ಬೆಂಗಳೂರು ಉಪನಗರ ಯೋಜನೆ ಕಾರಿಡಾರ್ ಎರಡಕ್ಕೆ ಸಂಬಂಧಿಸಿದಂತೆ ಅಲೈನ್ಮೆಂಟ್ ಅವಶ್ಯಕತೆ ಇರುವ ಬೆಂಗಳೂರು ಉತ್ತರ ತಾಲೂಕು, ಮ್ಯಾಕಲ ಚನ್ನೇನಹಳ್ಳಿ ಗ್ರಾಮ ಹಾಗೂ ಯಲಹಂಕ ತಾಲೂಕು ಪೀಣ್ಯ ಪ್ಲಾಂಟೇಶನ್ ಗ್ರಾಮದ ಗಡಿ ಮಧ್ಯದಲ್ಲಿ ಸುಮಾರು 20 ಗುಂಟೆ ಜಮೀನಿನ ಸರಹದ್ದಿನಲ್ಲಿ ರೈಲ್ವೆ ರಸ್ತೆಗೆ ಸೇರಿದ ಸುಮಾರು 500 ಮೀಟರ್ ಖರಾಬು ಜಮೀನು ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಇದರ ಮೌಲ್ಯವು ಅಂದಾಜು 40 ಕೋಟಿ ಎಂದು ಅಂದಾಜಿಸಲಾಗಿದೆ.ಇದನ್ನು ಓದಿ: 3 ವರ್ಷದಲ್ಲಿ 41,000 ಮಕ್ಕಳಲ್ಲಿ ಜನ್ಮಜಾತ ಹೃದ್ರೋಗ: ಆತಂಕ ತಂದಿಟ್ಟ ವರದಿ!
ಈ ಸದರಿ ಖರಾಬು ಜಮೀನಿಗೆ ಹೊಂದಿಕೊಂಡಿರುವ ಜಾಗವನ್ನು ಬಾಗಮನೆ ಡೆವಲಪರ್ಸ್ ನವರು ಒತ್ತುವರಿ ಮಾಡಿದ್ದು ಸ್ಥಳ ಪರಿಶೀಲನೆ ಸಮಯದಲ್ಲಿ ಸದರಿ ಜಾಗವು ರೈಲ್ವೆ ಸರಹದ್ದಿನ ರಸ್ತೆಗೆ ಸೇರಿದ ಜಮೀನಾಗಿರುವುದೆಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಬೆಂಗಳೂರು ಉತ್ತರ ತಾಲೂಕು, ಹಾಗೂ ಯಲಹಂಕ ತಾಲೂಕು ಅವರು ದೃಢೀಕರಿಸಿರುತ್ತಾರೆ. ಈ ಸಮಯದಲ್ಲಿ ಬಾಗಮನೆ ಡೆವಲಪರ್ಸ್ ಪ್ರತಿನಿಧಿಗಳು ಸಹ ಹಾಜರಿದ್ದು ಅವರಿಗೆ ಒತ್ತುವರಿ ಬಗ್ಗೆ ತಿಳುವಳಿಕೆ ನೀಡಿ ಒತ್ತುವರಿಗೊಂಡ ಜಮೀನಿಗೆ ಬೌಂಡರಿ ಕಲ್ಲುಗಳನ್ನು ಅಳವಡಿಸಲಾಗಿದೆ.PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+
ಬೆಂಗಳೂರಿನ ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಮುಖಾಂತರ ದಿನಾಂಕ 20.09.2025 ರಂದು ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ಸಮಯದಲ್ಲಿ ವಿಶೇಷ ಜಿಲ್ಲಾಧಿಕಾರಿ ಕೆ-ರೈಡ್ ತಹಶಿಲ್ದಾರ್, ಯೆಲಹಂಕ ತಾಲೂಕು ಮತ್ತು ಬೆಂಗಳೂರು ಉತ್ತರ ತಾಲೂಕು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಬೆಂಗಳೂರು ಉತ್ತರ ತಾಲೂಕು ಹಾಗೂ ಯಲಹಂಕ ತಾಲೂಕು ಪ್ರಧಾನ ವ್ಯವಸ್ಥಾಪಕರು, ಕಾರಿಡಾರ್-2 ರೈಲ್ವೆ ಇಲಾಖೆಯ ಸಿಬ್ಬಂದಿ ಹಾಗೂ ಜಾಲಹಳ್ಳಿ ಪೊಲೀಸ್ ಸಿಬ್ಬಂದಿ ಹಾಜರಿದ್ದರು.