ಬೆಂಗಳೂರು ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಭರದಿಂದ ಸಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ತಿಳಿಸಿದರು. ಪ್ರತಿದಿನ ಸುಮಾರು 1000 ಗುಂಡಿಗಳನ್ನು ಜಿಬಿಎ ವತಿಯಿಂದ ಮುಚ್ಚಲಾಗುತ್ತಿದೆ ಎಂದು ಐಟಿ ಕಂಪನಿಗಳು ತಿಳಿದುಕೊಳ್ಳಬೇಕು ಎಂದು ಅವರು ನುಡಿದರು.ಈಗಾಗಲೇ ರಸ್ತೆಯಲ್ಲಿರುವ ಏಳು ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಲಾಗಿದೆ ಇನ್ನೂ ಬಾಕಿ ಉಳಿದಿರುವುದು ಐದು ಸಾವಿರ ಅಷ್ಟೇ: ಡಿ.ಕೆ ಶಿವಕುಮಾರ್..!!
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ತಾವು ದೆಹಲಿಗೆ ಭೇಟಿ ನೀಡಿ ಎಲ್ಲವನ್ನೂ ಗಮನಿಸಿರುವುದಾಗಿ ಹೇಳಿದರು. "ನಂತರ ನೀವೆಲ್ಲರೂ ನಿಮ್ಮ ವರದಿಗಾರರನ್ನು ದೆಹಲಿಗೆ ಕಳುಹಿಸಿ, ಅಲ್ಲಿ ಎಷ್ಟು ರಸ್ತೆ ಗುಂಡಿಗಳಿವೆ, ಪ್ರಧಾನ ಮಂತ್ರಿಗಳ ನಿವಾಸದ ಮುಂದಿನ ರಸ್ತೆಯಲ್ಲಿ ಎಷ್ಟಿವೆ ಎಂಬುದನ್ನು ಪರಿಶೀಲಿಸಬೇಕು," ಎಂದು ಅವರು ಸವಾಲೆಸೆದರು.kaevion Sada Saubhagyawati Bridal Customized Dupatta | Name Bride Chunni & Dupattas | Dulhan Name Wala dupatta for Marriage, Indian, Punjabi, Sagan Ceremony, Mangni, Teej, Karwachauth
ರಸ್ತೆ ಗುಂಡಿಗಳ ಸಮಸ್ಯೆ ಎಲ್ಲಾ ಕ್ಷೇತ್ರಗಳಲ್ಲೂ ಇದೆ ಮತ್ತು ಇದು ಇಡೀ ದೇಶದಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ ಎಂದು ಅವರು ಒತ್ತಿ ಹೇಳಿದರು. ಹಾಗಂತ ನಾವು ನಮ್ಮ ಕೆಲಸವನ್ನು ನಿಲ್ಲಿಸುವುದಿಲ್ಲ. ಇದನ್ನೇ ದೊಡ್ಡ ವಿಷಯವನ್ನಾಗಿ ಮಾಡಿ ಮಾಧ್ಯಮಗಳಲ್ಲಿ ಬಿಂಬಿಸುವ ಅಗತ್ಯವಿಲ್ಲ. ಇದು ಕೇವಲ ಕರ್ನಾಟಕ ರಾಜ್ಯದ ಸಮಸ್ಯೆ ಮಾತ್ರವಲ್ಲ, ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.ನಿನ್ನೆ ನಡೆದ ಒಕ್ಕಲಿಗರ ಸಭೆಯ ಕುರಿತು ನಾನು ಏನೂ ಪ್ರತಿಕ್ರಿಯೆ ನೀಡುವುದಿಲ್ಲ: ಡಿಕೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಸ್ತೆಗಳನ್ನು ಸರಿಯಾಗಿ ನಿರ್ಮಿಸಿದ್ದರೆ, ಈಗ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ ಎಂದು ಅವರು ಆರೋಪಿಸಿದರು. ಚುನಾವಣೆ ಹತ್ತಿರ ಬರುತ್ತಿರುವ ಕಾರಣ ಬಿಜೆಪಿ ಈ ವಿಷಯವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸುತ್ತಿದೆ ಎಂದು ಡಿಸಿಎಂ ಟೀಕಿಸಿದರು.ಒಕ್ಕಲಿಗ ಸಮಾಜದ ನಿರ್ಣಯಕ್ಕೆ ಡಿಕೆಶಿ ಪ್ರತಿಕ್ರಿಯೆ ಇಲ್ಲ, ದೆಹಲಿಗೆ ಭೇಟಿ..!