ಲೋಹಿತಾಶ್ವನಿಗೆ ರೇಖಾ ಮೇಲೆ ಅನುಮಾನ: ಕೊನೆಗೆ ಕೊಲೆಯಲ್ಲಿ ಅಂತ್ಯ: ಅನುಮಾನಕ್ಕೆ ಮಹಿಳೆ ಬಲಿ!
ಬೆಂಗಳೂರು: ಇತ್ತೀಚೆಗೆ ಸಾಕಷ್ಟು ಸಂಬಂಧಗಳಲ್ಲಿ ಬಿರುಕು ಮೂಡುತ್ತಿದ್ದು ಕೊನೆಯಲ್ಲಿ ಕೊಲೆಯಲ್ಲಿ ಅಂತ್ಯ ಕಾಣುತ್ತಿದೆ. ಗಂಡ ಹೆಂಡತಿ ಮಧ್ಯೆ ಮೂರನೇ ವ್ಯಕ್ತಿಯ ಆಗಮನವಾಗಿ ಅಥವಾ ಪ್ರೀತಿಸುವ ಜೋಡಿಗಳ ಮಧ್ಯೆ ಮೂರನೇ ವ್ಯಕ್ತಿಯ ಆಗಮನದಿಂದ ಇಂತಹ ಕೃತ್ಯಗಳು ನಡೆಯುತ್ತಿವೆ ಇಲ್ಲಿಯೂ ಇದೆ ರೀತಿಯ ಕೃತ್ಯವೊಂದು ಜರುಗಿದೆ.PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+
ರೇಖಾಗೆ ಮದುವೆಯಾಗಿ ಎರಡು ಮಕ್ಕಳಿದ್ದರು, ಅದರೆ ಮೊದಲ ಪತಿಯಿಂದ ಬೇರಾಗಿದ್ದ ರೇಖಾ ಅವನಿಂದ ಡಿವೋರ್ಸ್ ಪಡೆದಿದ್ದರು. ಕೆಲವು ದಿನಗಳ ಹಿಂದೆ ಶಿರಾದಿಂದ ಬೆಂಗಳೂರಿಗೆ ಬಂದಿದ್ದ ರೇಖಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಲೋಹಿತಾಶ್ವ ಎಂಬುವನ ಪರಿಚಯವಾಗುತ್ತದೆ. ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬರುತ್ತಾರೆ.ಇದನ್ನು ಓದಿ: ಬೆಂಗಳೂರಿನಲ್ಲಿ ಆಧಿಕಾರಿಗಳ ವೇಷದಲ್ಲಿ ಬಂದ ಖದೀಮರು: ಮನೆಗೆ ನುಗ್ಗಿ 1.5 ಕೋಟಿ ಖಲಾಸ್ : ನೀವು ಹುಷಾರು!
ನಂತರ ರೇಖಾ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಲೋಹಿತಾಶ್ವನಿಗೂ ಡ್ರೈವರ್ ಕೆಲಸವನ್ನ ರೇಖಾ ಕೊಡಿಸುತ್ತಾರೆ. ನಂತರ ಇಬ್ಬರೂ ದೇವಾಲಯದಲ್ಲಿ ಮದುವೆಯಾಗುತ್ತಾರೆ, ದಿನ ಕಳೆದಂತೆ ಲೋಹಿತಾಶ್ವನಿಗೆ ರೇಖಾ ಮೇಲೆ ಅನುಮಾನ ಉಂಟಾಗುತ್ತದೆ. ಈ ಅನುಮಾನ ತೀವ್ರ ಜಗಳದ ನಂತರ ರೇಖಾ ಅವರ ಸಾವಿನಲ್ಲಿ ಅಂತ್ಯವಾಗಿದೆ.
ರೇಖಾ ತನ್ನ 12 ವರ್ಷದ ಮಗಳ ಜೊತೆಗೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಲೋಹಿತಾಶ್ವ ಅಟ್ಯಾಕ್ ಮಾಡುತ್ತಾನೆ. ಮೊದಲು ಎರಡು ಬಾರಿ ನಂತರ 7 ಬಾರಿ ಆಯಧದಿಂದ ದೇಹಕ್ಕೆ ಇರಿದು ಲೋಹಿತಾಶ್ವ ಅಲ್ಲಿಂದ ಎಸ್ಕೇಪ್ ಆಗುತ್ತಾನೆ. ಈ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರು ಆರೋಪಿ ಲೋಹಿತಾಶ್ವನನ್ನು ಬಂಧಿಸಲು ಬಲೆಬೀಸಿದ್ದಾರೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ರೇಖಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.