Skip to main content
ವಿಡಿಯೋ
1/2
crime

ಪಾಕ್ ಫೈಟರ್ ಜೆಟ್‌ಗಳಿಂದ 8 ಬಾಂಬ್‌ಗಳು: ಮ್ಯಾಟ್ರೆ ದಾರಾ ಗ್ರಾಮದಲ್ಲಿ 30 ಮಂದಿ ಸಾ*ವು, ಸ್ವಂತ ದೇಶದ ಜನರ ಮೇಲೆ ಭಯಂಕರ ದಾಳಿ!

By Vinutha U
ಪಾಕ್ ಫೈಟರ್ ಜೆಟ್‌ಗಳಿಂದ 8 ಬಾಂಬ್‌ಗಳು: ಮ್ಯಾಟ್ರೆ ದಾರಾ ಗ್ರಾಮದಲ್ಲಿ 30 ಮಂದಿ ಸಾ*ವು, ಸ್ವಂತ ದೇಶದ ಜನರ ಮೇಲೆ ಭಯಂಕರ ದಾಳಿ!

ವರದಿಗಳ ಪ್ರಕಾರ, ಪಶ್ತೂನ್‌ ಬಹುಸಂಖ್ಯಾತರಿರುವ ಮಾಟ್ರೆ ದಾರಾ ಗ್ರಾಮದ ಮೇಲೆ ಬೆಳಗಿನ 2 ಗಂಟೆ ಸುಮಾರಿಗೆ JF-17 ಯುದ್ಧ ವಿಮಾನಗಳಿಂದ LS-6 ಬಾಂಬ್‌ಗಳನ್ನು ಎಸೆಯಲಾಗಿದ್ದು, ಸ್ಫೋಟದಿಂದ ಗ್ರಾಮದ ಹೆಚ್ಚಿನ ಭಾಗ ನಾಶವಾಗಿದೆ.

ಕರಾಚಿ (ಸೆ.22): ಪಾಕಿಸ್ತಾನ ವಾಯುಪಡೆಯು ಸೋಮವಾರ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಗ್ರಾಮದ ಮೇಲೆ ಎಂಟು ಬಾಂಬ್‌ಗಳನ್ನು ಎಸೆದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಪಶ್ತೂನ್‌ ಬಹುಸಂಖ್ಯಾತರಿರುವ ಮಾಟ್ರೆ ದಾರಾ ಗ್ರಾಮದ ಮೇಲೆ ಬೆಳಗಿನ 2 ಗಂಟೆ ಸುಮಾರಿಗೆ JF-17 ಯುದ್ಧ ವಿಮಾನಗಳಿಂದ LS-6 ಬಾಂಬ್‌ಗಳನ್ನು ಎಸೆಯಲಾಗಿದ್ದು, ಸ್ಫೋಟದಿಂದ ಗ್ರಾಮದ ಹೆಚ್ಚಿನ ಭಾಗ ನಾಶವಾಗಿದೆ.

ಹಲವರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ, ಆದರೆ ಇದಕ್ಕೆ ದೃಢೀಕರಣ ಕಾಯಲಾಗುತ್ತಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ವಾಯುಪಡೆಯು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಅಡಗುತಾಣಗಳನ್ನು ಗುರಿಯಾಗಿಸಿತ್ತು, ಆದರೆ ದಾಳಿಯಲ್ಲಿ ಮೃತಪಟ್ಟವರೆಲ್ಲ ನಾಗರಿಕರಾಗಿದ್ದಾರೆ. Zeneme Traditional Brass 18 K Gold Plated Wedding Jewellery Bahubali Inspired Long Chain Jhumki Earrings for Women and Girl

ಭಯೋತ್ಪಾದಕ ಚಟುವಟಿಕೆಯಲ್ಲಿ ಗಣನೀಯ ಏರಿಕೆ, ಇತ್ತೀಚಿನ ದಿನಗಳಲ್ಲಿ, ಅಫ್ಘಾನಿಸ್ತಾನ ಗಡಿಯಲ್ಲಿರುವ ಖೈಬರ್ ಪಖ್ತುನ್ಖ್ವಾ ಪರ್ವತ ಪ್ರಾಂತ್ಯದಲ್ಲಿ ಭಯೋತ್ಪಾದಕರ ವಿರುದ್ಧ ಹಲವು ಮಿಲಿಟರಿ ಕಾರ್ಯಾಚರಣೆಗಳು ನಡೆದಿವೆ. ಭಾನುವಾರ, ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿ ಏಳು ಟಿಟಿಪಿ ಭಯೋತ್ಪಾದಕರು ಮೃತಪಟ್ಟಿದ್ದಾರೆ ಎಂದು ಸೇನೆ ಘೋಷಿಸಿತು. ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ ಹಾಗೂ ಹಣ ವರ್ಗಾವಣೆ ಪ್ರಕರಣ ಹಿನ್ನೆಲೆ ಮಾಜಿ ಕ್ರಿಕೆಟಿಗ ರಾಬಿನ್‌ ಉತ್ತಪ್ಪ ಇಡಿ ತನಿಖೆಗೆ ಹಾಜರ್‌…!!!

ಮೃತಪಟ್ಟ ಏಳು ಮಂದಿಯಲ್ಲಿ ಮೂವರು ಅಫ್ಘಾನ್ ಪ್ರಜೆಗಳು ಮತ್ತು ಇಬ್ಬರು ಆತ್ಮಾಹುತಿ ಬಾಂಬರ್‌ಗಳು ಎಂದು ಸೇನೆಯ ಮಾಧ್ಯಮ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ತಿಳಿಸಿದೆ. ಸೆಪ್ಟೆಂಬರ್ 13-14ರಂದು, ಖೈಬರ್ ಪಖ್ತುನ್ಖ್ವಾದಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಕನಿಷ್ಠ 31 ಟಿಟಿಪಿ ಭಯೋತ್ಪಾದಕರು ಸಾವನ್ನಪ್ಪಿದ್ದರು. ಪಾಕಿಸ್ತಾನದಲ್ಲಿ ಇತ್ತೀಚೆಗೆ, ವಿಶೇಷವಾಗಿ ಅಫ್ಘಾನಿಸ್ತಾನ ಗಡಿಯ ಪ್ರಾಂತ್ಯಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳು ಗಣನೀಯವಾಗಿ ಏರಿಕೆಯಾಗಿವೆ. ಕಳೆದ ವಾರ ಪ್ರಧಾನಿ ಶೆಹಬಾಜ್ ಷರೀಫ್, ಅಫ್ಘಾನಿಸ್ತಾನವು ಭಯೋತ್ಪಾದಕರ ಪರವಾಗಿ ನಿಲ್ಲಬೇಕೆ ಅಥವಾ ಪಾಕಿಸ್ತಾನದೊಂದಿಗೆ ನಿಲ್ಲಬೇಕೆ ಎಂದು ಪ್ರಶ್ನಿಸಿದ್ದರು.