Skip to main content
ವಿಡಿಯೋ
1/3
metro

ಬೆಂಗಳೂರಿಗರೇ ಅಲರ್ಟ್..ಇಂದು ಮತ್ತು ನಾಳೆ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ! ಎಲ್ಲೆಲ್ಲಿ ಎಂದು ಇಲ್ಲಿ ತಿಳಿಯಿರಿ

By Gireesh Vasishta
ಬೆಂಗಳೂರಿಗರೇ ಅಲರ್ಟ್..ಇಂದು ಮತ್ತು ನಾಳೆ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ! ಎಲ್ಲೆಲ್ಲಿ ಎಂದು ಇಲ್ಲಿ ತಿಳಿಯಿರಿ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ನಗರದಲ್ಲಿ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಕೈಗೆತ್ತಿಕೊಂಡಿರುವ ತುರ್ತು ನಿರ್ವಹಣಾ ಕಾರ್ಯಗಳಿಂದಾಗಿ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸೆಪ್ಟೆಂಬರ್ 22 ಮತ್ತು 23ರಂದು ಬೆಂಗಳೂರು ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಈ ವಿದ್ಯುತ್ ಕಡಿತ ಜಾರಿಯಲ್ಲಿರಲಿದೆ ಎಂದು ಬೆಸ್ಕಾಂ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

 

ಇಂದು ಎಲ್ಲೆಲ್ಲಿ ವಿದ್ಯುತ್ ಕಡಿತ?

ಇಂದು (ಸೆಪ್ಟೆಂಬರ್ 22) ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಾಮಧಾರಿ, ಹೆಗಡೆ ನಗರ, ಉಗ್ರಹಳ್ಳಿ, ಮಾಯಗಾನಹಳ್ಳಿ, ಎಂ.ಬಿ. ಲೇಔಟ್, ಬಿ.ಸಿ. ಲೇಔಟ್, ಕಾಂಚನ ಲೇಔಟ್, ಪಾದರಹಳ್ಳಿ, ಚನ್ನಸಂದ್ರ, ಮದನಪುರ, ಯಶವಂತಪುರ, ಫ್ರೇಜರ್ ಟೌನ್, ಹಲಸೂರು, ಮಲ್ಲೇಶ್ವರಂ, ಗಾಂಧಿನಗರ, ಅತ್ತಿಗುಪ್ಪೆ, ಚಾಮರಾಜಪೇಟೆ, ಲಿಂಗರಾಜಪುರ, ಕೆಂಪಾಪುರ, ವಿನಾಯಕ ನಗರದಂತಹ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

 

ಇದಲ್ಲದೆ, ಟ್ರಿನಿಟಿ, ಬೈಯಪ್ಪನಹಳ್ಳಿ, ಶಾಂತಿನಗರ, ಜಯಮಹಲ್, ಮಾರತ್ತಹಳ್ಳಿ, ಕೋಗಿಲು, ಬಿಡಿಎ ಲೇಔಟ್, ರಾಜನಗರ, ಬಾಗಲೂರು, ರಾಜನಗರ ಬಡಾವಣೆ, ಬಾಗಲೂರು ಲೇಔಟ್, ಅರಮನೆ ನಗರ, ದೊಡ್ಡಕಲಸಂದ್ರ, ಹನುಮಂತಪುರ, ಅಟ್ಟೂರು, ಜಗನಾಥಪುರ, ನಿವಾರ, ಲೆಬ್ಬೆಟ್, ಅಗ್ನಿನಗರ, ಬಿ.ವಿ.ಗುಡಿಪಾಲ, ಅಂಬೇಡ್ಕರ್ ನಗರ, ಬಿ.ಬಿ.ಪಾಳ್ಯ, ಹೊಸಹಳ್ಳಿ, ಗುಬ್ಬಿ ಗೇಟ್, ರಿಂಗ್ ರಸ್ತೆ, ಹಾರೋಹಳ್ಳಿ, ಹೊನ್ನೇಮನಹಳ್ಳಿ, ಹೆಬ್ಬಾಳ, ಕುಪ್ಪೂರು, ಡಿ.ಎಂ. ಪಾಳ್ಯ, ಪಿಎನ್ ಆರ್ ಪಾಳ್ಯ, ನರಸಾಪುರ, ಕೆ.ಜಿ. ಪಾಳ್ಯ, ಭಜಂತ್ರಿ ಪಾಳ್ಯ ಪ್ರದೇಶಗಳು ವಿದ್ಯುತ್ ಕಡಿತ ಅನುಭವಿಸಲಿವೆ.ಇದನ್ನು ಓದಿ: ಏಷ್ಯಾ ಕಪ್‍ 2025: ಭಾರತ-ಪಾಕ್‌ ಪಂದ್ಯದಲ್ಲಿ ಆಫ್ ಸೆಂಚುರಿ ನಂತರ ಗ*ನ್‌ ಸೆಲಬ್ರೆಷನ್‌ ಮಾಡಿದ ಫರ್ಹಾನ್: ಇವನಿಗೂ ಅವರಿಗೂ ಏನೂ ವ್ಯತ್ಯಾಸ ಇಲ್ಲವೆ?

