವ ತೀರ್ಪುಗಳನ್ನೂ ಪ್ರಶ್ನಿಸುವ ಸರ್ಕಾರಿ ಇಲಾಖೆಗಳ ರೂಢಿ ತಪ್ಪಬೇಕು: ಕಾನೂನು ಸಚಿವ ಮೇಘವಾಲ್ ಹೇಳಿಕೆ
- Abhishek Sharma- 74ರನ್,39 ಬಾಲ್, 6(four), 5(six)
- Shubman Gill- 47ರನ್,28 ಬಾಲ್, 8(four), 0(six)
-Tilak Varma- 30 ರನ್,19 ಬಾಲ್, 2(four), 2(six)
ನಂತರ ನಾಯಕ ಸೂರ್ಯಕುಮಾರ್ 0 ರನ್‌ಗೆ ಔಟ್ ಆದರೆ ತಿಲಕ್ ವರ್ಮ ಸ್ಪೋಟಕ 30 ರನ್ ಗಳಿಸಿ ಅಜೇಯವಾಗುಳಿದರು. ಸಂಜು 13 ರನ್ ಗಳಿಸಿ ಔಟ್ ಆದರೆ, ಹಾರ್ದಿಕ್ ಪಾಂಡ್ಯ 7 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ಭಾರತ 18.5 ಓವರ್‌ಗಳಲ್ಲಿ 174 ರನ್ ಗಳಿಸಿ ಜಯ ಗಳಿಸಿತು.Handcuffs Backpacks Vegan Leather Casual Backpack Multipurpose Travelling Bags Daypacks For Men And Women
ಫಾಲ್ ಆಫ್ ವಿಕೆಟ್:
IND: 105/1 (S. Gill, 9.5 ov) · 106/2 (S. Yadav, 10.3 ov) · 123/3 (A. Sharma, 12.2 ov) · 148/4 (S. Samson, 16.4 ov)
PAK 21/1 (F. Zaman, 2.3 ov) · 93/2 (S. Ayub, 10.3 ov) · 110/3 (H. Talat, 13.1 ov) · 115/4 (S. Farhan, 14.1 ov) · 149/5 (M. Nawaz, 18.3 over)
ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಒಟ್ಟಿನಲ್ಲಿ ಪಾಕಿಸ್ತಾನ ಒಂದು ಸವಾಲಿನ ಮೊತ್ತವನ್ನೇ ಕಲೆಹಾಕಿತ್ತಾದರೂ, ಭಾರತ ನಿರಾಯಸವಾಗಿ ಚೇಸ್ ಮಾಡಿತು. ನಾಟಕೀಯ ಬೆಳವಣಿಗೆಗಳು ಸಾಕಷ್ಟು ಇದ್ದವು ಪಾಕ್ ನ ಆಟಗಾರರು ಸೋಲುವುದು ಖಚಿತವಾಗುತ್ತಿದ್ದಂತೆ ತಮ್ಮ ದುರ್ವರ್ತನೆಯನ್ನು ತೋರುತ್ತ ಆಟದ ಮಧ್ಯೆ ಕೆಲಸಕ್ಕೆ ಬಾರದ ಕೆಲಸಗಳನ್ನು ಮಾಡಿ ಅವರ ಮರ್ಯಾದೆಯನ್ನು ಅವರೇ ಕಳೆದುಕೊಂಡರು.