Skip to main content
ವಿಡಿಯೋ
1/2
crime

ಮಧ್ಯಪಾನ ಮಾಡುವಾಗ ಜಗಳ: ಗುಂಪುಗಳ ನಡುವೆ ಮಾರಾಮಾರಿ: ಬೊಮ್ಮನಹಳ್ಳಿಯಲ್ಲಿ ಘಟನೆ

By Gireesh Vasishta
ಮಧ್ಯಪಾನ ಮಾಡುವಾಗ ಜಗಳ: ಗುಂಪುಗಳ ನಡುವೆ ಮಾರಾಮಾರಿ: ಬೊಮ್ಮನಹಳ್ಳಿಯಲ್ಲಿ ಘಟನೆ

ಬೊಮ್ಮನಹಳ್ಳಿಯಲ್ಲಿ ಇದೇ ರೀತಿಯ ಘಟನೆ ನಡೆದಿದ್ದು ಬಾರ್‌ನಲ್ಲಿ ಮಧ್ಯಪಾನ ಮಾಡುವಾಗ ಕಿರಿಕ್ ಶುರುವಾಗಿದ್ದು ಎರಡು ಗುಂಪುಗಳ ನಡುವೆ ಮಾರಾಮಾರಿ ಆಗಿದೆ. ಗಾರ್ವೆಭಾವಿಪಾಳ್ಯದ ಹರೀಶ್ ಬಾರ್‌ನಲ್ಲಿ ಘಟನೆ ನಡೆದಿದ್ದು ಕಳೆದ 21ನೇ ತಾರೀಖಿನಂದು ಈ ಘಟನೆ ನಡೆದಿದೆ.

ಬೆಂಗಳೂರು: ಕೆಲವರಿಗೆ ಮದ್ಯಪಾನ ಮಾಡಿದ ನಂತರ ತಮ್ಮ ಮೇಲೆ ಪ್ರಜ್ಞೆಯೇ ಇರುವುದಿಲ್ಲ ಏನು ಮಾಡುತ್ತಿದ್ದೀವಿ ಎಂಬುದು ಸಹ ಅವರಿಗೆ ಅರಿವಿಗೆ ಬರುವುದಿಲ್ಲ. ಎಣ್ಣೆ ಹೊಟ್ಟೆಗೆ ಇಳಿಯುತ್ತಿದ್ದಂತೆ ನಾನೇ ಶಕ್ತಿವಂತ ಎಂಬ ಅಹಂ ಅವರಿಗೆ ಬಂದಂತೆ ಕಾಣುತ್ತದೆ ನಂತರ ಕಿರಿಕ್ ಮಾಡಲು ಶುರು ಮಾಡುತ್ತಾರೆ.ಇದನ್ನು ಓದಿ: ಲೋಹಿತಾಶ್ವನಿಗೆ ರೇಖಾ ಮೇಲೆ ಅನುಮಾನ: ಕೊನೆಗೆ ಕೊಲೆಯಲ್ಲಿ ಅಂತ್ಯ: ಅನುಮಾನಕ್ಕೆ ಮಹಿಳೆ ಬಲಿ!

ಬೊಮ್ಮನಹಳ್ಳಿಯಲ್ಲಿ ಇದೇ ರೀತಿಯ ಘಟನೆ ನಡೆದಿದ್ದು ಬಾರ್ನಲ್ಲಿ ಎಣ್ಣೆ ಹೊಡೆಯುವಾಗ ಕಿರಿಕ್ ಶುರುವಾಗಿದ್ದು ಎರಡು ಗುಂಪುಗಳ ನಡುವೆ ಮಾರಾಮಾರಿ ಆಗಿದೆ. ಗಾರ್ವೆಭಾವಿಪಾಳ್ಯದ ಹರೀಶ್ ಬಾರ್ನಲ್ಲಿ ಘಟನೆ ನಡೆದಿದ್ದು ಕಳೆದ 21ನೇ ತಾರೀಖಿನಂದು ಘಟನೆ ನಡೆದಿದೆ.

ಗೋಪಿ ಅಂಡ್ ಗ್ಯಾಂಗ್ ಮತ್ತು ಇನ್ನೊಂದು ಗ್ಯಾಂಗ್ ನಡುವೆ ಗಲಾಟೆ ನಡೆದಿದ್ದು ಕಂಠಪೂರ್ತಿ ಕುಡಿದು ಗಲಾಟೆ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ. ಬಾರ್ ಮುಂದೆ ಎರಡು ಗ್ಯಾಂಗ್ಗಳ ನಡುವೆ ಬಿಗ್ ಫೈಟ್ ನಡೆದಿದ್ದು ದೊಣ್ಣೆ ಮತ್ತು ಬಾಟಲಿಗಳಿಂದ ಹೊಡೆದಾಟ ಶುರುವಾಗಿದೆ.Handcuffs Backpacks Vegan Leather Casual Backpack Multipurpose Travelling Bags Daypacks For Men And Women

ನಡು ರಸ್ತೆಯಲ್ಲೇ ಅಟ್ಟಾಡಿಸಿಕೊಂಡು ಹೊಡೆದಾಡಿರುವ ಗ್ಯಾಂಗು ಜನರು ಓಡಾಡುತ್ತಿರುವಾಗಲೇ ಹೊಡೆದಾಟ ಮುಂದುವರೆದಿದ್ದು ವಾಹನಗಳ ಸಂಚಾರ, ಜನರ ಓಡಾಟದ ನಡುವೆಯೂ ಬಿಗ್ ಫೈಟ್ ಮಾಡಿದೆ. ಪುಂಡರ ಹಾವಳಿಗೆ ಅಲ್ಲಿನ ಸ್ಥಳಿಯರು ಬೆಚ್ಚಿಬಿದ್ದಿದ್ದಾರೆ. ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.