Skip to main content
ವಿಡಿಯೋ
1/2
crime

ಇಂದು ಬೆಳ್ತಂಗಡಿ ಕೋರ್ಟ್‌ ಮುಂದೆ ಆರೋಪಿ ಚಿನ್ನಯ್ಯ ಹಾಜರ್‌…!!

By Pavitra Ganapathi Baradavalli
ಇಂದು ಬೆಳ್ತಂಗಡಿ ಕೋರ್ಟ್‌ ಮುಂದೆ ಆರೋಪಿ ಚಿನ್ನಯ್ಯ ಹಾಜರ್‌…!!

ಆರೋಪಿ ಚಿನ್ನಯ್ಯ ಇಂದು ನ್ಯಾಯಾಲಕ್ಕೆ ಹಾಜರುಪಡಿಸಲಿರುವ ಎಸ್‌ಐಟಿ. ಇಂದು ಬೆಳ್ತಂಗಡಿ ಕೋರ್ಟ್‌ಗೆ ಮಾಸ್ಕ್‌ ಮ್ಯಾನ್‌ ಅನ್ನು ಇಂದು ಹಾಜರುಪಡಿಸಲಿದ್ದಾರೆ. BNSS 183ರ ಅಡಿಯಲ್ಲಿ ಇಂದು ಕೋರ್ಟ್‌ನಲ್ಲಿ ಚಿನ್ನಯ್ಯನ ಹೇಳಿಕೆ ದಾಖಲಾಗಲಿದೆ.ಇಂದು ಸ್ವತಃ ಚಿನ್ನಯ್ಯ ನ್ಯಾಯಾಧೀಶರ ಎದುರಿಗೆ ಹೇಳಿಕೆ ದಾಖಲಿಸಲಿದ್ದಾನೆ.

ಆರೋಪಿ ಚಿನ್ನಯ್ಯ ಇಂದು ನ್ಯಾಯಾಲಕ್ಕೆ ಹಾಜರುಪಡಿಸಲಿರುವ ಎಸ್‌ಐಟಿ. ಇಂದು ಬೆಳ್ತಂಗಡಿ ಕೋರ್ಟ್‌ಗೆ ಮಾಸ್ಕ್‌ ಮ್ಯಾನ್‌ ಅನ್ನು ಇಂದು ಹಾಜರುಪಡಿಸಲಿದ್ದಾರೆ. BNSS 183ರ ಅಡಿಯಲ್ಲಿ ಇಂದು ಕೋರ್ಟ್‌ನಲ್ಲಿ ಚಿನ್ನಯ್ಯನ ಹೇಳಿಕೆ ದಾಖಲಾಗಲಿದೆ.ಇಂದು ಸ್ವತಃ ಚಿನ್ನಯ್ಯ ನ್ಯಾಯಾಧೀಶರ ಎದುರಿಗೆ ಹೇಳಿಕೆ ದಾಖಲಿಸಲಿದ್ದಾನೆ. ಮಧ್ಯಾಹ್ನ 12 ಗಂಟೆಗೆ ಚಿನ್ನಯ್ಯನನ್ನು  ಕೋರ್ಟ್‌ಗೆ ಕರೆತರಲಿರೋ ಎಸ್‌ಐಟಿ ಅಧಿಕಾರಿಗಳು.ಇದನ್ನೂ ಓದಿ: ದೆಹಲಿಯಲ್ಲಿ ರಾಮಲೀಲಾ, ದುರ್ಗಾಪೂಜೆಗೆ ಮಧ್ಯರಾತ್ರಿಯವರೆಗೆ ಅನುಮತಿ: ಸಿಎಂ ರೇಖಾ ಗುಪ್ತಾ..!