 

ಸೆಪ್ಟೆಂಬರ್ 23ರಂದು ಯಲ್ಲಾರ್ ಬಂಡೆ 66/11 ಕೆವಿ ಉಪಕೇಂದ್ರದಲ್ಲಿ ನಡೆಯುವ ತುರ್ತು ನಿರ್ವಹಣಾ ಕಾಮಗಾರಿಯಿಂದಾಗಿ ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಕುರಿತು ಬೆಸ್ಕಾಂ ಟ್ವೀಟ್ ಮೂಲಕ ಮಾಹಿತಿ ನೀಡಿದೆ.Safari Flip 32L Casual Printed Backpack, 2 Compartments, Bottle Holder, Front Pocket, School Bag for Boys and Girls, College Bag, Office Bag, Travel Bag for Men and Women

 

ನಾಳೆ ಎಲ್ಲೆಲ್ಲಿ ವಿದ್ಯುತ್ ಕಡಿತ:

ಮಂಗಳವಾರ ವಿದ್ಯುತ್ ಕಡಿತವಾಗಲಿರುವ ಪ್ರದೇಶಗಳಲ್ಲಿ ಕಾವಲ್ ಬೈರಸಂದ್ರ, ಎಲ್.ಆರ್.ಬಂಡೆ ಮುಖ್ಯರಸ್ತೆ, ಗಾಂಧಿನಗರ, ಚಿನ್ನಣ್ಣ ಲೇಔಟ್, ಅಂಬೇಡ್ಕರ್ ಲೇಔಟ್, ಅನ್ವರ್ ಲೇಔಟ್, ಕಾವೇರಿ ನಗರ, ಅಂಬೇಡ್ಕರ್ ಮೆಡಿಕಲ್ ಕಾಲೇಜು, ಸುಲ್ತಾನ್ ಪಾಳ್ಯ, ರಂಕಾನಗರ, ಕನಕನಗರ, ಕೆಎಚ್‌ಬಿ ಮುಖ್ಯರಸ್ತೆ, ವಿ. ನಾಗೇನಹಳ್ಳಿ, ಭುವನೇಶ್ವರಿ ನಗರ, ಕುಶಾಲ್‌ನಗರ, ಪೆರಿಯಾ‌ರ್ ನಗರ, ಮೋದಿ ಉದ್ಯಾನ, ಮೋದಿ ರಸ್ತೆ, ಮುನಿವೀರಪ್ಪ ಲೇಔಟ್, ದೊಡ್ಡಣ್ಣ ನಗರ, ಉಪ್ಪಿನ ಮಂಡಿ, ಸಕ್ಕರೆ ಮಂಡಿ, ಮುನೇಶ್ವರ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸೇರಿವೆ.