Skip to main content
ವಿಡಿಯೋ
1/2
local

ರಸ್ತೆಯಲ್ಲಿ ಸಾಗುವ ವೇಳೆ ಫೋನ್‌ ಬಳಸುವವರಿಗೆ ಎಚ್ಚರಿಕೆ: ಸ್ಕೂಟರ್‌ನಲ್ಲಿ ಬಂದು ಕೈಯಿಂದ ಮೊಬೈಲ್ ಕಸಿದುಕೊಳ್ತಾರೆ.!

By Shravanthi R
ರಸ್ತೆಯಲ್ಲಿ ಸಾಗುವ ವೇಳೆ ಫೋನ್‌ ಬಳಸುವವರಿಗೆ ಎಚ್ಚರಿಕೆ: ಸ್ಕೂಟರ್‌ನಲ್ಲಿ ಬಂದು ಕೈಯಿಂದ ಮೊಬೈಲ್ ಕಸಿದುಕೊಳ್ತಾರೆ.!

ನೀವು ಹೆಚ್ಚು ಮಗ್ನರಾಗಿ ಫೋನ್‌ನಲ್ಲಿರುವುದು ಕಡಿಮೆ ಮಾಡಬೇಕಿದೆ. ಇದರಿಂದ ಒದಗಿಬರುವ ಗಂಡಾಂತರದಿಂದ ತಪ್ಪಿಸಿಕೊಳ್ಳಬಹುದಾಗಿದೆ. ಪೊಲೀಸರು ಈ ರೀತಿಯ ಪ್ರಕರಣಗಳನ್ನು ತಡೆಯಲು ಎಲ್ಲೆಡೆ ಎಚ್ಚರಿಕೆ ನೀಡಿದ್ದು, ಗುಂಪು ಇರುವಲ್ಲೂ ಹಾಗೂ ನಿರ್ಜನ ಸ್ಥಳಗಳಲ್ಲಿ ಮೊಬೈಲ್ ಫೋನ್ ಬಳಸುವಾಗ ಹೆಚ್ಚು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.

ಬೆಂಗಳೂರು: ನೀವು ಮೊಬೈಲ್‌ ನೋಡಿಕೊಂಡು ಮೈಮರೆತು ಹೋಗುತ್ತಿದ್ದರೆ ಎಚ್ಚರ.. ನಗರದಲ್ಲಿ ಜನಸಾಮಾನ್ಯರು ಓಡಾಡುವುದು ಸಹಜ. ಹಾಗಂತ ಕೈಬೀಸಿಕೊಂಡು ಹೋಗುತ್ತಿದ್ದಾಗ ಸ್ಕೂಟರ್‌ನಲ್ಲಿ ಹಿಂದಿನಿಂದ ಬಂದು ಮೊಬೈಲ್ ಫೋನ್ ಕದೀತಾರೆ ಅಂದ್ರೆ ಸುಳ್ಳಲ್ಲ. ರಾಜಾಜಿನಗರದಲ್ಲಿ ಮೊಬೈಲ್‌ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ರಸ್ತೆ ಮದ್ಯೆ ಹೋಗುತ್ತಿರುವಾಗ ಮೊಬೈಲ್‌ ಕದ್ದು ಹೋಗಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎನ್ನಲಾಗಿದೆ.

ಇತ್ತೀಚೆಗೆ ನಗರದಲ್ಲಿ ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಇದೀಗ ಪೊಲೀಸರು ಈ ಸಂಬಂಧ ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಹೀಗೊಂದು ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಇಬ್ಬರು ಕಳ್ಳರನ್ನು ಪೋಲಿಸರು ಬಂಧಿಸಿದ್ದಾರೆ. ನಡುರಸ್ತೆಯಲ್ಲಿ ವಾಕ್‌ ಮಾಡುತ್ತಿದ್ದ ಸಂದರ್ಭದಲ್ಲಿ, ಯುವಕನಿಂದ ಕೈಯಲ್ಲಿ ಫೋನ್‌ ಹಿಡಿದಿದ್ದ ಕಸಿದುಕೊಂಡ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಪತ್ತೆಹಚ್ಚಿ ಪೋಲಿಸರು ಕಳ್ಳರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ಘಟನೆಯ ವಿವರ:

ರಾಜಾಜಿನಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರ ಚಲನವಲನದ ಮೇಲೆ ನಿಗಾ ಇರಿಸುತ್ತಿದ್ದ ಕಳ್ಳರು, ಸ್ಕೂಟರ್‌ನಲ್ಲಿ ಬಂದು, ಕದಿಯುವ ತಂತ್ರವನ್ನು ರೂಪಿಸಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ಫೋನ್‌ನಲ್ಲಿ ಮಾತನಾಡುತ್ತಿರುವಾಗ ಅಥವಾ ಫೋನ್ ಬಳಸುತ್ತಿರುವವರ ಕೈಯಿಂದ ಫೋನ್ ಕದ್ದು ಪರಾರಿಯಾಗುವುದು ಇವರ ಚಾಳಿಯಾಗಿತ್ತು ಎನ್ನಲಾಗಿದೆ. ಈ ರೀತಿಯ ಹಲವು ಘಟನೆಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದು, ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಕಳ್ಳರನ್ನು ಗುರುತಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ತಿಳಿಸಲಾಗಿದೆ. Shattered Lands : Five Partitions and the Making of Modern Asia Hardcover – 19 June 2025

ಸಾರ್ವಜನಿಕರಿಗೆ ಎಚ್ಚರಿಕೆ:

ನೀವು ಹೆಚ್ಚು ಮಗ್ನರಾಗಿ ಫೋನ್‌ನಲ್ಲಿರುವುದು ಕಡಿಮೆ ಮಾಡಬೇಕಿದೆ. ಇದರಿಂದ ಒದಗಿಬರುವ ಗಂಡಾಂತರದಿಂದ ತಪ್ಪಿಸಿಕೊಳ್ಳಬಹುದಾಗಿದೆ. ಪೊಲೀಸರು ಈ ರೀತಿಯ ಪ್ರಕರಣಗಳನ್ನು ತಡೆಯಲು ಎಲ್ಲೆಡೆ ಎಚ್ಚರಿಕೆ ನೀಡಿದ್ದು, ಗುಂಪು ಇರುವಲ್ಲೂ ಹಾಗೂ ನಿರ್ಜನ ಸ್ಥಳಗಳಲ್ಲಿ ಮೊಬೈಲ್ ಫೋನ್ ಬಳಸುವಾಗ ಹೆಚ್ಚು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ. ಹಾಗೆಯೇ, ಕಳವು ಘಟನೆಗಳು ನಡೆದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಬಂಧಿತರಿಂದ ವಶಪಡಿಸಿಕೊಂಡ ಮೊಬೈಲ್‌ಗಳ ವಿವರಗಳನ್ನು ಪಡೆಯಲಾಗುತ್ತಿದ್ದು, ಇದುವರೆಗೆ ಎಷ್ಟು ಮೊಬೈಲ್‌ಗಳನ್ನು ಕಳವು ಮಾಡಿದ್ದಾರೆ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಡಹಗಲಲ್ಲೇ ಮಹಿಳೆಗೆ ಚಾ**ಕುವಿನಿಂದ ಇರಿದು ಆರೋಪಿ ಪರಾರಿ.!