ಸದ್ಯ ಶಿವಮೊಗ್ಗ ಜೈಲಿನಲ್ಲಿರೋ ಬುರುಡೆ ಆರೋಪಿ ಚಿನ್ನಯ್ಯನನ್ನು ಸರಿಯಾಗಿ 12 ಗಂಟೆಗೆ ಕೋರ್ಟ್‌ ಮುಂದೆ ಹಾಜರುಪಡಿಸಲಿದ್ದಾರೆ. 183 ನೇ ಸ್ಟೇಟ್‌ಮೆಂಟ್‌ನಲ್ಲಿ ಹಲವಾರು ವಿಚಾರಗಳು ಬಾಕಿ ಇವೆ. ಈ ಎಲ್ಲಾ ಹೇಳಿಕೆಯನ್ನು ದಾಖಲಿಸಿದ ಬಳಿಕ ಮತ್ತೆ ಚಿನ್ನಯ್ಯನನ್ನು ಶಿವಮೊಗ್ಗ ಜೈಲಿಗೆ ವಾಪಸ್‌ ಆಗಲಿದ್ದಾನೆ. ಇಂದು ಚಿನ್ನಯ್ಯ ನೀಡು ಹೇಳಿಕೆಯತ್ತ ಎಲ್ಲರ ಚಿತ್ತ ಉಂಟಾಗಲಿದೆ. ಚಿನ್ನಯ್ಯ ಹೇಳಿಕೆ ಕೊಟ್ಟ ಬಳಿಕ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಯಲಿದೆ. ಎಸ್‌ಐಟಿ ಎದುರು ಕೊಟ್ಟ ಹೇಳಿಕೆಯನ್ನೇ ಚಿನ್ನಯ್ಯ ಕೊಡ್ತಾನಾ ಅನ್ನುವಂತ ಕುರಿತು ಈಗ ಎಲ್ಲರಲ್ಲಿ ಕುತೂಹಲ ಮೂಡಿದೆ.ಇದನ್ನೂ ಓದಿ: ಬಂಗಾರದ ಏರಿಕೆ: ಚಿನ್ನ, ಬೆಳ್ಳಿ ಬೆಲೆ ದಾಖಲೆ ಸೃಷ್ಟಿಸಿವೆ..!

ಚಿನ್ನಯ್ಯ ಕೋರ್ಟ್‌ ಮುಂದೆ ನೀಡೋ ಹೇಳಿಕೆಯನ್ನ ಆಧರಿಸಿ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆ.ಎಸ್‌ಐಟಿ ಎದುರು ಕೊಟ್ಟ ಹೇಳಿಕೆಯನ್ನ ನ್ಯಾಯಾಲಯದ ಎದುರು ಕೊಟ್ಟರೆ ಮುಂದೇನೂ ಎನ್ನುವುದರ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಜೊತೆಗೆ ಚಿನ್ನಯ್ಯ ಕೊಡುವ ಹೇಳಿಕೆಯಲ್ಲಿ ಬದಲಾದ್ರೆ ಮುಂದೇನು ಅನ್ನೋದರ ಬದಲು ಚರ್ಚೆ ನಡೆಯುವ ಸಾಧ್ಯತೆ ಇದೆ.ಸಭೆ ಬಳಿಕವೇ ಎಸ್‌ಐಟಿ ಮುಂದಿನ ತನಿಖೆಯ ಹಂತಗಳ ಕುರಿತು ನಿರ್ಧಾರವಾಗಲಿದೆ.
ಇದನ್ನೂ ಓದಿ: ವಿಪತ್ತು ನಿರ್ವಹಣೆಗೆ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ...ತ್ವರಿತ ವ್ಯವಸ್ಥೆ ರೂಪಿಸಲು ನಿಯೋಜನೆ!


ಅದುವರೆಗೂ ಯಾವೂದೇ ನಿರ್ಧಾರ ಕೈಗೊಳ್ಳದಂತೆ ಸೂಚನೆ ನೀಡಲಾಗಿದೆ.ಬೆಂಗಳೂರಿನಲ್ಲಿ ಎಸ್‌ಐಟಿ ಮುಖ್ಯಸ್ಥರಿಂದ ಸರ್ಕಾರದ ಮಟ್ಟದ ಸಭೆ ನಡೆಯಲಿದೆ. ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್‌ ಸೇರಿ ಉನ್ನತ ಮಟ್ಟದ ಅಧಿಕಾರಿಗಳಿಂದ ಸಭೆ ನಡೆಯಲಿದೆ.ಸಭೆಯ ನಿರ್ಧಾರ ಸರ್ಕಾರದ ಸೂಚನೆ ಬಳಿಕ ಮುಂದಿನ ಹಂತ ಏನೂ ಎಂಬುದರ ಕುರಿತು ಚರ್ಚೆ ಸಾಧ್ಯತೆ. ತನಿಖೆಗೆ ತಾರ್ಕಿಕ ಅಂತ್ಯ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ಸಾಧ್ಯತೆ.
NOBERO Men's Cotton Solid Regular Fit Polo Shirt