Skip to main content
ವಿಡಿಯೋ
1/2
crime

ಬೆಂಗಳೂರಿನಲ್ಲಿ ಹಾಡಹಗಲಲ್ಲೇ ಮಹಿಳೆಗೆ ಚಾ**ಕುವಿನಿಂದ ಇರಿದು ಆರೋಪಿ ಪರಾರಿ.!

By Shravanthi R
ಬೆಂಗಳೂರಿನಲ್ಲಿ ಹಾಡಹಗಲಲ್ಲೇ ಮಹಿಳೆಗೆ ಚಾ**ಕುವಿನಿಂದ ಇರಿದು ಆರೋಪಿ ಪರಾರಿ.!

ಬೆಂಗಳೂರಿನ ಸುಂಕದಕಟ್ಟೆ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ರೇಖಾ ಎಂಬ ಮಹಿಳೆ ಮೇಲೆ ಚಾಕುವಿನಿಂದ ಇರಿದ ಘಟನೆಯು ನಗರದ ಜನರಲ್ಲಿ ಆತಂಕ ಮೂಡಿಸಿದೆ. ಆಕೆಯ ಪರಿಚಿತನಾದ ಲೋಕೇಶ್‌ ಎಂಬಾತ, ಮಾತಿನ ಚಕಮಕಿ ಮಧ್ಯೆ ಆಕ್ರೋಶದಿಂದ ಚಾಕು ಇರಿದು ಪರಾರಿಯಾಗಿದ್ದಾನೆ. ಗಾಯಗೊಂಡ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಪೋಲಿಸರು ಆರೋಪಿಯನ್ನು ಹುಡುಕುವಲ್ಲಿ ತೊಡಗಿದ್ದಾರೆ.

ಬೆಂಗಳೂರು: ನಗರದ ಸುಂಕದಕಟ್ಟೆ ಬಸ್ ನಿಲ್ದಾಣದ ಬಳಿ ಇಂದು ಬೆಳಗ್ಗೆ ಚಾಕು ಹಿಡಿದು ಮಹಿಳೆ ಮೇಲೆ ಕೊಲೆಯತ್ನ ನಡೆಸಿರುವ ಘಟನೆ ವರದಿಯಾಗಿದೆ. ರೇಖಾ ಎಂಬ ಮಹಿಳೆಗೆ ಆಕೆಯ ಪರಿಚಿತ ಲೋಕೇಶ್ ಎಂಬಾತನು ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಬಸ್‌ ನಿಲ್ದಾಣದಲ್ಲೇ ಗಲಾಟೆ ಶುರುವಿಟ್ಟುಕೊಂಡ ನಂತರ ಪರಸ್ಪರ ಹೊಡೆದಾಡಿಕೊಂಡಿದ್ದರು. ಆನಂತರ ಜಗಳ ತಾರಕಕ್ಕೇರಿ ಚಾಕು ಪ್ರಹಾರ ನಡೆಸಿರುವ ಸುದ್ದಿ ವರದಿಯಾಗಿದೆ.

ಇಂದು ಬೆಳಗ್ಗೆ 11:35 ರ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದೆ. ರೇಖಾ ಮತ್ತು ಲೋಕೇಶ್ ಇಬ್ಬರೂ ಪರಿಚಿತರಾಗಿದ್ದು, ಬಸ್ ನಿಲ್ದಾಣದ ಬಳಿ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಆಕ್ರೋಶದಿಂದ, ಲೋಕೇಶ್ ತನ್ನ ಬಳಿಯಿದ್ದ ಚಾಕುವಿನಿಂದ ರೇಖಾಗೆ ಇರಿದಿದ್ದಾನೆ. ಸುತ್ತಲೂ ಜನರಿದ್ದ ಕಾರಣ, ಸದರ ನೋಡಿಕೊಂಡು ಆರೋಪಿಯು ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ. Essentials Of Hindutva Hardcover – 1 January 2023

ಘಟನೆಯ ಬಳಿಕ ತೀವ್ರವಾಗಿ ಗಾಯಗೊಂಡಿದ್ದ ರೇಖಾರನ್ನು ಸ್ಥಳೀಯರು ಮತ್ತು ಪೊಲೀಸರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣದ ಮಾಹಿತಿ ಪಡೆದುಕೊಂಡ ಕಾಮಾಕ್ಷೀಪಾಳ್ಯದ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಬಂಧಿಸುವಲ್ಲಿ ತನಿಖೆ ನಡೆಸಿ ಪೋಲಿಸರು ಆರೋಪಿಯ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅಹಮದಾಬಾದ್ ಏರ್ ಇಂಡಿಯಾ ಅಪಘಾತ: ಸ್ವತಂತ್ರ ತನಿಖೆಗೆ ಸುಪ್ರೀಂ ಕೋರ್ಟ್ ನೋಟಿಸ್!